Advertisements

ದೇವಸ್ಥಾನದಲ್ಲಿ ಮಂಗಳಮುಖಿಯನ್ನು ಅವಮಾನಿಸಿದ ಅರ್ಚಕ.. ಅದಕ್ಕೆ ಮಂಗಳಮುಖಿ ಮಾಡಿದ್ದು ಏನ್ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಮಂಗಳಮು’ಖಿಯರನ್ನು ದೇವರ ರೂಪದಲ್ಲಿ ನೋಡಿ ಅವರಿಂದ ಆಶಿರ್ವಾದ ಪಡೆಯುವ ಎಷ್ಟೋ ಜನರು ಇಗಲೂ ಇದ್ದಾರೆ. ಅವರು ಆಶಿರ್ವಾದ ಮಾಡಿದರೆ ಒಳ್ಳೆಯದು ಆಗುತ್ತದೆ ಅನ್ನೋದು ಅವರ ನಂಬಿಕೆ. ಹಾಗೆ ಇಲ್ಲಿ ಒಬ್ಬ ಮಂಗಳಮು’ಖಿಗೆ ದೇವಸ್ತಾನದ ಅರ್ಚಕರು ದೇವಸ್ಥಾನದಲ್ಲಿ ಅವಮಾನ ಮಾಡಿದ ನಂತರ ತನ್ನ ಜೀವನವನ್ನೇ ಬದಲಿಸಿಕೊಂಡಿರುವ ಘಟನೆ ನಡೆದಿದೆ.. ಅದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ‌. ರವಿಯಮ್ಮ ಅನ್ನುವ ಮುಂಗಳಮುಖಿ ಚೆನ್ನೈನ ಒಂದು ದೇವಸ್ಥಾನಕ್ಕೆ ಹೋಗಿದ್ದಾರೆ. ಇನ್ನೂ ಅಲ್ಲಿ ದೇವರ ದರ್ಶನ ಮಾಡುವಾಗ ಅಲ್ಲಿನ ಪೂಜಾರಿ ಮಂಗಳಮು’ಖಿಗೆ ಅವಮಾನ ಮಾಡಿದ್ದಾರೆ..

Advertisements

ಆಗ ನಡೆದ ಈ ಒಂದು ಘಟನೆ ಅವರ ಮನಸ್ಸಿನಲ್ಲಿ ಆಳವಾಗಿ ನೋವುಂಟು ಮಾಡಿದೆ. ರವಿಯಮ್ಮ ಒಂದು ಸಭ್ಯಸ್ಥ ಕುಟುಂಬಕ್ಕೆ ಸೇರಿದವರು.. ಇವರು ಆರನೇ ತರಗತಿಯವರೆಗೂ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ.. ಚಿಕ್ಕ ವಯಸ್ಸಿನಲ್ಲೇ ತಾನು ಮಂಗಳಮುಖಿ ಅಂತ ತಿಳಿದ ನಂತರವೂ ಮನೆಯವರು ಇವರನ್ನ ಚೆನ್ನಾಗಿ ನೋಡಿಕೊಂಡಿದ್ದಾರೆ. ಇನ್ನೂ ರವಿಯಮ್ಮ ಅವರನ್ನು ದೇವಸ್ತಾನದ ಅರ್ಚಕರು ಅವಮಾನ ಮಾಡಿದ ನಂತರ ಇವರು ಒಂದು ಚಿಕ್ಕ ದೇವಸ್ತಾನಕ್ಕೆ ಪೂಜಾರಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.. ಅವರೇ ದೇವಸ್ಥಾನದ ಪೂರ್ತಿ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ.

ಈಗ ಇವರೇ ಒಂದೇ ದೇವಸ್ತಾನದಲ್ಲಿ ಪೂಜೆ ಮಾಡುತ್ತಾ ಬಂದಿದ್ದಾರೆ.. ಇಲ್ಲಿ‌ನ ದೇವಸ್ಥಾನಕ್ಕೆ ನೂರಾರು ಜನರು ಬಂದು ದೇವರ ದರ್ಶನವನ್ನು ಪಡೆಯುತ್ತಾರೆ. ಆರಂಭದಲ್ಲಿ ಚಿಕ್ಕ ದೇವಾಲಯವಾಗಿದ್ದ ಇದನ್ನು ಇವರ ಪೂಜೆ ಒಳ್ಳೆಯ ಮಾತು, ಗುಣದಿಂದ ಇಂದು ಪ್ರತಿದಿನ ಈ ಮಂದಿರಕ್ಕೆ ಜನ ಸಾಗರವೇ ಹರಿದು ಬರುತ್ತಿದೆ.. 15 ವರ್ಷದಿಂದ ಕೃಷ್ಣನನ್ನು ಮಾತ್ರ ಪೂಜಿಸುತ್ತಿದ್ದ ಈ ದೇವಾಲಯ ಸದ್ಯ ಮಾರಿಯಮ್ಮ, ಗಣೇಶ, ನರಸಿಂಹಸ್ವಾಮಿ ಹೀಗೆ ಹಲವು ದೇವರುಗಳನ್ನು ಪ್ರತಿಷ್ಟಾಪನೆ ಮಾಡಲಾಗಿದೆ.. ಈಗ ಅತಿ ದೊಡ್ಡ ದೇವಾಲಯವಾಗಿ ಪ್ರಸಿದ್ಧಿ ಪಡೆದಿದೆ. ಅಲ್ಲಿಗೆ ಬರುವ ಭಕ್ತರಿಗೆ ರವಿಯಮ್ಮ ಅಂದರೆ ಬಹಳ ಅಚ್ಚುಮೆಚ್ಚು.. ಇವರು ಮಾಡಿರುವ ಆಶಿರ್ವಾದದಿಂದ ಹಲವು ಜನರಿಗೆ ಒಳ್ಳೆಯದು ಆಗಿದೆ.. ಇನ್ನೂ ಅವಮಾನ ಮಾಡಿದ ಅರ್ಚಕರು ಇವರ ಬಗ್ಗೆ ಕೇಳಿ ಆಶ್ಚರ್ಯ ಪಟ್ಟಿದ್ದಾರೆ.. ತನ್ನ ನಂಬಿಕೆಯಿಂದ ಇಷ್ಟು ಜನರ ಪ್ರೀತಿಯನ್ನು ಗಳಿಸಿದ ಈ ರವಿಯಮ್ಮ ಅವರಿಗೆ ಧನ್ಯವಾದ ತಿಳಿಸಲೇ ಬೇಕು..