Advertisements

ಊರುಗಳಿಗೆ ಹೋಗಿರೋ CET ಪರೀಕ್ಷೆ ಬರೆಯೋ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ !

News

ಕರೋನಾ ಹಿನ್ನಲೆಯಲ್ಲಿ SSLC, PUC ಸೇರಿದಂತೆ CET ಪರೀಕ್ಷೆಗಳನ್ನ ಮುಂದೂಡಲಾಗಿತ್ತು. ಈಗ ಹಾಸ್ಟೆಲ್ ನಲ್ಲಿದ್ದ ವಿಧ್ಯಾರ್ಥಿಗಳೆಲ್ಲಾ ತಮ್ಮ ತಮ್ಮ ಊರುಗಳಿಗೆ ಹೋಗಿಬಿಟ್ಟಿದ್ದಾರೆ. ಈಗ ಲಾಕ್ ಡೌನ್ ನಿಂದಾಗಿ ಊರುಗಳಿಗೆ ಹೋಗಿರೋ CET ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಿಕ್ಷಣ ಪ್ರಾಧಿಕಾರ ಸಿಹಿ ಸುದ್ದಿ ನೀಡಿದೆ.

Advertisements

ಹೌದು, ಸಿಇಟಿ ಪರೀಕ್ಷೆ ಜುಲೈ 30 ಹಾಗೂ 31ರಂದು ನಡೆಯಲಿದೆ. ಹಾಗಾಗಿ ಕರ್ನಾಟಕಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳು ಇರುವಜಿಲ್ಲೆಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಈಗಾಗಿಯೇ ಹೊಸದಾಗಿ ೭೫ ಪರೀಕ್ಷಾ ಕೇಂದ್ರಗಳನ್ನ ಸೇರ್ಪಡೆ ಮಾಡಲಾಗಿದ್ದು, ಊರುಗಳಿಗೆ ತೆರಳಿರುವ ವಿದ್ಯಾರ್ಥಿಗಳು ತಮ್ಮ ಹತ್ತಿರದ ಪರೀಕ್ಷಾ ಕೇಂದ್ರವನ್ನ ಆಯ್ಕೆಮಾಡಿಕೊಂಡು ಪರೀಕ್ಷೆ ಬರೆಯಬಹುದಾಗಿದೆ.

ಇನ್ನು ಸಿಇಟಿ ವಿದ್ಯಾರ್ಥಿಗಳು ಪ್ರಾಧಿಕಾರದ ಆನ್ ಲೈನ್ ವೆಬ್ಸೈಟ್ ನಲ್ಲಿ ಅಗತ್ಯವಿರುವ ಪರೀಕ್ಷಾ ಕೇಂದ್ರವನ್ನ ಬದಲಾವಣೆ ಮಾಡಿಕೊಳ್ಳಲು ಎರಡು ದಿನಗಳ ಅವಕಾಶ ನೀಡಲಾಗಿದ್ದು,ಬದಲಾವಣೆ ಮಾಡಿಕೊಳ್ಳಲು ಇದೇ ತಿಂಗಳು ಮೇ ೨೦ ಸಾಯಂಕಾಲ ೬ ಗಂಟೆಯಿಂದ ಮೇ ೨೨ ಸಂಜೆ ಆರು ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಲಾಗಿದೆ. ಇನ್ನು ಮಾಹಿತಿಗಳ ಪ್ರಕಾರ ೩ ಆಪ್ಷನ್ ಕೊಡಬೇಕಾಗಿದ್ದು, ಪರೀಕ್ಷಾ ಕೇಂದ್ರವು ಸಿಗುವ ಆದ್ಯತೆಯ ಮೇರೆಗೆ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷಾ ಕೇಂದ್ರವನ್ನ ಹಂಚಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.

ಇನ್ನು ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಖಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಿರಲೇಬೇಕು, ಎಂದು ಪರೀಕ್ಷಾ ಪ್ರಾಧಿಕಾರ ಹೇಳಿದೆ. ಈ ಮಾಹಿತಿಯನ್ನ ಆದಷ್ಟು ಶೇರ್ ಮಾಡಿ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದು.