Advertisements

ಚಂದನ್ ಕವಿತಾ ನಿಶ್ಚಿತಾರ್ಥದ ಮದುರ ಕ್ಷಣಗಳು ಹೇಗಿತ್ತು ನೋಡಿ!

Uncategorized

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯವಾಗಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಸಾಕಷ್ಟು ಖ್ಯಾತಿ ಪಡೆದ ಜೋಡಿ ಚಂದನ್ ಕುಮಾರ್ ಹಾಗೂ ಕವಿತಾ ಗೌಡ.. ಈ ಸೀರಿಯಲ್ ನಲ್ಲಿ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೊತೆಯಾಗಿ ನಟಿಸಿ ಕಿರುತೆರೆ ಲೋಕದಲ್ಲಿ ಹಿಟ್ ಜೋಡಿ ಎನಿಸಿಕೊಂಡಿದ್ದರು. ಇನ್ನೂ ಈ ಸೀರಿಯಲ್ಲಿ ನಟಿಸುವಾಗಲೇ ಇಬ್ಬರ ನಡುವೆ ಸ್ನೇಹ ಚಿಗುರಿತ್ತು.. ನಂತರ ದಿನಗಳಲ್ಲಿ ಇವರಿಬ್ಬರ ನಡುವೆ ಆಪ್ತತೆ ಹೆಚ್ಚಾಯಿತು..

Advertisements

ಆದರೆ ಎಂದೂ ಕೂಡ ಇವರಿಬ್ಬರು ತಮ್ಮ ಪ್ರೀತಿಯ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ನೆಟ್ಟಿಗರಿಗೂ ಕೂಡ ಇವರಿಬ್ಬರ ಒಡನಾಟ ನೋಡಿ ಅನುಮಾನ ಶುರುವಾಗಿತ್ತು.. ಕವಿತಾ ಮತ್ತು ಚಂದನ್ ಕುಮಾರ್ ನೇರವಾಗಿ ಏನನ್ನು ಕೂಡ ಹೇಳಿಕೊಳ್ಳುತ್ತಿರಲಿಲ್ಲ. ಆಗಿದ್ದರು ಕೂಡ ಅವರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅನೇಖ ಸಾಕ್ಷಿಗಳು ಸಿಗಲು ಆರಂಭಿಸಿದವು ಇಬ್ಬರೂ ಜೊತೆಯಾಗಿ ಸುತ್ತಾಡುತ್ತಿದ್ದರು..

ಇನ್ನೂ ಚಂದನ್ ಕುಮಾರ್ ಅವರು ಇತ್ತೀಚೆಗೆ ಹೊಸ ಪೋಸ್ಟ್ ಹಾಕಿಕೊಳ್ಳುವ ಮೂಲಕ ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರು. ಅಂತೆಯೇ ಏಪ್ರಿಲ್ ಒಂದರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.. ಈ ಪೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಮದುವೆ ದಿನಾಂಕ ಇನ್ನಷ್ಟು ಅಧಿಕೃತಗೊಳ್ಳಬೇಕಿದೆ.. ಇನ್ನೂ ನಟ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅವರು ಕಿರುತೆರೆ ಮಾತ್ರವಲ್ಲದೇ ಸ್ಯಾಂಡಲ್ವುಡ್ ನಲ್ಲೂ ಕೂಡ ಎಂಟ್ರಿಕೊಟ್ಟಿದ್ದು ಬೆಳ್ಳಿ ಪರದೆಯ ಮೇಲೆ ಕೂಡ ಮಿಂಚಿದ್ದಾರೆ.