Advertisements

ಪ್ರತೀ ಬಾರಿ ಸೋಲು ಎದುರಾಗಿ ಜೀವನವೇ ಬೇಡ ಎಂದೆನಿಸಿದಾಗ ಚಾಣಕ್ಯ ಹೇಳಿರುವ ಈ 16 ಮಾತುಗಳನ್ನ ತಪ್ಪದೆ ನೆನಪಿಸಿಕೊಳ್ಳಿ..

Inspire

ನಮಸ್ತೇ ಸ್ನೇಹಿತರೇ, ಜೀವನದಲ್ಲಿ ಪದೇ ಪದೇ ಸೋಲು ಎದುರಾದಾಗ ಜೀವನವೇ ಬೇಡ ಅನ್ನಿಸುವುದು ಸಾಮಾನ್ಯ. ಅದರೆ ಇಂತಹ ಸಮಯದಲ್ಲೇ ನಾವು ಧೈರ್ಯದಿಂದ ಮುನ್ನುಗ್ಗುವುದರಿಂದ ಮಾತ್ರ ಸೋಲನ್ನೇ ಗೆಲುವನ್ನಾಗಿ ಬದಲಾಯಿಸಿಕೊಳ್ಳಬಹುದು. ಇನ್ನು ಹೀಗೆ ಜೀವನದಲ್ಲಿ ನೀವೇ ಏನೇ ಮಾಡಿದ್ರೂ ಅದರಿಂದ ನಿಮಗೆ ಸೋಲಾಗುತ್ತಿದ್ದರೆ ಆಗ ನೀವು ಖ್ಯಾತ ಅರ್ಥಶಾಸ್ತ್ರಜ್ನ್ಯ, ಕೌಟಿಲ್ಯ ಎಂದೇ ಹೆಸರು ಪಡೆದಿರುವ ಚಾಣಕ್ಯ ಹೇಳಿರುವ ಈ ಹದಿನಾರು ಮಾತುಗಳನ್ನ ತಪ್ಪದೇ ನೆನಪಿಸಿಕೊಳ್ಳಿ. ಇದೇ ನಿಮ್ಮ ಗೆಲುವಿಗೆ ದಾರಿಯಾಗುವುದು. ಹಾಗಾದ್ರೆ ಚಾಣಕ್ಯ ಹೇಳಿರುವ ಆ ೧೬ ಮಾತುಗಳೇನು ಎಂಬುದನ್ನ ತಿಳಿಯೋಣ ಬನ್ನಿ..

೧. ನಾವು ಮತ್ತೊಬ್ಬರನ್ನ ನೋಡಿ ಅಥ್ವಾ ಅವರು ಮಾಡುವ ತಪ್ಪುಗಳನ್ನ ನೋಡಿ ಅದರಿಂದ ಕಲಿಯುವುದು ತುಂಬಾ ಇರುತ್ತದೆ. ನಮಗಿರುವ ಆಯಸ್ಸೇ ಚಿಕ್ಕದು. ಹಾಗಾಗಿಯೇ ನಾವೊಬ್ಬರೇ ಎಲ್ಲಾ ತಪ್ಪುಗಳನ್ನ ಮಾಡಲು ಸಾಧ್ಯವಿಲ್ಲ. ಅದಕ್ಕೆ ನಮ್ಮ ಆಯಸ್ಸು ಕೂಡ ಸಾಲುವುದಿಲ್ಲ.

೨. ಅತೀ ಪ್ರಾಮಾಣಿಕರಾಗಿರುವುದು ಸಹ ತಪ್ಪು. ಹಾಗಾಗಿಯೇ ಜನರು ತಮ್ಮಲ್ಲೇ ಮಾತನಾಡಿಕೊಳ್ಳುವುದಂಟು. ಅದು ಏನೆಂದರೆ, ತುಂಬಾ ಒಳ್ಳೆಯವರಿಗೆ ಬೇಗ ಸಾ’ವು ಬರುತ್ತಪ್ಪಾ, ಆದರೆ ಈ ಕೆಟ್ಟವರಿಗೆ ಬೇಗ ಸಾ’ವು ಬರೋದೇ ಇಲ್ಲವೇ ಎಂಬುದಾಗಿ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ನೇರವಾಗಿ ಬೆಳೆದಿರುವ ಮರಗಳು ಬೇಗೆ ನೆಲಕ್ಕೆ ಉರುಳುತ್ತವೆ. ಆದರೆ ಡೊಂಕು ಡೊಂಕಾಗಿ ಬೆಳೆದಿರುವ ಮರಗಳು ನಿಧಾವಾಗಿ ನೆಲಕ್ಕೆ ಬೀಳುತ್ತವೆ.

Advertisements

೩. ಅತೀ ದೊಡ್ಡ ಗುರು. ರಹಸ್ಯಗಳನ್ನ ಯಾವುದೇ ಕಾರಣಕ್ಕೂ ಯಾರಿಗೂ ಕೂಡ ಹೇಳಬೇಡಿ. ಏಕೆಂದರೆ ನೀವು ಮಾಡುವ ಈ ತಪ್ಪುಗಳೇ ಮುಂದೆ ನಿಮಗೆ ಮುಳ್ಳಾಗುವ ಸಾಧ್ಯತೆಗಳೇ ಹೆಚ್ಚು.

೪. ಸ್ನೇಹ ಅಮೂಲ್ಯವಾದದ್ದು. ಆದರೆ ಯಾವುದೇ ಸ್ನೇಹದ ಹಿಂದೆ ಸ್ವಾರ್ಥ ಇದ್ದೆ ಇರುತ್ತದೆ. ನಾವು ನಂಬಲೇಬೇಕಾದ ಕಹಿ ಸತ್ಯ ಏನೆಂದರೆ ಸ್ವಾರ್ಥ ರಹಿತವಾದ ಸ್ನೇಹವೇ ಇಲ್ಲ.

೫. ಹಾವೂ ಕೂಡ ತಾನು ಜೀವಂತವಾಗಿ ಬದುಕಬೇಕಾದ್ರೆ ತನ್ನಲ್ಲಿ ವಿ’ಷ ಇಲ್ಲದಿದ್ದರೂ ಕೂಡ ಬುಸುಗುಡುವುದನ್ನ ಮಾತ್ರ ಬಿಡುವುದಿಲ್ಲ. ಒಂದು ವೇಳೆ ಹಾವು ಶಾಂತವಾಗಿದ್ದರೆ ತನ್ನ ಜೀವವನ್ನೇ ಕಳೆದು ಕೊಳ್ಳಬೇಕಾಗುತ್ತದೆ.

೬. ಭಯ ನಮ್ಮಲ್ಲಿ ಮನೆ ಮಾಡಿದ್ದರೆ ನಾವು ಯಾವುದೇ ಕೆಲಸವನ್ನ ಸಾಧಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆ ಭಯವೇ ನಮ್ಮನ್ನ ಮುಂದೆ ಹೋಗಲು ಬಿಡದೆ ಇಡೀ ಜೀವನವನ್ನೇ ಹಾಳು ಮಾಡುತ್ತೆ. ಒಂದು ವೇಳೆ ನಿಮ್ಮ ನ್ನ ಆವರಿಸಲು ನಿಮ್ಮ ಬಳಿ ಬಂದರೆ, ಅದನ್ನ ಹತ್ತಿರ ಕೂಡ ಸುಳಿಯಲು ಬಿಡಬೇಡಿ. ಭಯದ ಮೇಲೆ ಆಕ್ರಮಣ ಮಾಡಿ ಮೆಟ್ಟಿ ನಿಲ್ಲಿ.

೭. ನೀವು ಯಾವುದೇ ಕೆಲಸವನ್ನ ಮಾಡುವ ಮುನ್ನ ನಮಗೆ ನಾವೇ ಈ ಮೂರು ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು. * ಆ ಕೆಲಸವನ್ನ ನಾನೇಕೆ ಮಾಡುತ್ತಿದ್ದೇನೆ? *ಇದರಿಂದ ಸಿಗುವ ಲಾಭವಾದರೂ ಏನು? ಇದರಲ್ಲಿ ನಾನು ಗೆಲ್ಲುತ್ತೇನೆಯೇ? ಈ ಮೂರು ಪ್ರಶ್ನೆಗಳಿಗೆ ಉತ್ತರ ಸಿಕ್ಕಲ್ಲಿ ಮಾತ್ರ ಮುಂದುವರಿದು ಆ ಕೆಲಸಗಳನ್ನ ಮಾಡಿ.

೮. ಏನೇ ಕೆಲಸವನ್ನ ಮಾಡಲು ನೀವು ಮುಂದಾದಲ್ಲಿ, ಇದರಿಂದ ನಾನು ಸೋತು ಹೋಗುತ್ತೇನೆ ಎಂಬ ಭಯವಾಗಲಿ, ಅನುಮಾನಗಳನ್ನಾಗಲಿ ಇಟ್ಟುಕೊಳ್ಳಬೇಡಿ. ನೀವು ಮಾಡಲು ಇಚ್ಛಿಸಿದ ಕೆಲಸವನ್ನ ಅರ್ಧಕ್ಕೆ ಬಿಡದೇ ಮುನ್ನುಗ್ಗಿ. ಪ್ರಾಮಾಣಿಕವಾಗಿ ನಿಮ್ಮ ಕೆಲಸವನ್ನ ನಿರ್ವಹಣೆ ಮಾಡಿ. ಇದರಿಂದ ನಿಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ.

೯. ಹೂವಿನ ಸುಗಂಧದ ವಾಸನೆ ಕೇವಲ ಗಾಳಿ ಇರುವ ಕಡೆ ಹರಡುತ್ತದೆ. ಆದರೆ ಯಾವುದೇ ವ್ಯಕ್ತಿಯ ಒಳ್ಳೆಯ ತನ, ಒಳ್ಳೆಯ ವ್ಯಕ್ತಿತ್ವ ಎಲ್ಲಾ ದಿಕ್ಕುಗಳಲ್ಲಿ ಕೂಡ ಹರಡುತ್ತದೆ.

೧೦, ಸ್ನೇಹಿತರೇ, ಯಾವುದೇ ವ್ಯಕ್ತಿ ತನ್ನ ಹುಟ್ಟಿನಿಂದ ದೊಡ್ಡವನಾಗುವುದಿಲ್ಲ. ಆದರೆ ಆ ವ್ಯಕ್ತಿ ಮಾಡುವ ಕೆಲಸದಿಂದ ದೊಡ್ಡವನಾಗುತ್ತಾನೆ.

೧೧. ನಿಮ್ಮ ಅಂತಸ್ತಿಗೆ ಮೇಲ್ಪಟ್ಟ ಅಥ್ವಾ ಕೆಳಗಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸುವುದು ಉತ್ತಮವಲ್ಲ. ಈ ತರಹದ ಸ್ನೇಹ ಎಂದೆಂದಿಗೂ ಸಂತೋಶವನ್ನಂತೂ ನೀಡುವುದಿಲ್ಲ.

೧೨. ನಿಮ್ಮ ಮಗುವನ್ನ ಮೊದಲ ೫ ವರ್ಷಗಳ ಕಾಲ ತುಂಬಾ ಮುದ್ದಾಗಿ ಸಾಕಿ. ೫ ವರ್ಷಗಳು ಆದ ಬಳಿಕ ಅವರು ಮಾಡುವ ತಪ್ಪುಗಳನ್ನ ತಿದ್ದಿ ಬುದ್ದಿ ಹೇಳಿ. ಹದಿನಾರು ವರ್ಷವಾದ ಬಳಿಕ ಅವರನ್ನ ಸ್ನೇಹಿತನ ರೀತಿ ನೋಡಿ.

೧೩. ಮೂರ್ಖರಾದ ವ್ಯಕ್ತಿಗಳಿಗೆ ಪುಸ್ತಕಗಳು, ಕಣ್ಣು ಕಾಣದ ವ್ಯಕ್ತಿಗೆ ಕನ್ನಡಿಗಿರುವಷ್ಟೇ ನಿರುಪಯೋಗವಾಗಿದೆ. ೧೪. ನಿಮ್ಮ ನಿಜವಾದ ಸ್ನೇಹಿತ ನಿಮ್ಮ ವಿಧ್ಯೆ. ವಿಧ್ಯೆಯೇ ನಿಮಗೆ ಎಂದೆಂದಿಗೂ ಯವ್ವನ, ವಿಧ್ಯೆಯೇ ಎಂದೆಂದಿಗೂ ನಿಮಗೆ ನಿಜವಾದ ಭೂಷಣ.

೧೫. ನಿಮ್ಮಲ್ಲೇ ದೇವರಿದ್ದಾನೆ. ನಿಮ್ಮ ಭಾವನೆಯೇ ದೇವರು. ನಿಮ್ಮ ಆತ್ಮವೇ ದೇವಸ್ಥಾನ ಎಂದು ತಿಳಿಯಿರಿ. ಹಾಗೆಯೇ ಪಾಲಿಸಿ ಕೂಡ. ೧೬. ಜಗತ್ತಿನ ಅತೀ ದೊಡ್ಡ ಶಕ್ತಿಯೇ ಯುವಶಕ್ತಿ. ಹಾಗೂ ಪ್ರಪಂಚದ ಅತೀ ದೊಡ್ಡ ಶಕ್ತಿ ಯುವತಿಯ ಸೌಂದರ್ಯ ಕೂಡ.