Advertisements

ಕಳೆದ 5 ವರ್ಷಗಳಿಂದ ನದಿಯ ಬಳಿ ಬಂದು ಇಡೀ ದಿನ ನಿಲ್ಲುವ ಈ ವ್ಯಕ್ತಿ ಮಾಡುವ ಕೆಲಸವಾದರೂ ಏನು ಗೊತ್ತಾ ? ದೊಡ್ಡಗುಣ ಅಂದ್ರೆ ಇದೆ ಆಲ್ವಾ..

Inspire

ನಮಸ್ತೇ ಸ್ನೇಹಿತರೇ, ಈಗಂತೂ ಎಲ್ಲಿ ನೋಡಿದರೂ ಪ್ಲಾಸ್ಟಿಕ್. ಮನುಕುಲಕ್ಕೆ ಮಾ’ರಕವಾಗಿರುವ ಈ ಪ್ಲಾಸ್ಟಿಕ್ ಇಲ್ಲದೆ ಜನರ ಜೀವನವೇ ನಡೆಯುವುದಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಜನರ ಜೀವನದ ಜೊತೆಗೆ ಬೆರೆತು ಹೋಗಿದೆ. ಮುಂದೊಂದು ದಿನ ಈ ಪ್ಲಾಸ್ಟಿಕ್ ನಿಂದಲೇ ಮಾನವ ಜನಾಂಗ ನಾ’ಶವಾಗುವುದರಲ್ಲಿ ಸಂದೇಹವಿಲ್ಲ. ಇನ್ನು ಜನ ಕೂಡ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಪ್ಲಾಸ್ಟಿಕ್ ಸಂಬಂಧಪಟ್ಟ ವಸ್ತುಗಳನ್ನ ಬಿಸಾಡುತ್ತಾರೆ. ನಮ್ಮ ಜೀವ ಜಲವಾಗಿರುವ ಕೆರೆ, ನದಿ, ಸಮುದ್ರಗಳಲ್ಲಿ ಕೂಡ ಬಿಸಾಡಿ ನೀರನ್ನ ಕಲುಷಿತ ಮಾಡುತ್ತಿದ್ದಾರೆ. ಇದನ್ನ ತಡೆಯುವ ಸಲುವಾಗಿ ಸರ್ಕಾರಗಳು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ.

Advertisements

ಆದರೆ ಇಲ್ಲೊಬ್ಬರು ರಿಯಲ್ ಲೈಫ್ ಹೀರೊ ಇದ್ದಾರೆ. ಅವರೇ ನಾಸಿಖ್ ನ ಇಂದಿರಾನಗರದ ವಾಸಿಯಾಗಿರುವ ಚಂದ್ರ ಕಿಶೋರ್ ಪಾಟೀಲ್. ಇಡೀ ದಿನ ಗೋದಾವರಿ ನದಿಯ ಬಳಿ ಬೆಳಿಗ್ಗೆಯಿಂದ ರಾತ್ರಿ 11ಗಂಟೆವರೆಗೆ ಬಂದು ನಿಲ್ಲುತ್ತಾರೆ. ಅಲ್ಲಿ ಜನರು ನದಿಗೆ ಪ್ಲಾಸ್ಟಿಕ್ ವೇಸ್ಟ್ ನ್ನ ಬಿಸಾಡದಂತೆ ತಡೆಯುತ್ತಿದ್ದಾರೆ. ಕಳೆದ ಇದು ವರ್ಷಗಳಿಂದ ಪ್ರತೀ ದಿನ ಇದೇ ರೀತಿ ವಿಸಿಲ್ ಹಿಡಿದುಕೊಂಡು ಬಂದು ಗೋದಾವರಿ ನದಿಯ ಬಳಿ ನಿಲ್ಲುತ್ತಾರೆ. ಜನರು ಪವಿತ್ರ ನದಿ ಗೋದಾವರಿಗೆ ಪ್ಲಾಸ್ಟಿಕ್ ಬಿಸಾಡಲು ಪ್ರಯತ್ನ ಮಾಡಿದಾಗಲೆಲ್ಲಾ ವಿಶಿಲ್ ಹೊಡೆದು ತಡೆಯುತ್ತಾರೆ. ನೀರಿಗೆ ಪ್ಲಾಸ್ಟಿಕ್ ಬಿಸಾಡದಂತೆ ಬುದ್ದಿ ಹೇಳುತ್ತಾರೆ. ಆದಾಗ್ಯೂ ಯಾರಾದರೂ ಅವರ ಕೆಲಸವನ್ನ ವಿರೋಧ ಮಾಡಿದ್ರೆ ಅದೇ ನದಿಯ ನೀರನ್ನ ಪ್ಲಾಸ್ಟಿಕ್ ಬಾಟಲಿನಲ್ಲಿ ತುಂಬಿಸಿ ಒಂದು ಸಿಪ್ ಕುಡಿಯುವಂತೆ ಹೇಳುತ್ತಾರೆ.

ಅಷ್ಟೇ ಅಲ್ಲದೆ ಪ್ಲಾಸ್ಟಿಕ್ ಮಾಲಿನ್ಯದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅವರಿಗೆ ತಿಳಿ ಹೇಳುತ್ತಾರೆ. IFS ಅಧಿಕಾರಿಯಾಗಿರುವ ಶ್ವೇತಾ ಬೊಡ್ಡು ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಂದ್ರ ಕಿಶೋರ್ ಪಾಟೀಲ್ ರವರು ದಿನವಿಡೀ ಗೋದಾವರಿ ನದಿಯ ಬಳಿ ನಿಂತು ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿ ನೀರಿಗೆ ಎಸೆಯುವುದನ್ನ ತಡೆದು ಜನರಲ್ಲಿ ಪರಿಸರದ ಮೇಲಾಗುವ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬಗ್ಗೆ ಬರೆದುಕೊಂಡಿದ್ದಾರೆ. ಸ್ನೇಹಿತರೇ, ಈಗ ಹೇಳಿ ಯಾರು ನಮ್ಮ ರಿಯಲ್ ಹೀರೋ ಅಂತ. ಸಿನಿಮಾ ಸೆಲಬ್ರೆಟಿಗಳೋ, ಕ್ರಿಕೆಟ್ ಆಟಗಾರರೋ. ಇವರ್ಯಾರು ಅಲ್ಲ. ನಮ್ಮ ಮುಂದಿನ ಜನಾಂಗಕ್ಕೆ ಜೀವ ಜಲವನ್ನ ಉಳಿಸಲು ಮಾಡುತ್ತಿರುವ ಹೋರಾಟವನ್ನ ಕಳೆದ ೫ ವರ್ಷಗಳನ್ನು ಮಾಡುತ್ತಿರುವ ಚಂದ್ರ ಕಿಶೋರ್ ಪಾಟೀಲ್ ರವರೆ ರಿಯಲ್ ಹೀರೋ ಅಲ್ಲವೇ..ಇಡೀ ಮನುಕುಲದ ಜನಾಂಗಕ್ಕೆ ಇವರು ಸ್ಫೂರ್ತಿ ಎಂದರೆ ತಪ್ಪಾಗೋದಿಲ್ಲ.