Advertisements

ಚಾಣಕ್ಯ ಹೇಳಿದ ಹಾಗೇ ಈ 5 ವಿಷಯಗಳನ್ನ ಯಾವುದೇ ಕಾರಣಕ್ಕೂ ಯಾರೊಂದಿಗೂ ಹೇಳಬೇಡಿ !

Uncategorized

ದಿನನಿತ್ಯ ನಾವು ಎಷ್ಟು ಮಾತನಾಡುತ್ತೇವೆ? ನಮಗೆ ಅಷ್ಟೇನೂ ಆಪ್ತರಲ್ಲದವರ ಬಳಿಯೂ ಸಾಕಷ್ಟು ಮಾತನಾಡುತ್ತೇವೆ. ಕಾರಣ ಅವರು ನಮ್ಮ ಅಕ್ಕ ಪಕ್ಕವೇ ಇರುತ್ತಾರೆ. ಅದು ಯಾರೇ ಆಗಿರಲಿ ಸಹೋದ್ಯೋಗಿಗಳು, ಸ್ನೇಹಿತರು, ಅಕ್ಕ ಪಕ್ಕದ ಮನೆಯವರು, ಸಂಬಂಧಿಕರು ಹೀಗೆ ಯಾರೊಂದಿಗೂ ಕೆಲ ವಿಷಯಗಳನ್ನು ನೀವು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆ ವಿಷಯಗಳೆಂದರೆ..

ನಿಮ್ಮ ಸಂಬಳ : ನಿಮ್ಮ ಕುಟುಂಬದವರ ಹೊರತಾಗಿ ನೀವು ಯಾರಿಗೂ ನಿಮ್ಮ ಸಂಬಳ ಎಷ್ಟೆಂದು ಹೇಳಬಾರದು. ಇದಕ್ಕೆ ಹಲವು ಕಾರಣಗಳಿವೆ. ಇದನ್ನು ನೀವು ಮುಚ್ಚಿಡಬೇಕು. ಇಲ್ಲವಾದರೆ ಸಮಯ ಸಂಧರ್ಭ ಬಂದಾಗ ನೀವು ತುಂಬಾ ತೊಂದರೆಗೆ ಸಿಕ್ಕಿ ಕೊಳ್ಳುತ್ತೀರ.

Advertisements

ನಿಮ್ಮ ಮುಂದಿನ ಗುರಿ ಅಥವಾ ಕನಸು : ಅಧ್ಯಯನ ಒಂದರ ಪ್ರಕಾರ ತಮ್ಮ ಮುಂದಿನ ಗುರಿ ಅಥವ ಕನಸು ಏನು ಎಂಬುದನ್ನು ಬೇರೆಯವರ ಬಳಿ ಹೇಳಿಕೊಂಡರೆ ಅದಕ್ಕಾಗಿ ನಡೆಸುವ ನೀವು ಶ್ರಮ ಪ್ರಯತ್ನ ಕಡಿಮೆಯಾಗುತ್ತಿದೆಯಂತೆ. ತಾವು ಆಗಾಗಲೇ ಆ ಗುರಿಯನ್ನು ಸಾಧಿಸಿದ್ದೇವೆ ಎಂಬ ಭ್ರಮೆ ನಿಮ್ಮ ಒಳ ಮನಸಿನಲ್ಲಿ ಮೂಡಿರುತ್ತದೆ. ತಮ್ಮ ಮುಂದಿನ ಗುರಿ ಅಥವಾ ಕನಸು ಏನೆಂದು ಬೇರೆಯವರ ಬಳಿ ಹೇಳದೆ ಅದಕ್ಕಾಗಿ ಅಗತ್ಯ ಪರಿಶ್ರಮ ಪಟ್ಟರೆ ಅದನ್ನು ಬೇಗ ನೆರವೇರಿಸಿಕೊಳ್ಳಬಹುದು ಎಂದು ಆ ಸಂಶೋದನೆ ತಿಳಿಸಿದೆ.

ನಿಮ್ಮ ಪ್ರೀತಿಯ ವಿಷಯ : ಮದುವೆಯಾಗುವವರೆಗೂ ನಿಮ್ಮ ಪ್ರೀತಿಯ ಜೀವನ ಹೇಗಿದೆ, ನಿಮ್ಮ ಪ್ರೇಯಸಿ ಯಾರೆಂದು ಬೇರೆಯವರೊಂದಿಗೆ ಹೇಳಿಕೊಳ್ಳಬಾರದು. ಏಕೆಂದರೆ ನಾಳೆ ಏನಾಗುತ್ತದೆ ಎಂದು ಯಾರೂ ಊಹಿಸಲಾಗದು. ನಿಮ್ಮ ಪ್ರೀತಿಯ ಜೀವನ ಬಹಿರಂಗವಾಗದಿದ್ದರೇ ಹೆಚ್ಚು ಚೆನ್ನಾಗಿ ಇರುತ್ತದೆ ಮತ್ತು ಒಳ್ಳೆ ನೆನಪಾಗಿ ಉಳಿಯುತ್ತದೆ. ಅಲ್ಲದೆ ನಿಮ್ಮ ಪ್ರೀತಿ ಜೀವನದ ವಿಷಯ ಬೇರೆಯವರೊಂದಿಗೆ ಹೇಳಿದರೆ ನಿಮ್ಮ ಸಂಬಂಧ ಹಾ’ಳು ಮಾಡುವ ಅಥವಾ ನಿಮ್ಮ ಘನತೆಗೆ ಧಕ್ಕೆ ತರುವ ಪ್ರಯತ್ನವನ್ನು ನಿಮಗೆ ಆಗದವರು ಮಾಡಬಹುದು.

ಬೇರೆಯವರ ಬಗೆಗಿನ ಬೇಸರ : ನಿಮಗೆ ಯಾರ ಬಗ್ಗೆಯಾದರೂ ಅಸಮಾಧಾನ ಇದ್ದು ಅದನ್ನು ಬೇರೆಯವರೊಂದಿಗೆ ಪದೇ ಪದೇ ಮಾತನಾಡುವುದರಿಂದ ನಿಮ್ಮ ಮನಸಿನಲ್ಲಿ ಋಣಾತ್ಮಕ ಭಾವನೆ ಹೆಚ್ಚಾಗುತ್ತದೆ. ಅದು ನಿಮ್ಮ ನಡವಳಿಕೆಯಲ್ಲೂ ಬಿಂಬಿತವಾಗುತ್ತದೆ. ಅಲ್ಲದೆ ಇದರಿಂದ ಆ ವ್ಯಕ್ತಿಯ ಮೇಲೆ ಶಾಶ್ವತವಾಗಿ ಋಣಾತ್ಮಕ ಭಾವನೆ ಉಳಿದುಕೊಳ್ಳುತ್ತದೆ.

ನಿಮ್ಮ ದೌರ್ಬಲ್ಯ : ನಿಮ್ಮ ದೌರ್ಬಲ್ಯಗಳು ಏನೆಂದು ಯಾರಿಗಾದರೂ ತಿಳಿದು ಬಿಟ್ಟರೆ ಒಂದಲ್ಲ ಒಂದು ದಿನ ಅವರು ಅವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಎಂತಹ ಕಠಿಣ ಪರಿಸ್ಥಿಯಲ್ಲಿಯೂ ನೀವು ನಿಮ್ಮ ದೌರ್ಬಲ್ಯಗಳ ಕುರಿತು ಹೇಳಿಕೊಳ್ಳಬಾರದು. ಅದರಲ್ಲೂ ಅವು ನಿಮ್ಮ ಶ’ತ್ರುಗಳಿಗೆ ತಿಳಿದರೆ ನಿಮಗೆ ಕೆ’ಡುಕು ಮಾಡಲು ಅವರು ಖಂಡಿತವಾಗಿ ಉಪಯೋಗಿಸಿಕೊಳ್ಳುತ್ತಾರೆ.