Advertisements

ಮನೆ ಮನೆಗೆ ಹೋಗಿ ಹಾಲು ಮಾರುತ್ತಿದ್ದ ಹುಡುಗ ಕನ್ನಡ ಸಿನಿಮಾದ ಡಿಬಾಸ್ ಆಗಿ ಬೆಳೆದಿದ್ದು ಹೇಗೆ ಗೊತ್ತಾ?

Cinema

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ ತಕ್ಷಣ ಅದೆಷ್ಟೋ ಅಪಾರ ಅಭಿಮಾನಿಗಳ ಸಾಲು ಕಣ್ಣು ಮುಂದೆ ಬರುತ್ತದೆ.. ತನ್ನ ನೆಚ್ಚಿನ ನಟನ ನೋಡಲು ತಂಡೋಪತಂಡವಾಗಿ ಬರುವ ಜನರೆಷ್ಟೋ, ಡಿ ಬಾಸ್ ಡಿಬಾಸ್ ಅಂತ ಘರ್ಜಿಸುವ ಅಭಿಮಾನಿ ದೇವರುಗಳು ಅಕ್ಷರಶಃ ದರ್ಶನ್ ಅವರಿಗೆ ವರವೇ ಸರಿ.. ದರ್ಶನ್ ಅವರ ತಂದೆ ಸಿನಿರಂಗದ ಮೇರು ಖ’ಳನಟನಾಗಿದ್ದರು ಸಹ ಚಿತ್ರೋದ್ಯಮದಲ್ಲಿ ದರ್ಶನ್ ಅವರ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ, ಅಸಲಿಗೆ ತೂಗುದೀಪ್ ಶ್ರೀನಿವಾಸ್ ಅವರಿಗೆ ಮಗ ಸಿನಿರಂಗಕ್ಕೆ ಎಂಟ್ರಿ ಕೊಡೋದು ಸಹ ಇಷ್ಟವಿರಲಿಲ್ಲವಂತೆ, ಆದರೆ ಅದ್ಯಾಕೋ ದರ್ಶನ್ ಅವರಿಗೆ ಓದು ತಲೆ ಹತ್ತಲೇಯಿಲ್ಲ, ಸಿನಿರಂಗದ ಮೇಲಿನ ವ್ಯಾ’ಮೋ’ಹ ಕಡಿಮೆಯಾಗಿಲ್ಲ, ಉತ್ತಮ ನಟನಾಗಬೇಕು ಎಂಬ ಮಹದೆತ್ತರದ ಆಸೆಯಿಂದ ನೀನಾಸಂ ಅಲ್ಲಿ ಅಭಿನಯ ಮುಗಿಸಿ ಬಂದ್ರೂ ಸಹ ಅವರಿಗೆ ಒದು ಚಾನ್ಸ್ ಸಹ ಸಿಗಲಿಲ್ಲ.

[widget id=”custom_html-3″]

Advertisements

ಲೈಟ್ ಮ್ಯಾನ್ ಆಗಿ ಕ್ಯಾಮೆರಾ ಅಸಿಸ್ಟೆಂಟ್ ಆಗಿ ಹೀಗೆ ಸಿಕ್ಕ ಸಿಕ್ಕ ಕೆಲಸವನ್ನು ದರ್ಶನ್ ಜೀವನಕ್ಕಾಗಿ ಮಾಡ್ತಾರೆ, ತಾನೊಬ್ಬ ಸ್ಟಾರ್ ನಟನೆಂಬ ಹಮ್ಮು ಬಿಮ್ಮು ಯಾವುದೇ ಇಲ್ಲದೇ ತನಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡ್ತಿದ್ದರು ದರ್ಶನ್. ಸ್ಟಾರ್ ನಟರು ತಿರಸ್ಕರಿಸಿದ ಸಿನಿಮಾವನ್ನು ಬರೀ ಒಂದು ಲಕ್ಷಕ್ಕಾಗಿ ದರ್ಶನ್ ಮಾಡ್ತಾಯಿದ್ರಂತೆ, ಆದರೆ ಇವತ್ತು ಕೋಟಿ ಕೋಟಿ ಕೊಟ್ರು ದರ್ಶನ್ ಡೇಟ್ಸ್ಗಾಗಿ ನಿರ್ಮಾಪಕ, ನಿರ್ದೆಶಕರು ಕಾಯುವಂತಹ ಪರಿಸ್ಥಿತಿ ಬಂದಿದೆ. ದರ್ಶನ್ ಅವರಿಗೆ ಮೊದಲು ಬ್ರೇಕ್ ಕೊಟ್ಟ ಸಿನಿಮಾ ಮೆಜೆಸ್ಟಿಕ್, ಮೆಜೆಸ್ಟಿಕ್‌ನ ಮಾಸ್ ಗೆಟಪ್‌ಗೆ ಆರಡಿ ಉದ್ದದ ದರ್ಶನ್ ಫಿಟ್ ಆಗಿ ಕಾಣಿಸಿದ್ರು, ಈ ಚಿತ್ರ ಅಮೋಘ ಪ್ರದರ್ಶನ ಕಂಡ ಬೆನ್ನಲ್ಲೇ ಅನೇಕ ಸಿನಿಮಾಗಳಿಗೆ ದರ್ಶನ್ ಬಣ್ಣ ಹಚ್ಚಿದ್ರು, ಅಷ್ಟು ದೊಡ್ಡ ಮಟ್ಟಕ್ಕೆ ಹಿಟ್ ಆಗಿರಲಿಲ್ಲ..

[widget id=”custom_html-3″]

ಬಳಿಕ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿದ ಕರಿಯಾ ಸಿನಿಮಾ ದರ್ಶನ್ ಅವರ ಸಿನಿ ಕರಿಯರ್‌ಗೆ ಮತ್ತೊಂದು ಬ್ರೇಕ್ ಕೊಟ್ಟಿತು. ಬಳಿಕ ಓಂ ಪ್ರಕಾಶ್ ಅವರು ನಿರ್ದೆಶಿಸಿದ ಕಲಾಸಿಪಾಳ್ಯ ಡಿ ಬಾಸ್ ಬದುಕಿಗೆ ಹೊಸ ಇನ್ನಿಂಗ್ಸ್ ಕೊಡ್ತು. ಇದಾದ ಬಳಿಕ ದರ್ಶನ್ ಅಭಿನಯದ ಎಲ್ಲಾ ಸಿನಿಮಾಗಳು ಸಹ ಬಹುತೇಕ ಯಶಸ್ಸು ಕಂಡವು. ಮಂಡ್ಯ, ಸ್ವಾಮಿ, ಅಯ್ಯಾ ನಂತರ ಉಪೇಂದ್ರ ಅವರ ಜೊತೆ ಅನಾಥ್ರು ಸಿನಿಮಾಮೂಲಕ ಬಣ್ಣ ಹಚ್ಚಿದ್ರು. ಇನ್ನು ಅಂಬರೀಶ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಇಬ್ಬರ ಜೊತೆಯೂ ಮಗನ ಪಾತ್ರದಲ್ಲಿ ಗುರುತಿಸಿಕೊಂಡ ಕಲಾವಿದ ದರ್ಶನ್ ಒಬ್ಬರೇ ಎಂಬ ಹೆಗ್ಗಳಿಕೆ ಸಹ ದರ್ಶನ್‌ಗೆ ಇದೆ.

[widget id=”custom_html-3″]

[widget id=”custom_html-3″]

ಸಂಗೊಳಿರಾಯಣ್ಣದಲ್ಲಿಯ ದರ್ಶನ್ ನಟನಾ ಕೌಶಲ್ಯಕ್ಕೆ, ಕುರುಕ್ಷೇತ್ರದಲ್ಲಿನ ದರ್ಶನ್‌ರ ದುರ್ಯೊಧನನ ಗತ್ತಿಗೆ ಜಬರ್ದಸ್ತ್ ಆಕ್ಟಿಂಗ್‌ಗೆ ದರ್ಶನ್‌ಗೆ ದರ್ಶನ್ ಸಾಟಿ. ಇತ್ತೀಚಿನ ದಿನಗಳಲ್ಲಿ ಕೆಲ ವೈಯಕ್ತಿಕ ವಿಚಾರಗಳಿಂದ ನಿರ್ದೆಶಕ ಇಂದ್ರಜಿತ್ ಲಂಕೇಶ್ ಹಾಗೂ ದರ್ಶನ್ ಅವರ ಮಧ್ಯೆ ವೈಮನಸ್ಸು ಉಂಟಾಗಿದ್ದು ದೊಡ್ಡ ಬಿರುಗಾಳಿಯನ್ನೇ ಚಿತ್ರರಂಗದಲ್ಲಿ ಏರ್ಪಡಿಸಿದ್ದು, ದರ್ಶನ್ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ಸಿಟ್ಟಿನಲ್ಲಿ ದರ್ಶನ್ ಪ್ರೇಮ್ ಅವರಿಗೆ ಪು’ಡಂಗು ಎಂಬ ಪದಬಳಕೆ ಮಾಡಿದ್ದು, ಮಾಧ್ಯಮದವರನ್ನು ವಾಚ್‌ಮ್ಯಾನ್‌ಗೆ ಹೋಲಿಸಿದ್ದು, ಇನ್ನಿತರ ದರ್ಶನ್ ಅವರ ವರ್ತನೆಯಿಂದ ಚಿತ್ರರಂಗದಲ್ಲಿ ಸದ್ಯ ದೊಡ್ಡ ಚರ್ಚೆಗೆ ದರ್ಶನ್ ಕಾರಣವಾಗಿರೋದಂತು ಸತ್ಯ..