Advertisements

ಬಸ್ ನಲ್ಲಿ ತಪ್ಪಿಸಿಕೊಂಡಿದ್ದ 6 ವರ್ಷದ ಹೆಣ್ಣು ಮಗುವಿಗೆ ಕಂಡಕ್ಟರ್ ಎಂಥಹ ಕೆಲಸ ಮಾಡಿದ್ದಾರೆ ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ, ಕೇರಳಕ್ಕೆ ಸೇರಿದಂತಹ ಈ ಕಂಡಕ್ಟರ್ ಮಾಡಿದ ಕೆಲಸ ಬಹಳ ವೈರಲ್ ಆಗಿದ್ದು ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.. ಅಷ್ಟಕ್ಕೂ ಈತ ಮಾಡಿದ್ದೇನು ಎಂಬುದನ್ನ ತಿಳಿಯೋಣ.. ಸಂತೋಷ್ ಎಂಬ ಈ ವ್ಯಕ್ತಿ ಬಹಳ ವರ್ಷಗಳಿಂದ ಕೇರಳದಲ್ಲಿ ಬಸ್ ಕಂಡಕ್ಟರ್ ಹಾಗಿ ಕೆಲಸ ಮಾಡುತ್ತಿದ್ದಾನೆ.. ಸಂತೋಷ್ ಅವರು ಎಷ್ಟು ನಿಯತ್ತಾಗಿದ್ದರು ಎಂದರೆ ಜೀವನದಲ್ಲಿ ಒಂದು ಬಾರಿಯೂ ಸಹ ಪ್ರಯಾಣಿಕರಿಗೆ ಟಿಕೇಟ್ ಕೊಡದೆ ಹಣ ಪಡೆದಿಲ್ಲ.. ಇನ್ನು ಸಂತೋಷ್ ಪ್ರತಿದಿನ ಕೆಲಸಕ್ಕೆ ಹೋಗುವ ಮೊದಲು ರೆಡಿಯಾಗಿ ಕಂಡಕ್ಟರ್ ಡ್ರಸ್ ಅನ್ನು ಹಾಕಿಕೊಂಡು ಹೋಗುವಾಗೆ ಆ ದಿನವೂ ಕೂಡ ಖಾಕಿ ಡ್ರೆಸ್ ಹಾಕಿಕೊಂಡು ರೆಡಿಯಾಗಿ ಕೆಲಸಕ್ಕೆ ಬರುತ್ತಾರೆ..

Advertisements

ಸಂತೋಷ್ ಅವರು ಪ್ರಯಾಣಿಕರಿಗೆ ಟಿಕೇಟ್ ಕೊಡುವಲ್ಲಿ ನಿರತರಾಗುತ್ತಾರೆ.. ಮಧ್ಯಾಹ್ನದ ಊಟದ ವೇಳೆಗೆ ಬಸ್ ಸೈಡಿಗೆ ನಿಲ್ಲಿಸಿ ಹೋಟೆಲ್ ಗೆ ಹೋಗಬೇಕು ಎನ್ನುವಷ್ಟರಲ್ಲಿ ಬಸ್ ನ ಹಿಂದಿನ ಸೀಟಿನಲ್ಲಿ ಏನೋ ಶಬ್ದ ಹಾಗುತ್ತಿರುವಾಗೆ ಸಂತೋಷ್ ಅವರಿಗೆ ಕೇಳಿಸುತ್ತದೆ.. ಇನ್ನೂ ಕೊನೆಯ ಸೀಟಿನಲ್ಲಿ ಏನೋ ಶಬ್ದವಾಗುತ್ತಿದೆಯೆಲ್ಲಾ ಎಂದು ಬಂದು ನೋಡಿದ ಸಂತೋಷ್ ಅವರು ಒಂದು ಕ್ಷಣ ಬೆರಗಾಗುತ್ತಾರೆ.. ಹೌದು ಸ್ನೇಹಿತರೆ ಕೊನೆಯ ಸೀಟಿನಲ್ಲಿ ಆರು ವರ್ಷದ ಮಗುವೊಂದು ಮಲಗಿರುತ್ತದೆ.. ಬಸ್ ನಲ್ಲಿ ಒಬ್ಬ ಪ್ರಯಾಣಿಕರು ಸಹ ಇಲ್ಲ ಈ ಮಗು ಯಾರದ್ದು, ಯಾಕೆ ಈ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಸಂತೋಷ್ ಮತ್ತು ಡ್ರೈವರ್ ಮಾತಾಡಿಕೊಳ್ಳುತ್ತಾರೆ..

ನಂತರ ಮಗುವನ್ನು ಏಳಿಸಿ ನಿನ್ನ ಹೆಸರೇನು, ಯಾಕೆ ಇಲ್ಲಿ ಮಲಗಿದ್ದೀಯಾ. ನಿನ್ನ ಊರು ಯಾವುದು.. ಎಂದು ವಿಚಾರಣೆ ಮಾಡುತ್ತಾರೆ. ಈ ಮಾತುಗಳನ್ನು ಕೇಳಿದ ಮಗು ಅಳಲು ಶುರುಮಾಡಿ ಅಂಕಲ್ ನನ್ನ ಹೆಸರು ರಂಜಿನಿ ಆದರೆ ನನಗೆ ಮನೆ ಎಲ್ಲಿದೆ ಅಂತ ಗೊತ್ತಿಲ್ಲ ಎಂದು ಹೇಳುತ್ತದೆ. ಸರಿ ಹೋಗಲಿ ನಿಮ್ಮ ತಂದೆ ತಾಯಿಯ ಪೋನ್ ನಂಬರ್ ಇದ್ದರೆ ಹೇಳು ಎಂದು ಸಂತೋಷ್ ಮಗುವಿಗೆ ಕೇಳಿದಾಗ ರಂಜಿನಿ ನೆನಪುಮಾಡಿಕೊಳ್ಳುತ್ತಾ ತಂದೆ ಮೊಬೈಲ್ ನ ಒಂಬತ್ತು ಸಂಖ್ಯೆ ಮಾತ್ರ ಹೇಳುತ್ತಾಳೆ.. ನಂತರ ಮೊಬೈಲ್ ನಿಂದ ಮಗು ಹೇಳಿದ ಒಂಬತ್ತು ನಂಬರ್ ಅನ್ನು ಮೊದಲು ಡಯಲ್ ಮಾಡಿ ಕೊನೆಯ ಸಂಖ್ಯೆಯನ್ನು ಸೊನ್ನೆಯಿಂದ ಒಂಬತ್ತರವೆರೆಗೆ ಡಯಲ್ ಮಾಡಿ ನಿಮ್ಮ ಮಗಳು ಕಳೆದು ಹೋಗಿದ್ದಾಳಾ ಎಂದು ಪ್ರತಿಯೊಬ್ಬರಿಗೂ ಸಂತೋಷ್ ಕೇಳುತ್ತಿರುತ್ತಾರೆ..

ಆಕಡೆ ಡ್ರೈವರ್ ನಮಗೆ ಯಾಕೆ ಬೇಕು ಇದೆಲ್ಲಾ ಪೋಲಿಸ್ ಸ್ಟೇಷನ್ ನಲ್ಲಿ ಈ ಮಗುವನ್ನು ಬಿಟ್ಟರೆ ಆಯಿತು ಎಂದು ಹೇಳುತ್ತಾರೆ.. ಆದರೆ ಇದಕ್ಕೆ ಕಿವಿ ಕೊಡದ ಸಂತೋಷ್ ಕರೆಗಳನ್ನು ಮಾಡಿ ಪ್ರಯತ್ನ ಪಡುತ್ತಿರುತ್ತಾರೆ.. ಕೊನೆಗೆ ಒಂದು ಪೋನ್ ಕಾಲ್ ನಲ್ಲಿ ಹೌದು ಸರ್ ನನ್ನ ಹೆಣ್ಣು ಮಗು ರಜಿನಿ ಕಳೆದು ಹೋಗಿದ್ದಾಳೆ ಎಂದು ಒಬ್ಬ ವ್ಯಕ್ತಿ ಹೇಳುತ್ತಾನೆ.. ನನ್ನ ಪತ್ನಿ ಮಗುವನ್ನು ಮಾವನ ಮನೆಯಿಂದ ಬಸ್ ನಲ್ಲಿ ಕರೆದುಕೊಂಡು ಬರುತ್ತಿದ್ದೆ.. ಮಧ್ಯ ದಾರಿಯಲ್ಲಿ ಮಗು ಮಲಗಿದ್ದ ಕಾರಣ ಮಲಗಿಸಲು ಹಿಂದೆಯ ಸೀಟಿನಲ್ಲಿ ಮಲಗಿಸಿದ್ದೆ.. ಆದರೆ ಬಸ್ ನಿಂದ ಇಳಿಯುವ ಅರ್ಜೆಂಟ್ ನಲ್ಲಿ ಮಗುವನ್ನ ಮರೆತು ಹೋದೆ ದಯವಿಟ್ಟು ಎಲ್ಲಿದ್ದಾಳೆ ನಮ್ಮ ಮಗು ಹೇಳಿ ಎಂದು ಹೆಳುತ್ತಾನೆ..

ಆಗ ಕಂಡಕ್ಟರ್ ನಿಮ್ಮ ಮನೆಯ ಅಡ್ರೆಸ್ ಕೊಡಿ ಮಗುವನ್ನು ಅಲ್ಲಿಗೆ ತಂದುಬಿಡುತ್ತೇವೆ ಎಂದು ಹೆಳುತ್ತಾರೆ.. ಆಗ ಮಗುವಿನ ತಂದೆ 100 ಕಿಲೋಮೀಟರ್ ನಷ್ಟು ದೂರ ಇರುವ ಅಡ್ರೆಸ್ ಕೊಡುತ್ತಾನೆ.. ನಂತರ ಆ ಮಗುವನ್ನು ಸುರಕ್ಷಿತವಾಗಿ ತಂದೆ ತಾಯಿಯ ಕೈಗೆ ಸಂತೋಷ್ ಅವರು ಸೇರಿಸುತ್ತಾರೆ.. ಮಗುವಿನ ತಂದೆ ಸಂತೋಷ್ ಅವರಿಗೆ ಧನ್ಯವಾದವನ್ನು ತಿಳಿಸಿ ಹಣವನ್ನು ಕೊಡಲು ಮುಂದಾಗುತ್ತಾರೆ ಆದರೆ ಹಣವನ್ನು ತಿರಸ್ಕರಿಸಿದ ಸಂತೋಷ್ ನಾನು ಮಾನವೀಯತೆ ದೃಷ್ಟಿಯಿಂದ ಈ ಕೆಲಸ ಮಾಡಿದೆ ಎಂದು ತಿಳಿಸಿ ಅಲ್ಲಿಂದ ಹೊರಟು ಹೋಗುತ್ತಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..