ನಮಸ್ತೆ ಸ್ನೇಹಿತರೆ, ಪ್ರಾಣಿಗಳಿಗೆ ಯಾರಾದರು ಸಹಾಯವನ್ನ ಮಾಡಿದರೆ ಅವರ ಸಹಾಯವನ್ನು ಎಂದಿಗೂ ಕೂಡ ಮರಿಯೋದಿಲ್ಲ.. ಇದಕ್ಕೆ ಉದಾಹಾರಣೆಯಾಗಿ ಅನೇಕ ಘಟನೆಗಳನ್ನು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ. ಇದೇ ರೀತಿ ಈ ಒಂದು ಬೆಕ್ಕು ತನಗೆ ಸಹಾಯ ಮಾಡಿದವರಿಗೆ ಎಂತಹ ಕೆಲಸ ಮಾಡಿದೆ ಗೊತ್ತಾ? ಡೌನ್ ಟೌನ್ ನಲ್ಲಿ ವಾಸಿಸುತ್ತಿರುವ ಸ್ಟುವರ್ಟ್ ಮ್ಯಾಗ್ ಡೊನಾಲ್ಟ್ ಒಂದು ದೊಡ್ಡ ಮಾರ್ಕೆಟಿಂಗ್ ಕಂಪನಿಯ ಮಾಲೀಕ.. ಇನ್ನೂ ಸ್ಟುವರ್ಟ್ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಒಂದು ಅನಾಥ ಬೆಕ್ಕೊಂದು ಕೂತಿರುವುದು ಕಣ್ಣಿಗೆ ಬೀಳುತ್ತದೆ. ಇನ್ನೂ ಈ ಬೆಕ್ಕು ನೋಡಲು ತುಂಬ ಸುಂದರವಾಗಿರುತ್ತದೆ.. ಆದರೆ ಇದಕ್ಕೆ ಸರಿಯಾಗಿ ಊಟವಿಲ್ಲದೆ ಅನಾಥವಾಗಿರುತ್ತದೆ.

ಇದನ್ನು ನೋಡಿದ ಸ್ಟುವರ್ಟ್ ಆ ಬೆಕ್ಕನ್ನು ಎತ್ತಿಕೊಂಡು ಆಫಿಸ್ ಗೆ ಬರುತ್ತಾರೆ.. ಇನ್ನೂ ಆಪೀಸ್ ನಲ್ಲಿ ಈ ಬೆಕ್ಕನ್ನು ಪ್ರೀಯಾಗಿ ಓಡಾಡಲು ಬಿಡುತ್ತಾರೆ.. ಈ ಬೆಕ್ಕು ಒಂದು ಕಡೆ ನಿಲ್ಲದೇ ಆಕಡೆಯಿಂದ ಈಕಡೆಗೆ ಹೋಡಾಡುತಿತ್ತು. ಒಮ್ಮೊಮ್ಮೆ ಆಪೀಸ್ ನ ಕಂಪ್ಯೂಟರ್ ನ ಕೀಬೋರ್ಡ್ ಮೇಲೆ ಓಡಾಡಿದರೆ ಮತ್ತೊಮ್ಮೆ ಮಾನಿಟರ್ ಸ್ಕ್ರೀನ್ ಅನ್ನು ಗುರಾಯಿಸುತ್ತಾ ಈ ಬೆಕ್ಕು ಕೂತಿರುತ್ತಿತ್ತು.. ಇನ್ನೂ ಈ ಬೆಕ್ಕು ನೋಡು ನೋಡುತ್ತಾಲೆ ಆಪಿಸ್ ಅವರಿಗೆ ತುಂಬಾ ಹತ್ತಿರವಾಗುತ್ತದೆ.. ಅವರು ಕೂಡ ಇದನ್ನು ಇಷ್ಟಪಡಲು ಶುರುಮಾಡುತ್ತಾರೆ. ಬೆಕ್ಕಿಗೆ ಸ್ಟುವರ್ಟ್ ಆಪಿಸ್ ಮನೆಯಂತೆ ಆಗಿಬಿಡುತ್ತದೆ.. ಆಫಿಸ್ ಕ್ಲೋಸ್ ಮಾಡುವ ಸಮಯದಲ್ಲಿ ಈ ಬೆಕ್ಕಿಗೆ ಊಟವನ್ನು ಹಾಕಿ ಹೊಳಗೆ ಬಿಟ್ಟು ಹೋಗುತ್ತಿದ್ದರು. ಇದೇ ರೀತಿ ಪ್ರತಿದಿನ ನಡೆಯುತ್ತದೆ..

ಒಂದು ದಿನ ಸ್ಟುವರ್ಟ್ ಆಪಿಸ್ ಮೇನ್ ಡೋರ್ ಓಪನ್ ಮಾಡಿ ನೋಡಿದರೆ ಆ ಬೆಕ್ಕು ಗ್ಲಾಸಿನ ಕಿಟಕಿಯ ಮುಂದೆ ಕೂತಿರುತ್ತದೆ. ಆದರೆ ಅಲ್ಲಿ ಒಂದು ಅಚ್ಚರಿ ನಡೆದಿರುತ್ತದೆ.. ಅದೇನೆಂದರೆ ಆ ಬೆಕ್ಕಿನ ಸುತ್ತ ಹಣದ ನೋಟುಗಳು ಬಿದ್ದಿರುತ್ತವೆ. ಕೆಲವೇ ಕ್ಷಣಗಳಲ್ಲಿ ಆಪೀಸ್ ನ ಕೆಲಸಗಾರರು ಬರುತ್ತಾರೆ.. ಇದನ್ನು ನೊಡಿದ ಸ್ಟುವರ್ಟ್ ಈ ಹಣ ಯಾರ್ದು ಎಂದು ಕೇಳುತ್ತಾರೆ. ಆಗ ಕೆಲಸಗಾರರು ಈ ಹಣ ನಮ್ಮದಲ್ಲ ಎಂದು ಹೇಳುತ್ತಾರೆ.. ಇದರಿಂದ ತಲೆಕೆಡಸಿಕೊಂಡ ಸ್ಟುವರ್ಟ್ ಈ ಹಣ ಯಾರ್ದು ಬೆಕ್ಕಿನ ಪಕ್ಕದಲ್ಲಿ ಹೇಗೆ ಬಂತು ಎಂದು ಯೋಚನೆ ಮಾಡುತ್ತಾರೆ.. ಇನ್ನೂ ಇದೇ ರೀತಿ ಮರುದಿನವೂ ಕೂಡ ನಡೆಯುತ್ತದೆ, ಬೆಕ್ಕಿನ ಪಕ್ಕದಲ್ಲಿ ಸಾಕಷ್ಟು ಹಣದ ನೋಟುಗಳು ಇರುತ್ತವೆ. ಇದರಿಂದ ಸ್ಟುವರ್ಟ್ ಇನ್ನಷ್ಟು ಚಿಂತೆಗೆ ಹೊಳಗಾಗುತ್ತಾನೆ.. ಪ್ರತಿದಿನವೂ ಕೂಡ ಇದೇ ರೀತಿ ನಡೆಯುತ್ತಿರುತ್ತದೆ.

ಇದನ್ನು ಗಮನಿಸಿದ ಸ್ಟುವರ್ಟ್ ಈ ಬೆಕ್ಕಿನ ರಹಸ್ಯ ಏನು ಎಂದು ತಿಳಿದುಕೊಳ್ಳಲು ಆ ಬೆಕ್ಕು ಇರುತ್ತಿದ್ದ ಜಾಗದಲ್ಲಿ ಕ್ಯಾಮರಾವನ್ನು ಪಿಕ್ಸ್ ಮಾಡಿಸಿದ.. ನಂತರ ಮರುದಿನ ಸ್ಟುವರ್ಟ್ ಬಂದು ನೋಡಿದಾಗ ಎಂದಿನಂತೆ ಆ ದಿನವೂ ಕೂಡ ಬೆಕ್ಕಿನ ಪಕ್ಕದಲ್ಲಿ ಹಣ ಇರುತ್ತಿತ್ತು. ತಕ್ಷಣ ಸಿಸಿ ಟೀವಿಯನ್ನು ಚೆಕ್ ಮಾಡಿದ ಸ್ಟುವರ್ಟ್ ಗೆ ಒಂದು ಅಚ್ಚರಿ ಎದುರಾಗಿತ್ತು.. ಹೌದು ಸ್ಟುವರ್ಟ್ ಆಫಿಸ್ ಬಾಗಿಲನ್ನು ಹಾಕಿಕೊಂಡು ಹೋದಮೇಲೆ ಗಾಜಿನ ಕಿಟಕಿಯಲ್ಲಿ ಬರುತ್ತಿದ್ದ ಈ ಬೆಕ್ಕು ರಸ್ತೆಯ ಮೇಲೆ ಹೋಡಾಡುತ್ತಿದ್ದ ಜನಗಳನ್ನು ಆಕರ್ಶಿಸಿ ನೃತ್ಯ ಮಾಡಿ ಅವರಿಗೆಲ್ಲಾ ರಂಜಿಸುತ್ತಿತ್ತು.. ಬೆಕ್ಕಿನ ಆಟವನ್ನು ನೋಡಿ ಖುಷಿ ಪಡುತ್ತಿದ್ದ ಜನಗಳು ಪ್ರೀತಿಯಿಂದ ತಮ್ಮ ಬಳಿ ಇದ್ದ ಹಣವನ್ನು ಆ ಬೆಕ್ಕಿಗೆ ಗ್ಲಾಸಿನ ಕಿಟಕಿಯಲ್ಲಿ ಮಧ್ಯದಲ್ಲಿ ಇದ್ದಂತಹ ಸಂಧಿಯ ಮೂಲಕ ದುಡ್ಡು ಕೊಡುತ್ತಿದ್ದರು.

ಜನಗಳು ಎಷ್ಟೇ ಹಣ ಕೊಟ್ಟರು ಈ ಬೆಕ್ಕು ತನ್ನ ಬಾಯಿಯ ಮೂಲಕ ಅದನ್ನು ಪಡೆದು ಪುನಃ ಅಮಾಯಕರಂತೆ ವರ್ತಿಸುತ್ತಿತ್ತು.. ಇದನ್ನು ನೋಡುತ್ತಿದ್ದ ಜನಗಳು ಕೂಡ ಸಾಕಷ್ಟು ಹಣವನ್ನು ತೆಗೆದು ಈ ಬೆಕ್ಕಿಗೆ ನೀಡುತ್ತಿದ್ದರು. ಜನಗಳು ಗ್ಲಾಸಿನ ಸಂದಿಯಲ್ಲಿ ಬೆಕ್ಕಿಗೆ ಹಣ ಕೊಡಲು ಮುಂದೆ ಹೋಗಿ ತಮಾಷೆಗಾಗಿ ಹಣವನ್ನು ವಾಪಸ್ ತೆಗೆದುಕೊಳ್ಳಲು ಹೋಗುತ್ತಿದ್ದರು.. ಆಗ ಜನ ಹಣವನ್ನು ವಾಪಸ್ ಎಳೆದುಕೊಳ್ಳುವ ಮುಂಚೆಯೇ ಈ ಬೆಕ್ಕು ಹಣವನ್ನು ಹಿಡಿದುಕೊಂಡು ತನ್ನ ಕಡೆಗೆ ಕಿತ್ತುಕೊಳ್ಳುತ್ತಿತ್ತು. ಇದೇ ರೀತಿ ಆಟವಾಡಲು ಜನಗಳು ಗ್ಲಾಸಿನ ಕಿಟಕಿಯ ಮುಂದೆ ಪ್ರತಿದಿನವೂ ಕ್ಯೂ ನಿಲ್ಲುತ್ತಿದ್ದರು.. ಇದೇ ಕಾರಣಕ್ಕೆ ಸ್ಟುವರ್ಟ್ ಆಪೀಸ್ ಓಪನ್ ಮಾಡಿದಾಗ ಬೆಕ್ಕಿನ ಪಕ್ಕದಲ್ಲಿ ಹಣದ ನೋಟುಗಳು ಇರುತ್ತಿದ್ದವು.. ಈಗ ಈ ಬೆಕ್ಕಿನ ಪೊಟೊಗಳು ಸಾಕಷ್ಟು ವೈರಲ್ ಆಗಿದೆ.