Advertisements

ಕಡುಬಡತನದಲ್ಲಿ ಹುಟ್ಟಿ ಬೆಳೆದ ಟೆಂಪೋ ಚಾಲಕನ ಮಗ ಕೋಟ್ಯಧಿಪತಿ ! ಯುವಕನ ಕಣ್ಣೀರು ಒರೆಸಿದ IPL ಬಿಡ್ಡಿಂಗ್..

Sports

ನಮಸ್ತೇ ಸ್ನೇಹಿತರೇ, ರಾತ್ರಿ ಕಳೆದು ಬೆಳಗಾಗುತಿದ್ದಂತೆ ಸ್ಟಾರ್ ಗಳಾದ ಕೋಟ್ಯಧಿಪತಿಗಳಾದ ಕ್ರೀಡಾಲೋಕದ ಎಷ್ಟೋ ಸಾಧಕರ ರಿಯಲ್ ಸ್ಟೋರಿಗಳನ್ನ ನಾವು ಕೇಳಿದ್ದೇವೆ. ಸಾಧನೆಯ ಹಾದಿಯಲ್ಲಿ ಒಂದೊತ್ತಿನ ಊಟಕ್ಕೂ ಪರದಾಡಿ ಸಾಧಕರಾದವರು ಬಹುತೇಕರಿದ್ದಾರೆ. ಅದರಲ್ಲಿ ಯುವಕ ಚೇತನ್​​ ಸಕಾರಿಯಾ ಕೂಡ ಒಬ್ಬರು. ಯಾರಿದು ಚೇತನ್​​ ಸಕಾರಿಯಾ?ಅಷ್ಟಾಗಿ ಈ ಹೆಸರನ್ನ ನೀವು ಕೇಳಿರುವುದಿಲ್ಲ..ಬಹುತೇಕ ಕ್ರಿಕೆಟ್ ಪ್ರೇಮಿಗಳಿಗೂ ಕೂಡ ಈ ಯುವಕನ ಹೆಸರು ಅಷ್ಟಾಗಿ ಪರಿಚಿತವಿಲ್ಲದಿರಬಹುದು. ಆದರೆ ಕಡುಬಡತನದಲ್ಲಿ ಹುಟ್ಟಿ ಕಷ್ಟ ನೋ’ವುಗಳನ್ನ ದಾಟಿ ಇಂದು ಕೋಟ್ಯಧಿಪತಿಯಾಗಿರುವ ೨೨ ವರ್ಷದ ಈ ಯುವಕನ ಕತೆ ಕಣ್ಣೀರು ತರಿಸುವಂತಿದೆ..

Advertisements

ಹೌದು, ಚೇತನ್​​ ಸಕಾರಿಯಾ ಎಂಬ ಹೆಸರನ್ನ ನೀವು ಸಯ್ಯದ್ ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿ ಸೇರಿದಂತೆ ಹಲವು ದೇಶಿಯ ಕ್ರಿಕೆಟ್ ಪಂದ್ಯಗಳಲ್ಲಿ ಈ ಯುವಕನ ಹೆಸರನ್ನ ಕೇಳಿರುತ್ತೀರಿ. ಟೆಂಪೋ ಚಾಲಕನ ಮಗನಾಗಿರುವ ಚೇತನ್ ಪ್ರತಿಭಾವಂತ ಕ್ರಿಕೆಟ್ ಆಟಗಾರ. ಎಡಗೈ ವೇಗಿಯಾಗಿ ಬೌಲಿಂಗ್ ನಲ್ಲಿ ಮಿಂಚುತ್ತಿರುವ ೨೨ ವರ್ಷದ ಈ ಯುವಕನನ್ನ ರಾಜಸ್ಥಾನ ರಾಯಲ್ಸ್ ತಂಡವು ೧೪ನೇ ಸೀಸನ್ ಐಪಿಎಲ್ ಹರಾಜಿನಲ್ಲಿನಲ್ಲಿ ಬರೊಬ್ಬರಿ 1.2 ಕೋಟಿ ಕೊಟ್ಟು ಖರೀದಿ ಮಾಡಿದೆ. ಕಡುಬಡತನದಲ್ಲಿ ಹುಟ್ಟಿದ ಚೇತನ್ ಸಕಾರಿಯಾ ಅವರ ತಂದೆ ಟೆಂಪೋ ಡ್ರೈವರ್ ಆಗಿದ್ದು ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗಿತ್ತು. ತಮ್ಮ ಕುಟುಂಬಕ್ಕಾಗಿ ತನ್ನ ತಂದೆ ಪಡುತ್ತಿರುವ ಕಷ್ಟವನ್ನ ನೋಡಿದ್ದ, ಚೇತನ್ ಸಕಾರಿಯಾಗೆ ತಾನು ಪ್ರಾ’ಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಕ್ರಿಕೆಟ್ ಆಟವನ್ನೇ ಬಿಡಬೇಕಾದ ಪರಿಸ್ಥಿತಿ ಎದುರಾಗಿತ್ತಂತೆ.

ಗುಜರಾತ್ ನ ವರ್ತೇಜ್ ನಿವಾಸಿಯಾಗಿರುವ ಚೇತನ್ ಅವರ ಮನೆಯಲ್ಲಿ ತನ್ನ ನೆಚ್ಚಿನ ಕ್ರಿಕೆಟ್ ಆಟವನ್ನ ನೋಡಲು ಟಿವಿ ಕೂಡ ಇರಲಿಲ್ಲವಂತೆ. ಕ್ರಿಕೆಟ್ ಪಂದ್ಯಗಳನ್ನ ನೋಡುವ ಸಲುವಾಗಿ ತನ್ನ ಸ್ನೇಹಿತರ ಮನೆಗೆ ಹೋಗಿ ನೋಡುತ್ತಿದ್ದರು ಎನ್ನಲಾಗಿದೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಬೆಳೆದುಬಂದ ಈ ಪ್ರತಿಭಾವಂತ ಹುಡುಗನ ಜೀವನದಲ್ಲಿ ಒಮ್ಮೆ ಒಂದು ದು’ರ್ಘಟನೆ ಸಂಭವಿಸಿತ್ತು. ಹೌದು, ಚೇತನ್ ಸಕಾರಿಯಾ ಸಯ್ಯದ್ ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದ ವೇಳೆ ಅವರ ತಮ್ಮ ಮನೆಯಲ್ಲಿ ಆ’ತ್ಮಹ’ತ್ಯೆ ಮಾಡಿಕೊಂಡಿದ್ದರು. ಆದರೆ ಈ ವಿಷಯ ಚೇತನ್ ಗೆ ಕುಟುಂಬದವರು ತಿಳಿಸಿರಲಿಲ್ಲ. ಮನೆಗೆ ಬಂದ ವೇಳೆ ತಮ್ಮನ ಬಗ್ಗೆ ತಿಳಿದು ಶಾಕ್ ಆಗಿತ್ತು. ಈ ಘಟನೆ ಚೇತನ್ ಗೆ ತುಂಬಾ ನೋ’ವಾಗಿ ಕಾಡಿತ್ತು.

ಈಗ ಚೇತನ್ ಸಕಾರಿಯಾ ಜೀವನದಲ್ಲಿ ಹೊಸ ಬೆಳೆಕು ಮೂಡಿದ್ದು ಆತ ಪಟ್ಟ ಕಷ್ಟಗಳಿಗೆ ಪ್ರತಿಫಲ ದೊರಕಿದೆ. ಐಪಿಎಲ್ ನ ಹರಾಜು ಪ್ರಕ್ರಿಯೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು 1.2 ಕೋಟಿಗೆ ಚೇತನ್ ಸಕಾರಿಯಾ ಅವರನ್ನ ಕೊಂಡಿದೆ. ಇನ್ನು ಇದರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಚೇತನ್ ಐಪಿಎಲ್ ನಲ್ಲಿ ಅತ್ತ್ಯತ್ತಮ ಪ್ರದರ್ಶನ ನೀಡುವುದಾಗಿ ಹೇಳಿದ್ದಾರೆ. ಇನ್ನು ಐಪಿಎಲ್ ಹರಾಜಿನಿಂದ ಬಂದಿರುವ ಹಣದಿಂದ ಒಂದು ಒಳ್ಳೆ ಮನೆ ಕೊಂಡುಕೊಳ್ಳಬೇಕು ಹಾಗೂ ಈ ವಯಸ್ಸಿನಲ್ಲಿ ಟೆಂಪೋ ಡ್ರೈವರ್ ಆಗಿ ದುಡಿಯುತ್ತಿರುವ ತನ್ನ ತಂದೆಯಿಂದ ಡ್ರೈವರ್ ಕೆಲಸ ಬಿಡಿಸಿ, ಅವರು ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳುವಂತೆ ಮಾಡುತ್ತೇನೆ ಜತೆಗೆ ನಮ್ಮ ಕುಟುಂಬವನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಚೇತನ್ ಸಕಾರಿಯಾ ಹೇಳಿದ್ದಾರೆ.