Advertisements

ಬಿಗ್ ಬ್ರೇಕಿಂಗ್ : ಪ್ರಕಟವಾಯ್ತು 10 ಮತ್ತು 12ನೇ ತರಗತಿಗಳ ಪರೀಕ್ಷಾ ವೇಳಾಪಟ್ಟಿ?

News

ಕರೋನಾ ಕಾರಣದಿಂದಾಗಿ ಲಾಕ್ ಡೌನ್ ಆದ ಪರಿಣಾಮ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿದ್ದು, ಕರೋನಾ ಸೋಂಕು ಹಬ್ಬುವ ಭಯದಲ್ಲಿ ನಡೆಯಬೇಕಿದ್ದಾ ಪರೀಕ್ಷೆಗಳನ್ನ ಮುಂದೂಡಲಾಗಿತ್ತು. ಇನ್ನು ಮಾರ್ಚ್ ನಲ್ಲಿ ನಡೆಯಬೇಕಾಗಿದ್ದ ಸಿಬಿಎಸ್ಇ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನ  ಮುಂದಕ್ಕೆ ಹಾಕಲಾಗಿತ್ತು.

ಇನ್ನು ಈಗ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಗಿರುವ ರಮೇಶ್ ಪೋಖ್ರಿಯಾಲ್ ನಿಶಾಂಕ್  ಅವರು ಸಿಬಿಎಸ್ಇ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ನಡೆಯುವ ದಿನಾಂಕ ಹಾಗೂ ವೇಳಾಪಟ್ಟಿಯನ್ನ ಇಂದು ಅಂದರೆ ಸೋಮವಾರದಂದು ಬಿಡುಗಡೆ ಮಾಡಿದ್ದಾರೆ. ಇನ್ನು ಸಚಿವರು ಬಿಡುಗಡೆ ಮಾಡಿರುವ ಹಾಗೆ ಸಿಬಿಎಸ್ಇ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಮುಂದಿನ ತಿಂಗಳು ಜುಲೈ ಒಂದರಿಂದ 15 ನೇ ತಾರೀಖಿನವರೆಗೆ ನಡೆಯಲಿದೆ. ಸಿಬಿಎಸ್ಇ ಫಲಿತಾಂಶವು ಆಗಸ್ಟ್ ತಿಂಗಳಿನಲ್ಲಿ ಬರಲಿದೆ ಎಂದು ಹೇಳಲಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಗಿರುವ ರಮೇಶ್ ಪೋಖ್ರಿಯಾಲ್ ನಿಶಾಂಕ್  ಅವರು ಸಿಬಿಎಸ್ಇ 10 ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ.