Advertisements

ಅಕಸ್ಮಾತ್ತಾಗಿ ಬಸ್ ನಲ್ಲಿ ಸಿಕ್ಕ ಒಂದು ಲಕ್ಷ ಹಣವನ್ನು ಈ ಕಂಡಕ್ಟರ್ ಮಾಡಿದ್ದೇನು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಅಕಸ್ಮಾತ್ ಯಾರಿಗಾದರೂ ದುಡ್ಡು ಸಿಕ್ಕಿದ್ರೆ ಏನು ಮಾಡ್ತಾರೆ ಜೋಬಿಗೆ ಬಿಟ್ಟುಕೊಂಡು ಸುಮ್ಮನೆ ಹೋಗಿಬಿಡುತ್ತಾರೆ.. ಆದರೆ ಇನ್ನೂ ಕೆಲವರು ಆ ಹಣ ನಮಗೆ ಸೇರಿದ್ದಲ್ಲ ಎಂದು ವಿಚಾರಿಸಿ ಕೊಡುತ್ತಾರೆ.. ಅದರಲ್ಲೂ ಲಕ್ಷಗಟ್ಟಲೆ ಹಣ ಸಿಕ್ಕಿಬಿಟ್ರೆ ಮನುಷ್ಯ ನೂರಾರು ರೀತಿ ಯೋಚನೆ ಮಾಡುತ್ತಾನೆ.. ಕೊಡುವುದೋ ಬೇಡವೋ ಎಂದು.. ಇನ್ನೂ ಈ ಸಮಯದಲ್ಲೂ ಕೂಡ ಪ್ರಾಮಾಣಿಕತೆಯನ್ನು ಮೇರೆಯುವವರು ಕೂಡ ಕೆಲವರು ಇರುತ್ತಾರೆ ಅನ್ನುವುದಕ್ಕೆ ಸಾಕ್ಷಿ ಈ ಬಸ್ ನ ಕಂಡಕ್ಟರ್.. ಹೌದು ಸ್ನೇಹಿತರೆ ಇಲ್ಲೊಬ್ಬ ಕಂಡಕ್ಟರ್ ಬಸ್ ನಲ್ಲಿ ಸಿಕ್ಕ ಒಂದು ಲಕ್ಷ ಹಣವನ್ನು ಸಂಬಂಧ ಪಟ್ಟವರಿಗೆ ತಲುಪಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

Advertisements

ಸುಭದ್ರ ಎಂಬ ಪ್ರಯಾಣಿಕರು ಎಷ್ಟಿ ಮಾಲ್ ಬಳಿ ಬಸ್ ಇಳಿಯುವಾಗ ಹಣದ ಬ್ಯಾಗ್ ಅನ್ನು ಬಸ್ ನಲ್ಲಿಯೇ ಮರೆತು ಬಿಟ್ಟು ಹೋಗಿದ್ದಾರೆ.. ಇನ್ನೂ ಆ ಬ್ಯಾಗ್ ಅನ್ನು ‌ನೋಡಿ ಪರಿಶೀಲನೆ ಮಾಡಿದ ಕಂಡಕ್ಟರ್ ಯಲ್ಲಪ್ಪ ಅವರಿಗೆ ಹಣ ಇರುವುದು ಕಂಡುಬಂದಿದೆ. ಇನ್ನು ಸುಭದ್ರ ಅವರಿಗೆ ಹಣದ ಬ್ಯಾಗ್ ನೆನಪಾಗುತ್ತದೆ.. ಆದರೆ ಅಷ್ಟರಲ್ಲೇ ಬಸ್ ಕೂಡ ಬಹಳ ದೂರವಾಗಿತ್ತು.. ನಂತರ ಸುಭದ್ರಾ ಅವರು ಆ ಬಸ್ ನ ಕಂಡಕ್ಟರ್ ಯಲ್ಲಪ್ಪ ಅವರ ನಂಬರ್ ಅನ್ನು ಹೇಗೋ ಪಡೆದುಕೊಂಡು ವಿಚಾರಿಸುತ್ತಾರೆ..

ಹಣದ ಬ್ಯಾಗ್ ಸುರಕ್ಷಿತವಾಗಿ ಇದೆ ಎಂದ ತಕ್ಷಣ ಸುಭದ್ರಾ ಅವರು ನಿಟ್ಟುಸಿರು ಬಿಟ್ಟಿದ್ದಾರೆ.. ನಂತರ ನೆಕ್ಸ್ಟ್ ಸ್ಟಾಪ್ ನಲ್ಲಿ ಬಸ್ ನಿಲ್ಲಿಸಿಕೊಂಡು ಸುಭದ್ರಾ ಅವರಿಗೆ ಕಂಡಕ್ಟರ್ ಯಲ್ಲಪ್ಪ ಅವರು ಹಣದ ಬ್ಯಾಗ್ ಅನ್ನು ಕೊಟ್ಟಿದ್ದಾರೆ.. ನಂತರ ಸುಭದ್ರಾ ಅವರು ಈ ಹಣ ಸಿಕ್ಕದೇ ಹೋಗದಿದ್ದರೆ ಬಹಳ ಕಷ್ಟ ಎದುರಾಗುತ್ತಿತ್ತು ನೀವು ಮಾಡಿದ ಈ ಸಹಾಯ ಎಂದಿಗೂ ಮರೆಯೋದಿಲ್ಲ ಎಂದು ಧನ್ಯವಾದವನ್ನು ತಿಳಿಸಿದ್ದಾರೆ.. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.