Advertisements

ದಪ್ಪಗಿದ್ದೀಯಾ ಎಂಬ ಸ್ನೇಹಿತರ ತಮಾಷೆಯೆ ಚೇತನಾ ಜೀವ ತೆಗಿತು! ಬುಲೆಟ್ ಪ್ರಕಾಶ್ ಗೆ ಮತ್ತುಆರತಿಗೂ ಆಗಿದ್ದು ಇದೆ..

Cinema

ಪ್ರಿಯ ಓದುಗರೇ ಇಂದಿನ ಯುವ ಪೀಳಿಗೆಯ ಅದ್ಯಾಕೋ ಅತಿಯಾದ ಸೌಂದರ್ಯಕ್ಕೆ ಮೊರೆಹೋಗುತ್ತಿದ್ದಾರೆ. ದೇವರು ನೀಡಿದ ಸಹಜ ಸೌಂದರ್ಯವನ್ನು ಉಳಿಸಿಕೊಳ್ಳುವ ಬದಲಾಗಿ ಆಸ್ಪತ್ರೆಗಳ, ಸೌಂದರ್ಯವರ್ಧಕಗಳ, ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಯ ಮೊರೆ ಹೋಗಿ ಎಂದು ತಮ್ಮ ಸಾವನ್ನು ತಂದುಕೊಳ್ಳುತ್ತಿದ್ದಾರೆ. ಹಾಗಾದರೆ ಯಾರು ನಟ-ನಟಿಯರು? ಯಾರೆಲ್ಲ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹೋಗಿ ಸಾವನ್ನು ಕಂಡಿದ್ದಾರೆ ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ. ಇತ್ತೀಚಿಗೆ ಸಿನಿಮಾ ರಂಗದಲ್ಲಿ ಈ ಸರ್ಜರಿ ಇದೀಗ ಒಂದು ಟ್ರೆಂಡ್ ತರಾ ಬೆಳೆದು ಬರುತ್ತಿದೆ. ದೇಹದ ಅಂಗಾಂಗಗಳನ್ನು ಅತಿಯಾಗಿ ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಲು ಹೋಗಿ ದುರಂತದ ಹಾದಿ ಹಿಡಿಯುತ್ತಿದ್ದಾರೆ. ಇದರಿಂದ ತಮ್ಮ ಸಾವನ್ನು ತಾನೇ ಕೈಯಾರೆ ಬರ ಮಾಡಿಕೊಳ್ಳುತ್ತಿದ್ದಾರೆ. ಘಟನೆಗೆ ತಾಜಾ ಉದಾಹರಣೆ ಎಂದರೆ ಚೇತನ ರಾಜ್. ಇವರು ನೋಡಲು ಸೌಂದರ್ಯವತಿ ಯಾಗಿದ್ದರು ಬೇರೆಯವರ ಹೇಳಿದ ಮಾತಿಗೆ ತಲೆಕೆಡಿಸಿಕೊಂಡು ತನ್ನ ಸೊಂಟವನ್ನು ಸಣ್ಣಗಾಗಿಸಲು ಹೋಗಿದ್ದರು. ಆದರೆ ಸಂಜೆಯ ವೇಳೆ ಅನಾಹುತವಾಗಿ ಇಂದು ಪ್ರಾಣ ಕಳೆದುಕೊಂಡಿದ್ದಾರೆ

Advertisements

ಅದೇ ರೀತಿ ಬುಲೆಟ್ ಪ್ರಕಾಶ್ ಕೂಡ ಒಬ್ಬರು ಅವರನ್ನು ಸಹ ಸ್ನೇಹಿತರು ತುಂಬಾ ಮಾಡುತ್ತಿದ್ದರಂತೆ.ಇವರು ಸರ್ಜರಿ ಮೂಲಕ 35 ಕೆಜಿ ತೂಕ ಇಳಿಸಿಕೊಂಡು. ತದ ನಂತ್ರ ದೇಹದ ಆರೋಗ್ಯ ಸಮಸ್ಯೆಯಿಂದ ಬಳಲಿ, ಕೊನೆಗೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದರು. ಬುಲೆಟ್ ಪ್ರಕಾಶ್ ಅವರು ದಿಡೀರನೆ ತಮ್ಮ ದೇಹದ ತೂಕವನ್ನು ಅತಿಯಾಗಿ ಕಡಿಮೆ ಮಾಡಿಸಿಕೊಂಡಿದ್ದೆ ಇವರ ಸಾವಿಗೆ ಕಾರಣ ಎಂದು ಹೇಳಬಹುದು. ಈ ಮೂಲಕ ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಈ ಬೊಜ್ಜು ಕರಗಿಸಲು ಹೋಗಿ ದುರಂತದಲ್ಲಿ ಕಣ್ಮರೆಯಾಗಿದ್ದಾರೆ. ಹಾಗೆ ಇನ್ನೊಬ್ಬ ಖ್ಯಾತ ಬಹುಭಾಷಾ ನಟಿ ಆರತಿ ಅಗರ್ವಾಲ್ ಕೂಡ ದುರಂತದಲ್ಲಿ ಕೊನೆಯದರಲ್ಲಿ ಒಬ್ಬರು. ಇವರು ಕೂಡ ಇನ್ನೇನು ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋದ್ರಲ್ಲಿ ಇದ್ರು. ಆದರೆ ದೇಹ ತೂಕ ಅತಿಯಾಗಿದ್ದ ಕಾರಣಕ್ಕೆ ಇವರಿಗೆ ಸಿನಿಮಾ ರಂಗದಲ್ಲಿ ಅವಕಾಶಗಳು ತಪ್ಪಿದ್ದವು. ಸಿನಿಮಾರಂಗದಲ್ಲಿ ಮತ್ತೆ ಅವಕಾಶಗಳನ್ನು ಪಡೆಯಲು ನೀವು ವೇಟ್ ಲಾಸ್ ಮಾಡಲೇಬೇಕು ಎಂದು ಸ್ನೇಹಿತರು ಮತ್ತು ಅವರ ಹಿತೈಸಿಗಳು ಆಗಾಗ ಹೇಳುತ್ತಿದ್ದರಂತೆ.

ಆರತಿ ಅಗರ್ವಾಲ್ ಅವರು ತುರ್ತಾಗಿ ಸಣ್ಣಗಾಗಲು ಹಲವಾರು ಚಿಕಿತ್ಸೆಗಳ ಮೊರೆ ಹೋಗಿದ್ದರು. ಇದರಿಂದ ತಮ್ಮ 89 ಕೆಜಿ ದುಃಖದಿಂದ 63 ಕೆಜಿಗೆ ತಮ್ಮ ದೇಹದ ತೂಕವನ್ನು ದಿಡೀರನೆ ಇಳಿಸಿಕೊಂಡರು. ತದನಂತರ ಹೃದಯ ಸಂಬಂಧಿ ಕಾಯಿಲೆ ಹಾಗೂ ಉಸಿರಾಟದ ಕಾಯಿಲೆಗೆ ತುತ್ತಾದರು ದೇಹದ ಅತಿಯಾದ ತೂಕ ಇಳಿಕೆಯಾಗಿದ್ದರಿಂದ ಇವರ ಆರೋಗ್ಯದಲ್ಲಿ ಏರುಪೇರುಗಳು ಹೆಚ್ಚಾದವು. ಕೊನೆಗೆ ಉಸಿರಾಟದ ಸಮಸ್ಯೆ ಮತ್ತು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲಿ ಇವರು ಕೂಡ ಸಾವಿಗೆ ಬಲಿಯಾದರು. ಇತ್ತೀಚೆಗೆ ಸ್ಯಾಂಡಲ್ವುಡ್ನ ಹಿರಿಯ ನಟರಾದ ದೊಡ್ಡಣ್ಣ ಕೂಡ ವೇಟ್ ಲಾಸ್ ಮಾಡಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಗಾಗ ಆಸ್ಪತ್ರೆಗೆ ದಾಖಲಾಗುವುದು ಮತ್ತೆ ಮನೆಗೆ ಬರುವುದು ಸಾಮಾನ್ಯವಾಗಿದೆ.


ಇನ್ನು ಅತಿಯಾದ ದೇಹದ ತೂಕವನ್ನು ಆರೋಗ್ಯಯುತವಾಗಿ ಸಣ್ಣಗಾಗಿ ಸಿ ಕೊಂಡವರು ಇದ್ದಾರೆ. ಅಂದರೆ ಯೋಗಾಸನ, ಆಹಾರದಲ್ಲಿ ಕ್ರಮಬದ್ಧತೆ ವಹಿಸಿ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳುವತ್ತ ಜೊತೆಗೆ ಆರೋಗ್ಯವನ್ನು ಉಳಿಸಿಕೊಂಡಿದ್ದಾರೆ. ಹೌದು ಸಿಹಿಕಹಿ ಚಂದ್ರು, ಬ್ರಹ್ಮಗಂಟು ಧಾರಾವಾಹಿಯ ಗೀತಾ ಭಟ್, ಬಹುಭಾಷಾ ನಟಿ ಖುಷ್ಬೂ, ಹೀಗೆ ಅನೇಕ ನಟ ನಟಿಯರು ಯೋಗಾಸನದ ಮೊರೆಹೋಗಿ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳುವತ್ತ ಜೊತೆಗೆ ಮಾಡಿಕೊಂಡು ಇಂದಿಗೂ ಆರೋಗ್ಯವಾಗಿದ್ದಾರೆ. ಆದರೆ ಶೀಘ್ರದಲ್ಲಿಯೇ ಕ್ಲಾಸ್ ಮೊರೆ ಹೋದವರು ಪ್ರಾಣ ಕಳೆದುಕೊಂಡಿದ್ದು, ಪೋಷಕರಿಗೆ ಸಹಿಸದ ದುಃಖವನ್ನು ನೀಡಿದ್ದಾರೆ.