Advertisements

ಇದು ಪ್ರತಿಯೊಬ್ಬ ಕನ್ನಡಿಗ ತಿಳಿದುಕೊಳ್ಳಲೇ ಬೇಕಾದ ವಿಷಯ ! ಏನಾಗುತ್ತಿದೆ ನೋಡಿ..

Kannada Mahiti

ಸದ್ದಿಲ್ಲದೆ ಕರುನಾಡಿಗೆ ಅ’ನ್ಯಾಯವಾಗುತ್ತಿದ್ದರೂ ನಮ್ಮ ರಾಜ್ಯ ಸರ್ಕಾರ ಮಾತ್ರ ಏನೂ ಗೊತ್ತಿರದ ರೀತಿ ಸುಮ್ಮನಿದೆ. ನಮ್ಮ ಟಿವಿ ಮಾಧ್ಯಮಗಳು ಕೂಡ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಇದು ದು’ರಂತವೇ ಸರಿ. ಕಾವೇರಿ ನೀರಿನ ಹೆಚ್ಚುವರಿ ನೀರಿನ ಬಳಕೆಗಾಗಿ ಬೆಂಗಳೂರು, ರಾಮನಗರ ಸೇರಿದಂತೆ ಕೆಲ ಭಾಗಗಳಿಗೆ ಕುಡಿಯುವ ನೀರು ಒದಗಿಸಲು ಕರ್ನಾಟಕ ರಾಜ್ಯ ಮೇಕೆ ದಾಟು ಯೋಜನೆ ಶುರು ಮಾಡಿದಾಗ ತಮಿಳುನಾಡು ತ’ಕರಾರು ತೆಗೆದಿತ್ತು. ಇದಕ್ಕೆ ಕೇಂದ್ರ ಸರ್ಕಾರದಿಂದಲೂ ಆ’ಕ್ಷೇಪಗಳು ಕೇಳಿಬಂದವು. ಆದರೆ ಈಗ ತಮಿಳುನಾಡು ಈ ಹೆಚ್ಚುವರಿ 45 ಟಿಎಂಸಿ ನೀರಿನ ಬಳಕೆಗಾಗಿ ಹೊಸ ಯೋಜನೆ ಶುರು ಮಾಡುತ್ತಿದೆ ಎಂದು ಹೇಳಲಾಗಿದೆ.

Advertisements

ಕಾವೇರಿ ನೀರಿನ ಹೆಚ್ಚುವರಿ ನೀರಿನ ಬಳಕೆಗಾಗಿ 7000 ಕೋಟಿ ವೆಚ್ಚದಲ್ಲಿ ತಮಿಳುನಾಡು ಸರ್ಕಾರ ನದಿ ಜೋಡಣೆ ಯೋಜನೆ ಪ್ರಾರಂಭಿಸಿದೆ. ವೆಲ್ಲಾರು, ವೈಗೈ ಮತ್ತು ಗುಂಡಾರು ನದಿಗಳನ್ನು ಕಾವೇರಿ ನದಿಗೆ ಜೋಡಿಸುವ ಯೋಜನೆ ಇದು. ಮೇಕೆ ದಾಟು ಕುಡಿಯುವ ನೀರಿನ ಯೋಜನೆ ಮಾಡುವಾಗ ಬಾಯಿ ಬ’ಡಿದುಕೊಂಡ ತಮಿಳುನಾಡು ಸರ್ಕಾರ ಈಗ ಇಂತಹ ಒಂದು ಯೋಜನೆ ರೂಪಿಸಿ ಹೆಚ್ಚುವರಿ ನೀರನ್ನು ಸಹ ತನ್ನ ಪಾಲು ಮಾಡಿಕೊಳ್ಳಲು ಸಿದ್ದವಾಗಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯಿಂದ ಕರ್ನಾಟಕಕ್ಕೆ ಅ’ನ್ಯಾಯ ಆಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದರಿಂದ ಮೇಕೆ ದಾಟು ಯೋಜನೆಗೆ ಅಡ್ಡಿ ಆಗಲಿದೆ. ಅಲ್ಲದೆ ಬ’ರಗಾಲದಲ್ಲಿ ಕರುನಾಡಿನ ತುಂಬಾ ಸಮಸ್ಯೆ ಎದುರಾಗಲಿದೆ.

ಕಾವೇರಿ ನದಿ ಪ್ರಾಧಿಕಾರ ಕನ್ನಡಿಗರಿಗೆ ಮ’ರಣ ಶಾಸನ ಎಂದು ನಮ್ಮ ಹಿರಿಯ ನಾಯಕರೊಬ್ಬರು ಹೇಳಿದ್ದರು. ಆದರೂ ಕಾವೇರಿ ನದಿ ನೀರಿನ ನಿಯಂತ್ರಣ ಪ್ರಾಧಿಕಾರದ ಕೈ ಸೇರಿತು. ಕಾವೇರಿ ನದಿ ನೀರು ಪ್ರಾಧಿಕಾರಗಳು ಕನ್ನಡಿಗರ ವಿ’ರೋಧದ ನಡುವೆಯೂ ರಚಿತವಾದವು. ಹೀಗೆ ನಮ್ಮ ಕೈ ಮೀರಿ ಎಲ್ಲಾ ನಡೆಯುತ್ತಿದ್ದರೂ ಇಲ್ಲಿ ತಲೆ ಕೆಡಿಸಿಕೊಳ್ಳಲು ಯಾರು ಇಲ್ಲ. ಇದೊಂದು ವಿಷಯ ಮಾತ್ರವಲ್ಲ ಉದ್ಯೋಗದಲ್ಲಿ ಕನ್ನಡಿಗರಿಗೆ ಆಗುವ ಅ’ನ್ಯಾಯ, ಗಡಿ ವಿಷಯಗಳು, ನದಿ ನೀರಿನ ವಿಷಯಗಳು ಹೀಗೆ ಅನೇಕ ವಿಷಯದಲ್ಲಿ ಕನ್ನಡಿಗರಿಗೆ ಅ’ನ್ಯಾಯವಾದಾಗ ಗಟ್ಟಿ ಧ್ವನಿ ಎತ್ತುವುದಕ್ಕೆ ಇಲ್ಲಿ ಯಾರೂ ಮುಂದಾಗುವುದಿಲ್ಲ. ಕಾರಣ ಕನ್ನಡ ಅಭಿಮಾನವಿರುವ, ಕನ್ನಡಕ್ಕಾಗಿ ಹೋರಾಡುವ ಜನ ನಾಯಕರ ಕೊರತೆ, ಇಚ್ಚಾಶಕ್ತಿಯ ಕೊರತೆ. ಈಗಲಾದರೂ ಕನ್ನಡ ಯುವ ಜನತೆ ಕನ್ನಡ ಪ್ರೇಮ ಬೆಳೆಸಿಕೊಳ್ಳಬೇಕು. ಕಾಲ ಮಿಂಚಿ ಹೋದಾಗ ಏನೂ ಮಾಡಲು ಬರುವುದಿಲ್ಲ.