Advertisements

ದೇಶದಲ್ಲಿ ಯಾರೂ ಮಾಡದ ಕೆಲಸ ಮಾಡಿ ಮಾದರಿಯಾದ ಆರ್ಮಿ ಚೀಫ್ ! ಮಾಡ್ತಾ ಇರೋ ಕೆಲಸ ಏನ್ ಗೊತ್ತಾ ?

News

ಕರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿರುವ ಪರಿಣಾಮ ಇದರ ನೇರ ಪರಿಣಾಮ ಉಂಟಾಗಿರುವುದು ಬಡವರು, ನಿರ್ಗತಿಕರು ಹಾಗೂ ಶ್ರೀಸಾಮಾನ್ಯ ಜನರ ಮೇಲೆ. ಇನ್ನು ಸೆಲೆಬ್ರೆಟಿಗಳು, ರಾಜಕೀಯ ನಾಯಕರು ಸೇರಿದಂತೆ ಅನೇಕರು ತಮ್ಮದೇ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದ ಜನರಿಗೆ ಸಹಾಯದ ಹಸ್ತ ಚಾಚಿದ್ದಾರೆ. ಈಗ ನಮ್ಮ ಭಾರತೀಯ ಸೇನೆಯ ಆರ್ಮಿ ಚೀಪ್ ಆಗಿರುವ ಬಿಪಿನ್ ರಾವತ್ ಅವರು ಎಲ್ಲರಿಗೂ ಮಾದರಿಯಾಗುವಂತ ಕೆಲಸ ಮಾಡಿದ್ದಾರೆ.

Advertisements

ಹೌದು, ಬಿಪಿನ್ ರಾವತ್ ಅವರು ಕೋವಿಡ್ 19 ರೋಗದ ವಿರುದ್ಧ ಹೋರಾಡಲು ರಚಿಸಲಾಗಿರುವ ಪಿಎಂ ಕೇರ್ಸ್ ನಿಧಿಗೆ, ಪ್ರತೀ ತಿಂಗಳು ತಮ್ಮ ಸಂಬಳದಲ್ಲಿ 50 ಸಾವಿರ ರೂನಂತೆ, ಮುಂದಿನ ಒಂದು ವರ್ಷದವರೆಗೆ ಕಟ್ ಆಗುವಂತೆ ಮಾಡಿದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ. ಇನ್ನು ಇದಕ್ಕೆ ಸಂಬಂಧಪಟ್ಟ ಹಾಗೆ ಅಧಿಕಾರಿಗಳಿಗೆ ಮಾರ್ಚ್ ನಲ್ಲಿಯೇ ಪತ್ರ ಬರೆದಿರುವ ಬಿಪಿನ್ ರಾವತ್ ಅವರು ಮುಂದಿನ ಒಂದು ವರ್ಷದವರೆಗೆ ತನ್ನ ಸ್ಯಾಲರಿಯಲಿ 50 ಸಾವಿರ ಕಟ್ ಆಗಿ , ಪಿಎಂ ಕೇರ್ಸ್ ನಿಧಿಗೆ ಜಮಾವಣೆ ಆಗಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಬಿಪಿನ್ ರಾವತ್ ಅವರು ಪತ್ರ ಬರೆದ ಬಳಿಕ, ಏಪ್ರಿಲ್ ತಿಂಗಳಿನ ವೇತನದಲ್ಲಿ 50 ಸಾವಿರ ಕಟ್ ಆಗಿದ್ದು, ಪಿಎಂ ಕೇರ್ ನಿಧಿಗೆ ಜಮಾವಣೆಗೊಂಡಿದೆ. ಇನ್ನು ಇಷ್ಟೇ ಅಲ್ಲದೆ ಆರ್ಮಿ ಚೀಪ್ ಬಿಪಿನ್ ರಾವತ್ ಅವರು ಸೇರಿದಂತೆ ಎಲ್ಲಾ ಸೇನೆಯ ಸಿಬ್ಬಂದಿಗಳು ತಮ್ಮ ಒಂದು ದಿನದ ಸಂಬಳವನ್ನ ಮಾರ್ಚ್ ನಲ್ಲೆ ಪಿಎಂ ಕೇರ್ ನಿಧಿಗೆ ಕೊಟ್ಟಿದ್ದರು. ಇನ್ನು ರಕ್ಷಣಾ ಸಚಿವಾಲಯದ ಎಲ್ಲಾ ನೌಕರರು ಮುಂದಿನ ಒಂದು ವರ್ಷದವರೆಗೆ, ಅವರು ಇಚ್ಛಿಸಿದಲ್ಲಿ, ಪ್ರತೀ ತಿಂಗಳು ತಮ್ಮ ಒಂದು ದಿನದ ಸಂಬಳವನ್ನ ನಿಧಿಗೆ ಕೊಡುವ ಅವಕಾಶ ನೀಡಲಾಗಿದೆ.

ಇಷ್ಟೇ ಅಲ್ಲದೆ ಆರ್ಮಿ ಚೀಪ್ ರವರು ಪ್ರತೀ ತಿಂಗಳು 50 ಸಾವಿರವನ್ನ, ಪಿಎಂ ಕೇರ್ ನಿದಿಗೆ, ಮುಂದಿನ ಒಂದು ವರ್ಷದವರೆಗೆ ನೀಡುವಂತೆ, ತಮ್ಮದೇ ಇಲಾಖೆಯ ಬೇರೆ ಹಿರಿಯ ಅಧಿಕಾರಿಗಳಿಗೆ ಪ್ರೋತ್ಸಾಹಿಸುವ ಸಾಧ್ಯೆತೆ ಇದೆ ಎಂದು ಹೇಳಲಾಗಿದೆ. ವೈರಿಗಳಿಂದ ನಮ್ಮನ್ನ ರಕ್ಷಣೆ ಮಾಡುತ್ತಿರುವ ಜೊತೆಗೆ ಕರೋನಾ ವಿರುದ್ಧ ಸಹ ಹೋರಾಡುತ್ತಿರುವ ಬಿಪಿನ್ ರಾವತ್ ರವರಿಗೆ ಹ್ಯಾಟ್ಸಾಪ್..