Advertisements

ಸ್ನೇಹಿತನ ಬರ್ತಡೆ ಪಾರ್ಟಿ ಮಾಡಲು ಗುಹೆ ಹೊಳಗೆ ಹೋದ 12 ಜನ ಹುಡುಗರು ಏನಾದ್ರೂ ಗೊತ್ತಾ? ಬೆಚ್ಚಿ ಬೀಳಿಸುತ್ತೆ..

Kannada Mahiti

ಥೈಲಾಂಡ್‌ನ ಆ ಗುಹೆಯಲ್ಲಾದ ಘ’ಟನೆಯನ್ನು ನೆನಸಿಕೊಂಡ್ರೆ ಇವತ್ತಿಗೂ ಬೆಚ್ಚಿ ಬೀಳೋದು ಗ್ಯಾರೆಂಟಿ ಅಷ್ಟಕ್ಕೂ ಆ ಗುಹೆಯಲ್ಲಿ ಅವತ್ತು ಆಗಿದ್ದೇನು ಗೊತ್ತಾ..
ಥೈಲ್ಯಾಂಡ್ ದೇಶ ನಿತ್ಯ ಹರಿದ್ವರ್ಣಗಳಿಂದ ಕೂಡಿದ ನೈಸರ್ಗಿಕವಾಗಿ ಹಳ್ಳ, ಗುಡ್ಡಗಳಿಂದ ಕೂಡಿದ ದೇಶ. ಥೈಲ್ಯಾಂಡ್ ಹೆಸರು ಕೇಳಿದ್ರೆ ಇವತ್ತಿಗೂ 2018ರಲ್ಲಿ ನಿದ್ದೆಕೆಡಿಸಿದ ಥಾಮ್ ಲುವಾಂಗ್ ಗುಹೆ ನೆನಪಿಗೆ ಬರುತ್ತದೆ. ಆ ಗುಹೆಯನ್ನು ಹೊರಗಡೆಯಿಂದ ನೋಡಲಷ್ಟೇ ಚೆಂದ, ಆ ಸೌಂದರ್ಯವನ್ನು ಸವಿಯಲಷ್ಟೆ ಚೆಂದ ಆದರೆ ಮಳೆಗಾಲದ ಸಂದರ್ಭದಲ್ಲಿ ಹೋದ್ರೆ ಅದು ತನ್ನ ಭೀ’ಕ’ರವಾದ ರೌ’ದ್ರ ರೂಪವನ್ನು ತೋರಿಸದೇ ಇರದು. ಅವತ್ತು ಆ ಮಕ್ಕಳ ಗುಂಪು ಸಿಕ್ಕಿಹಾಕಿಕೊಂಡಿದ್ದು ಹೀಗೆ..
ಹೌದು ಥೈಲಾಂಡ್‌ನ ಟಿನೇಜ್ ಮಕ್ಕಳ ಗುಂಪೊಂದು ತಮ್ಮ ಸ್ನೇಹಿತನ ಬರ್ತಡೇ ಆಚರಿಸಲು ನಿರ್ಧರಿಸ್ತಾರೆ.

[widget id=”custom_html-3″]

Advertisements

ಅದು ಆ ಥಾಮ್ ಲುವಾಂಗ್ ಗುಹೆಯಲ್ಲಿಯೇ ಸೆಲೆಬ್ರೆಷನ್ ಮಾಡಲು ನಿರ್ಧರಿಸ್ತಾರೆ. ಅಷ್ಟಕ್ಕೂ ಆ ಮಕ್ಕಳೆಲ್ಲರು ಫುಟ್‌ಬಾಲ್ ಆಟ ಆಡುವ ಮಕ್ಕಳು. ತಮ್ಮ ಗುಂಪಿನಲ್ಲಿದ್ದ ಪೀರ್‌ಪತ್ ಎನ್ನುವ ಸ್ನೇಹಿತನ ಹುಟ್ಟಹುಬ್ಬವನ್ನು ಆ ಗುಹೆಯಲ್ಲಿ ಆಚರಿಸಲು ಮಕ್ಕಳು ನಿರ್ದರಿಸಿದ್ದು ತಮ್ಮ ಮನೆಯವರಿಗ್ಯಾರಿಗೂ ಹೇಳದೇ ಸೀದಾ ಗುಹೆಗೆ ಹೋಗಲು ಮಕ್ಕಳು ನಿರ್ಧರಿಸಿದ್ರು, ಹಾಗೇ ಮಾಡಿದ್ರು ಕೂಡ ತಮ್ಮ ಕೋಚ್ ಏಕ್ ಎನ್ನುವವರನ್ನು ಬ’ಲವಂತವಾಗಿ ಒಪ್ಪಿಸಿ ಮಕ್ಕಳೆಲ್ಲಾ ಆ ಗುಹೆಗೆ ಹೋದರು.
ಗುಹೆಯ ದ್ವಾರದಲ್ಲಿಯೇ ಸೈಕಲ್ ಬ್ಯಾಗ್ ಇಟ್ಟು ಮಕ್ಕಳೆಲ್ಲ ಗುಹೆ ಒಳಗೆ ಹೋದ್ರು. ಅದೇ ವೇಳೆಗೆ ದಟ್ಟವಾದ ಕಾರ್ಮೋಡ, ಗುಡುಗು ಮಿಂಚು ಸಹಿತ ಅಬ್ಬರದ ಬಿರುಸಿನ ಮಳೆ ಆರಂಭವಾಯ್ತು.

[widget id=”custom_html-3″]

ಮಕ್ಕಳೆಲ್ಲ ಜೀವ ಭ’ಯಕ್ಕೆ ಅಲ್ಲೆ ಗುಹೆ ಒಳಗಡೆಯೇ ಗುಡ್ಡ ಹತ್ತಿ ಕುಳಿತುಕೊಂಡ್ರು. ಮಕ್ಕಳೆಲ್ಲ ಗುಹೆಗೆ ಹೋಗಿರುವ ವಿಚಾರ ಹೆತ್ತವರಿಗೆ ಗೊತ್ತಾಗಿ ಇತ್ತ ರಾಜ್ಯಪಾಲರವರೆಗೂ ವಿಚಾರ ತಲುಪಿತು. ಈ ವಿಚಾರವನ್ನು ಗಂಭೀರವಾಗಿ ತಗೆದುಕೊಂಡ ಸರ್ಕಾರ ಮಕ್ಕಳ ರಕ್ಷಣೆ ಕಾರ್ಯಾಚರಣೆಯಲ್ಲಿ ನಿರತರಾದ್ರು. ರಕ್ಷಣಾ ಪಡೆಗಳು ಜನರೇಟರ್ ಸಹಿತ ದೊಡ್ಡ ದೊಡ್ಡ ಮೋಟರ್ ತಂದು ಗುಹೆಯಿಂದ ನೀರು ಹೊರತರುವ ಪ್ರಯತ್ನ ಮಾಡಿದ್ರು. ವಿಫಲವಾಯ್ತು. ಗಂಟೆಗೆ ಒಂದು ಲಕ್ಷ ನೀರು ಹೊರತಂದ್ರು ಅಷ್ಟೇ ಪ್ರಮಾಣದ ನೀರು ಗುಹೆಯೊಳಗೆ ಸೇರಿಕೊಳ್ತಿತ್ತು.
ಈ ವಿಚಾರ ಅಷ್ಟೊತ್ತಿಗಾಗಲೇ ಚೀನಾ, ರಷ್ಯಾ, ಅಮೇರಿಕಾ ಆಸ್ಟ್ರೆಲಿಯಾ, ಶ್ರೀಲಂಕಾ ದೇಶಗಳಿಗೂ ತಲುಪಿತು. ದೇಶದ ನಾನಾ ಭಾಗಗಳಿಂದ ಉತ್ತಮ ಈಜುಪಟುಗಳನ್ನು ಕರೆತಂದು ಮಕ್ಕಳ ಹುಡುಕುವ ಪ್ರಯತ್ನ ಮಾಡಲಾಯಿತು.

[widget id=”custom_html-3″]

ಆದ್ರೆ ಅದ್ಯಾವುದು ವರ್ಕೌಟ್ ಆಗಲೇಯಿಲ್ಲ. ಧುಮ್ಮಿಕ್ಕುವ ನೀರು ಈಜುಗಾರರಿಗೂ ಸಹ ಸವಾಲಾಗೇಯಿತ್ತು. ಬಳಿಕ ಗುಹೆಯ ಸ್ಕೆಚ್ ಸಿದ್ಧಪಡಿಸಿಕೊಂಡು ಅಸಲಿ ಸಮಸ್ಯೆ ಅರ್ಥ ಮಾಡಿಕೊಳ್ಳಲಾಯಿತು. ಗುಹೆಯಲ್ಲಿ ಎಷ್ಟೆ ನೀರು ಖಾಲಿ ಮಾಡಿದ್ರು ಅಷ್ಟೆ ಪ್ರಮಾಣದ ನೀರು ಸೇರಿಕೊಳ್ತಿತ್ತು. ಹೀಗಾಗಿ ಪಕ್ಕದ ಗದ್ದೆಗಳಿಗೆ ನೀರು ಬಿಡುವ ಯೋಚನೆ ಮಾಡಿಕೊಳ್ಳಲಾಯಿತು. ಆಗ ರೈತರು ಸಹ ಮರುಮಾತನಾಡದೇ ಬೆಳೆ ಹೋದರೆ ಮುಂದಿನ ವರ್ಷ ಬೆಳಿಬಹುದು, ಮಕ್ಕಳ ಜೀವ ಹಾಗಲ್ಲ. ಬಾಳಿ ಬದುಕ ಬೇಕಾದ ಮಕ್ಕಳನ್ನು ಬದುಕಿಸಿ ಅಂತ ಅವಕಾಶ ಮಾಡಿಕೊಟ್ರು.

ಹೀಗಾಗಿ ಗುಹೆಯ ನೀರೆಲ್ಲಾ ರೈತರ ಜಮೀನಿಗೆ ಹರಿಬಿಟ್ಟು ಸತತ ನಾಲ್ಕೈದು ದಿನಗಳ ಹಗಲಿರುಳು ಶ್ರಮದ ಫಲವಾಗಿ ಅಷ್ಟು ಮಕ್ಕಳು ಕೋಚ್ ಸಮೇತ ಸುರಕ್ಷಿತವಾಗಿ ಹೆತ್ತವರನ್ನು ಸೇರಿಕೊಂಡ್ರು. ಈ 12ಮಕ್ಕಳ ಸುರಕ್ಷತೆಯ ಕಾರ್ಯಕ್ಕೆ ತೊಡಗಿಕೊಂಡವರು ಒಬ್ಬಿಬ್ಬರಲ್ಲ, ದೇಶದ ಹತ್ತು ಸಾವಿರ ನುರಿತ ರಕ್ಷಣಾಪಡೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ರು. ಬೇಸರದ ಸಂಗತಿಯೆಂದರೆ ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಒಬ್ಬ ಈಜುಪಟು ಕೊನೆಯುಸಿರೆಳೆದಿದ್ದಾರೆ. ಉಳಿದಂತೆ ಯಾರೊಬ್ಬರು ಕೂಡ ಪ್ರಾ’ಣ ಚೆಲ್ಲದೆ ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡಿದ್ದಾರೆ.

[widget id=”custom_html-3″]

ಆ 12ಜನ ಮಕ್ಕಳು ಸಹ ಇನ್ನೆಂದು ಮೋಜು ಮಸ್ತಿಗಾಗಿ ಇಂತಹ ನಿರ್ಧಾರಗಳನ್ನು ಜೀವನದಲ್ಲಿ ತೆಗೆದುಕೊಳೋದಿಲ್ಲ ಅಂತ ಪ್ರಮಾಣ ಮಾಡಿ ತಮ್ಮನ್ನು ರಕ್ಷಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದ್ರು.
ಹೀಗೆ ಥೈಲಾಂಡ್ ಗುಹೆಯು ಆ ವರ್ಷಕ್ಕೆ ಸಾಕಷ್ಟು ನೋವು, ದುಖಃ ಕೊನೆಗೆ ಸಂತಸದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಸುಳ್ಳಲ್ಲ. ಆದರೆ ಈಗಲೂ ಆ ರಣ ಬೀ’ಕರ ದೃಶ್ಯವನ್ನು ನೆನೆಸಿಕೊಂಡ್ರೆ, ಊಟ ತಿಂಡಿ ಬಿಟ್ಟು ಮಕ್ಕಳು ಆ ಗುಹೆಯೊಳಗೆ ಕೇವಲ ಕೋಚ್‌ನ ಆತ್ಮಸ್ಥೆರ್ಯದಿಂದ ಜೀವಿಸುತ್ತಿರುವುದನ್ನು ಊಹಿಸಿಕೊಂಡ್ರೆ, ನಿಜಕ್ಕೂ ಆಶ್ಚರ್ಯವಾಗುತ್ತೆ, ಇದೆಲ್ಲ ನಿಜವಾಗಿಯೂ ನಡೆದುಹೋಗಿತ್ತಾ ಅಂತ ಭ’ಯ ಆವರಿಸುತ್ತೆ.