Advertisements

ಕನ್ನಡಾನ ಇಂಟರ್ನ್ಯಾಷನಲ್ ಮಟ್ಟಕ್ಕೆ ತೆಗೆದುಕೊಂಡು ಹೋಗ್ತೀನಿ ಅಂತ ಹೇಳಿ ಹೆಂಡತಿ ಜೊತೆ ರಸಂ ಮಾಡ್ತಿದ್ದೀಯಲ್ಲ ! ಮತ್ತೆ ಟ್ರೋಲ್ ಆದ ಬಿಗ್ ಬಾಸ್ ದಂಪತಿ..

Entertainment

ನಮಸ್ತೇ ಸ್ನೇಹಿತರೇ, ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರೆಟಿಗಳನ್ನ ಟ್ರೋಲ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಬಿಗ್ ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಅವರಂತೂ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ. ಈಗ ರಸಂ ವಿಷಯವೊಂದಕ್ಕೆ ನೆಟ್ಟಿಗರೊಬ್ಬರು ತನ್ನ ಪತ್ನಿ ಬಗ್ಗೆ ಮಾತನಾಡಿದಕ್ಕಾಗಿ ಚಂದನ್ ಸಹ ಅವರಿಗೆ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಇನ್ನು ಚಂದನ್ ನಿವೇದಿತಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದು ಆಗಾಗ ತಮ್ಮ ವಿಡಿಯೋ ಹಾಗೂ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನು ಇತ್ತೀಚೆಗಷ್ಟೇ ನಟ ಸೃಜನ್ ಲೋಕೇಶ್ ನಡೆಸಿಕೊಡುವ ಕಿರುತೆರೆಯ ಕಾಮಿಡಿ ಶೋ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ನಿವೇದಿತಗೌಡ ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಪೋರ್ಕ್ ಮೂಲಕ ಮುದ್ದೆ ತಿಂದಿದ್ದು, ಅದರ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದ್ದವು. ಇನ್ನು ಪೋರ್ಕ್ ಮೂಲಕ ಮುದ್ದೆ ತಿಂದಿದ್ದರ ಕಾರಣ ಇದು ಟೀಕಿಗೆ ಕಾರಣವಾಗಿದ್ದಲ್ಲದೆ, ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

Advertisements

ಇನ್ನು ಈಗ ಚಂದನ್ ಮತ್ತು ನಿವೇದಿತಾ ರಸಂ ಮಾಡುವ ಜಾಹಿರಾತು ಒಂದರ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಮತ್ತೆ ಟ್ರೋಲಿಗರ ಬಾಯಿಗೆ ತುತ್ತಾಗಿದ್ದಾರೆ. ಇನ್ನು ಈ ವೀಡಿಯೊ ನೋಡಿದವರೊಬ್ಬರು ಏನ್ ಗುರು ಕನ್ನಡಾನ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗ್ತೀನಿ ಎಂದು ಹೇಳಿ ಹೆಂಡತಿ ಜೊತೆ ರಸಂ ಮಾಡುತ್ತಾ ಕುತ್ತಿದ್ದೀರಲ್ಲ ಎಂದು ಚಂದನ್ ಶೆಟ್ಟಿ ಇನ್ಸ್ಟಾಗ್ರಾಮ್ ಖಾತೆಯ ಫೋಟೋವೊಂದಕ್ಕೆ ಕಾಮೆಂಟ್ ಮಾಡಿದ್ದಾರೆ.

ಇನ್ನು ಆ ವ್ಯಕ್ತಿಯ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿರುವ ಚಂದನ್ ಶೆಟ್ಟಿ ಈ ರೀತಿಯಾಗಿ ರಿಪ್ಲಯ್ ನೀಡಿದ್ದಾರೆ. ‘ಅಲ್ಲಾ ಗುರು ನಾನು ರಸಂ ಆದ್ರೂ ಮಾಡ್ತೀನಿ, ಕೋಳಿ ಸಾರು ಆದ್ರೂ ಮಾಡ್ತೀನಿ..ನಿನ್ನ ಮನೆ ಸ್ಟವ್ ಮೇಲೆ ಮಾಡ್ತಾ ಇದ್ದೀನಾ..ಈಗಾಗಲೇ ನನ್ನ ಕೆಲ ಹಾಡುಗಳೆಲ್ಲಾ ಫಾರಿನ್ ಪಬ್ ಗಳಲ್ಲಿ ಪ್ಲೇ ಆಗ್ತಾ ಇದ್ದಾವೆ. ನಮ್ಮಂತ ಕಲಾವಿದರನ್ನ ನಿಮ್ಮಂತವರು ಯಾವಾಗಲು ತುಳಿಯೋಕೆ ನೋಡ್ತೀರಾ..ಆದ್ರೆ ನನ್ನ ಪ್ರಕಾರ ನಿಮ್ಮಂತಹ ದ್ವೇಷ ಮಾಡುವವರು ಇದ್ದರೇನೇ ನಮ್ಮಂತವರಿಗೆ ಸ್ಫೂರ್ತಿ..ನೀವೂ ಹೀಗೆ ನಮ್ಮ ಮೇಲೆ ದ್ವೇಷ ಮಾಡುತ್ತಲೇ ಇರಿ..ನಾವು ನಮ್ಮ ಗುರಿ ಮುತ್ತೊಂದರ ಕಡೆಗೆ ಕೆಲಸ ಮಾಡುತ್ತೇವೆ ಎಂದು ಚಂದನ್ ಶೆಟ್ಟಿ ಕಾಮೆಂಟ್ ಮಾಡಿದ್ದು ಕೆಲವರ ಈ ಕಾಮೆಂಟ್ ಗೆ ಕಾಲೆಳೆಯುವ ಕೆಲಸ ಮಾಡಿದ್ರೆ ಮತ್ತೆ ಕೆಲವರು ಚಂದನ್ ಮಾತಿಗೆ ಎಸ್ ಅಂದಿದ್ದಾರೆ.