Advertisements

ಪ್ರಪಂಚವನ್ನೇ ನಕ್ಕುನಲಿಸಿದ್ದವನ ದೇಹ ಕೊನೆಗೆ ಏನಾಯ್ತು ಗೊತ್ತಾ ?

Cinema

ಸ್ನೇಹಿತರೇ ಇಡೀ ಪ್ರಪಂಚವನ್ನೇ ನಗೆಗಡಲಿನಲ್ಲಿ ತೇಲಿಸಿದ ನಟ ಚಾರ್ಲಿ ಚಾಪ್ಲಿನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಿಜ ಜೀವನದಲ್ಲಿ ಅಗಣಿತ ನೋವನ್ನು ನುಂಗಿ ಬದುಕಿದ ಈ ನಟ ತೆರೆಮೇಲೆ ಇಡೀ ಜಗತ್ತನ್ನು ನಕ್ಕುನಗಿಸಿದ ಇಂತಹ ಮಹಾನ್ ನಟನ ಜೀವನದಲ್ಲಿ ನಡೆದ ಆ ಒಂದು ಘನಘೋರ ಘಟನೆ ನಿಜಕ್ಕೂ ಮಾನವ ಸಮಾಜ ತಲೆತಗ್ಗಿಸುವಂಥದ್ದು. ಹಾಗಾದರೆ ಘಟನೆ ಏನೆಂಬುದನ್ನು ತಿಳಿಯೋಣ ಬನ್ನಿ. ಕಡುಬಡತನದಲ್ಲಿ ಹುಟ್ಟಿ ಬೆಳೆದ ಚಾರ್ಲಿ ಚಾಪ್ಲಿನ್ ರವರು ಮೂಲತಹ ಲಂಡನ್ ರವರು.

Advertisements

ಮೂಕಿ ಹಾಸ್ಯ ಚಿತ್ರಗಳ ಮೂಲಕವೇ ಫೇಮಸ್ ಆದ ನಟ. ಅತ್ಯುತ್ತಮ ನಟನೆಗೆ ಹೆಸರಾಗಿದ್ದ ಚಾರ್ಲಿ ಚಾಪ್ಲಿನ್ 1977 ರ ಡಿಸೆಂಬರ್ 25ರಂದು ಇಹಲೋಕ ತ್ಯಜಿಸುತ್ತಾರೆ. ಆ ದಿನ ಇಡೀ ಜಗತ್ತು ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿ ಇದ್ದರೆ, ಮಹಾನ್ ನಟ ಚಾರ್ಲಿ ಚಾಪ್ಲಿನ್ ಅದೇ ದಿನ ಸ್ವರ್ಗಸ್ತರಾಗಿದ್ದರು. ಇನ್ನು ಚಾರ್ಲಿ ಚಾಪ್ಲಿನ್ ಅವರ ಅಂತ್ಯಸಂಸ್ಕಾರದ ವೇಳೆ ಅವರ ಲಕ್ಷಾಂತರ ಅಭಿಮಾನಿಗಳು ಅವರ ಮನೆಯ ಮುಂದೆ ಜಮಾವಣೆ ಆಗಿದ್ದರು. ಈ ಸಮಯದಲ್ಲಿ ಚಾಪ್ಲಿನ್ ಅವರು ತಮ್ಮ ಕುಟುಂಬ ಸಮೇತ ಸ್ವಿಟ್ಜರ್ಲೆಂಡ್ ವಾರ್ಡ್ ನಗರದಲ್ಲಿ ವಾಸವಾಗಿದ್ದರು. ಅವರ ಪಾರ್ಥಿವ ಶರೀರವನ್ನು ವಾರ್ಡ್ ಬಳಿಯ ಸೆಮೆಟ್ರಿಗೆ ಕೊಂಡೊಯ್ದು ಸಕಲ ಗೌರವಗಳೊಂದಿಗೆ ಹೂಳಲಾಯಿತು. ಚಾಪ್ಲಿನ್ ತನ್ನ ನಾಲ್ಕನೇ ಪತ್ನಿ ಹೂನಾ ಹಾಗೂ ತನ್ನ ಎಂಟು ಮಕ್ಕಳನ್ನು ಬಿಟ್ಟು ಇಹ ಲೋಕ ತ್ಯಜಿಸಿದ್ದರು. ಅವತ್ತು ಮಾರ್ಚ್ 1978 ರ ಇಸ್ವಿ, ಚಾಪ್ಲಿನ್ ಅವರ ಪತ್ನಿ ಹೂನಾಳ ನಿವಾಸಕ್ಕೆ ಅನಾಮಿಕ ಫೋನ್ ಕರೆಯೊಂದು ಬರುತ್ತೆ. ಅತ್ತಕಡೆಯಿಂದ ಮಾತನಾಡಿದ ಅನಾಮಿಕ ವ್ಯಕ್ತಿ ತನ್ನ ಬಳಿ ಚಾಪ್ಲಿನ್ ಅವರ ಶವ ವಿರುವ ಕಪಿನ್ ನನ್ನ ಬಳಿ ಇರುವುದೆಂದು, ಅದು ಬೇಕಾದಲ್ಲಿ 6 ಲಕ್ಷ ಡಾಲರ್ ಹಣವನ್ನು ನೀಡಬೇಕೆಂದು ಬೆದರಿಕೆ ಹಾಕುತ್ತಾನೆ.

ಬಳಿಕ ಆಗುಂತಕನ ಕರೆ ಕಟ್ ಆಗುತ್ತೆ. ಆಗ ಭಯಭೀತಗೊಂಡು ಹೂನಾ ಚಿಂತೆ ಮಾಡುತ್ತ ಕುಳಿತುಕೊಳ್ಳುತ್ತಾಳೆ. ತಕ್ಷಣವೇ ಅನಾಮಿಕ ಕರೆಯ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುತ್ತಾಳೆ. ತಡ ಮಾಡದ ಅಧಿಕಾರಿಗಳು ವಾರ್ಡ್ ಬಳಿಯಿದ್ದ ಸೆಮೆಟ್ರಿಗೆ ಹೋಗ್ತಾರೆ. ಆದರೆ ಅಲ್ಲಿ ಹೋಗಿ ನೋಡಿದಾಗ ನಿಜವಾಗಲೂ ಚಾಪ್ಲಿನ್ ದೇಹವಿದ್ದ ಕಪಿನ್ ನನ್ನು ಯಾರೋ ಆಗುಂತಕರು ಕದ್ದಿರುವುದು ಕಂಡುಬರುತ್ತದೆ. ಇದಾದ ಕೆಲ ದಿನಗಳ ನಂತರ ಹೂನಾಳ ನಿವಾಸಕ್ಕೆ ಒಂದು ಅನಾಮಿಕ ಪಾರ್ಸಲ್ ಕವರ್ ಬರುತ್ತೆ. ಅದರಲ್ಲಿ ಕರೆ ಮಾಡಿದ ಅನಾಮಿಕ ವ್ಯಕ್ತಿಯು ಚಾಪ್ಲಿನ್ ಶವವಿದ್ದ ಕಪಿನ್ ಫೋಟೋಗಳನ್ನು ಕಳುಹಿಸಿರುತ್ತಾನೆ. ಅದೇ ಬೆನ್ನಲ್ಲೇ ಮತ್ತೆ ಅನಾಮಿಕ ಕರೆ ಬರುತ್ತೆ. ಆಗ ಹೂನಾ ಅಷ್ಟು ಹಣ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾಳೆ. ಆಗ ಅನಾಮಿಕರು ಹಣ ನೀಡದಿದ್ದಲ್ಲಿ ನಿಮ್ಮ ಮಕ್ಕಳನ್ನು ಪರಲೋಕಕ್ಕೆ ಅಟ್ಟುವುದಾಗಿ ಬೆದರಿಕೆ ಹಾಕುತ್ತಾರೆ.ಇದರಿಂದ ಗಾಬರಿಯಾದ ಹೂನಾ ಪೊಲೀಸರ ಮೊರೆ ಹೋದಾಗ ಧೈರ್ಯ ಹೇಳಿದ ಅಧಿಕಾರಿಗಳು, ಆಗುಂತಕರು ಬೇಡಿಕೆಗೆ ಒಪ್ಪುವಂತೆ ನಟಿಸಿ ಅವರನ್ನು ಭೇಟಿಯಾಗುವುದಕ್ಕೆ ಸ್ಥಳವನ್ನು ನಿಗದಿ ಮಾಡಿ ನಂತರದ ವಿಷಯ ನಮಗೆ ಬಿಡಿ ಎಂದು ಹೇಳುತ್ತಾರೆ. ಬಳಿಕ ಏನಾಯ್ತು ಆ ಆಗುಂತಕರು ಸಿಕ್ಕಿಬಿದ್ದಿರಾ? ನಿಜಕ್ಕೂ ಅವರ ಬೇಡಿಕೆ ಏನಿತ್ತು? ತಿಳಿಯಲು ಈ ವಿಡಿಯೋ ನೋಡಿ..