Advertisements

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್. ಆದರೆ ಆಷಾಡ ದಿನದಂದು ಇನ್ನೊಂದು ಕಹಿ ಸುದ್ದಿ.

News

ಕರುನಾಡಿನಲ್ಲಿ ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಜನರಿಗೆ ಆತಂಕ ಹೆಚ್ಚಾಗಿದೆ, ಇನ್ನೂ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ಮಾಡುವುದಕ್ಕೆ ಐದು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ. ಆದರೆ ಇದೀಗ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಆಷಾಡ ಮಾಸದ ಮೂರನೇ ದಿನವಾಗಿರುವ ಈ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

Advertisements

ಐದು ದಿನಗಳ ಕಾಲ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಈ ಶುಕ್ರವಾರ ದಿನದಂದು ಆಷಾಡ ಮಾಸ ಮೂರನೇ ದಿನ ಆಗಿರುವುದರಿಂದ ಚಾಮುಂಡಿ ಬೆಟ್ಟದಲ್ಲಿ ಸರಳವಾಗಿ ಹಾಗೂ ಸಾಂಪ್ರದಾಯಿಕ ಪೂಜೆಯನ್ನ ಮಾಡಲಾಗಿದೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ದರ್ಶನ್ ಅವರು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.

ಚಾಮುಂಡಿ ತಾಯಿಯ ಉತ್ಸವ ದೇವಸ್ಥಾನದ ಆವರಣದಲ್ಲೇ ನಡೆದಿದ್ದು, ಈಗ ಪೂಜಾ ಕಾರ್ಯಗಳು ಮುಗಿದಿವೆ. ನಟ ದರ್ಶನ್ ಅವರು ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆಯನ್ನು ಸಲ್ಲಿಸಿ ದರ್ಶನವನ್ನು ಪಡೆದುಕೊಂಡಿದ್ದಾರೆ.

ಮೂರನೇ ಆಷಾಡ ಶುಕ್ರವಾರದಂದು ಹಾಗೂ ವಾರಾಂತ್ಯ ಶನಿವಾರ ಮತ್ತು ಭಾನುವಾರದಂದು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ತಡೆಯಾಜ್ಞೆಯಾಗಿದೆ. ಹಾಗೆ ಸೋಮವಾರ ಚಾಮುಂಡೇಶ್ವರಿ ಜನ್ಮ ಉತ್ಸವ ಇರುವ ಕಾರಣ ಹಾಗೂ ಆಷಾಡ ಮಾಸ ಕಡೆಯ ಮಂಗಳವಾರ ಸೇರಿ ಸತತವಾಗಿ ಐದು ದಿನಗಳವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧವನ್ನು ಮಾಡಲಾಗಿದೆ.

ಜುಲೈ 17 ರಂದು ಆಷಾಡ ಶುಕ್ರವಾರ ಇದ್ದು ಆ ದಿನದಂದು ಕೂಡ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶವಿಲ್ಲ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಉತ್ತನಹಳ್ಳಿ ದೇವಾಲಯಕ್ಕೂ ನಾಳೆಯಿಂದ ಐದು ದಿನಗಳವರೆಗೆ ಹಾಗೂ, ಕೊನೆಯ ಆಷಾಡ ಜುಲೈ 17 ಶುಕ್ರವಾರದಂದು ಭಕ್ತರಿಗೆ ನಿರ್ಬಂಧವಿದೆ ಎಂದು ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಆದೇಶ ಮಾಡಿದ್ದ್ದಾರೆ.