Advertisements

ಚಿಕ್ಕಮಗಳೂರು ರೈತನ ಈ ಭತ್ತದ ಗದ್ದೆ ಪ್ರಪಂಚಾದ್ಯಂತ ವೈರಲ್, ಕಾರಣ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಪ್ರಕೃತಿಯ ಸೌಂದರ್ಯದ ಮುಂದೆ ಯಾವುದು ತಾನೇ ಸಾಟಿ ಹೇಳಿ.. ಹಾಗೆ ಕೆಲವೊಮ್ಮೆ ವಿಸ್ಮಯಗಳು ನಮ್ಮ ಪಕ್ಕದಲ್ಲೇ ಇದ್ರೂ ಅದು ನಮಗೆ ಗೊತ್ತಾಗೋದೆ ಇಲ್ಲಾ. ಚಿಕ್ಕಮಗಳೂರಿನ ಈ ಬತ್ತದ ಗದ್ದೆ ಈಗ ಎಲ್ಲಾ ಕಡೆ ವೈರಲ್ ಆಗ್ತಿದೆ.. ಅಷ್ಟೇ ಅಲ್ಲದೆ ಅದನ್ನ ನೋಡಲು ಜನರು ತೆರಳುತ್ತಿದ್ದು ಪ್ರಾವಾಸಿ ತಾಣವಾಗಿ ಮಾರ್ಪಟ್ಟಿದೆ. ಹಾಗಾದರೆ ಈ ಭತ್ತದ ಗದ್ದೆಯಲ್ಲಿರುವ ವಿಶೇಷತೆಯಾದ್ರೂ ಏನು ಎಂಬುದನ್ನು ನೋಡೊಣ  ಸ್ನೇಹಿತರೆ.. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಮಿಕೊಂಡ ಗ್ರಾಮದ ಕೃಷ್ಣ ಅನ್ನೋರಿಗೆ ಬೆಟ್ಟದ ತುತ್ತ ತುದಿಯಲ್ಲಿ ಸುಮಾರು 2 ರಿಂದ ನಾಲ್ಕು ಎಕರೆ ಜಮೀನಿದ್ದು ಅಲ್ಲಿ ಭತ್ತವನ್ನು ಬೆಳೆಯುತ್ತಿದ್ದಾರೆ. ಇಲ್ಲಿ ಕೃಷ್ಣ ಅವರ ತಾತನ ಕಾಲದಿಂದಲೂ ಅಂದರೆ..

Advertisements

ಸುಮಾರು 100 ವರ್ಷಗಳಿಂದಲೂ ಈ ಜಮೀನಿನಲ್ಲಿ ಭತ್ತವನ್ನು ಬೆಳೆಯುತ್ತಿದ್ದಾರೆ. ಅದೆಲ್ಲಾ ಸರಿ ಇಲ್ಲಿನ ವಿಶೇಷತೆ ಏನು ಅಂತೀರಾ.. ಈ ಭತ್ತದ ಗದ್ದೆ ದೂರದಿಂದ ನೋಡಿದರೆ ನಿಸರ್ಗದ ಮಡಿಲಿನ ಹೃದಯದಂತೆ ಕಾಣುತ್ತಿದೆ. ಹೌದು ಭತ್ತದ ಗದ್ದೆ ಸೇಮ್ ಹೃದಯದ ಆಕಾರದಲ್ಲಿ ಇದೆ..  ಆಗಂತ ಇವರು ಶೋಕಿಗಾಗಿಯೂ, ಪ್ರಚಾರಕ್ಕಾಗಿಯೂ ಗದ್ದೆಯನ್ನ ಹೃದಯಾಕಾರ ಮಾಡಿಲ್ಲ. ಅಸಲಿಗೆ ಇವರಿಗೆ ಅವರ ಭತ್ತದ ಗದ್ದೆ ಹೃದಯದ ಆಕಾರದಲ್ಲಿ ಇದೆ ಅನ್ನುವುದೇ ಗೊತ್ತಿರಲಿಲ್ಲ.. ಕೆಲವು ಪ್ರವಾಸಿಗರು ದೂರದಿಂದ ಈ ಭತ್ತದ ಗದ್ದೆಯ ಪೊಟೊಸ್ ತೆಗೆದಾಗ ಇದರ ವೈಶಿಷ್ಟ್ಯತೆ ಗೊತ್ತಾಗಿದೆ.

ಹಾಗೆ ಪೊಟೊಗಳು ಸಖತ್ ವೈರಲ್ ಆಗಿದೆ.. ಆಗಲೇ ರೈತ ಕೃಷ್ಣ ಅವರಿಗೂ ಗೊತ್ತಾಗಿದ್ದೂ. ಭತ್ತದ ಗದ್ದೆಗೆ ನೀರನ್ನು ಆಯಿಸುವ ಸಲುವಾಗಿ ಕಾಲ ಕಾಲಕ್ಕೆ ಗದ್ದೆಯನ್ನು ಅಗೆಯುತ್ತಿದ್ದರು.. ಅದು ಅವರಿಗೆ ಗೊತ್ತಿಲ್ಲದಂತೆ ಹೃದಯಕಾರವಾಗಿದೆ. ಈಗ ಇದನ್ನು ನೋಡಲು ಜನ ಬರುತ್ತಿದ್ದು.. ಅಷ್ಟೇ ಅಲ್ಲದೇ ಸಿನಿಮಾ ಶೂಟಿಂಗ್ ಕೂಡ ಮಾಡಲಾಗ್ತಿದೆ. ಹಾಗೆ ಈ ಗದ್ದೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಸುತ್ತ ಪರ್ವತ ಶ್ರೇಣಿಗಳು.. ಮಧ್ಯದಲ್ಲಿ ಗದ್ದೆ, ಗದ್ದೆಯಲ್ಲಿ ಹೃದಯ. ಪ್ರಕೃತಿಯ ಮಡಿಲಲ್ಲಿ ಮಲಗಿರುವ ಈ ಹೃದಯವನ್ನು ನೋಡಿದರೆ ನಮ್ಮ ಕಣ್ಣಿನ ಕ್ಯಾಮರಾದಲ್ಲಿ ಶಾಶ್ವತವಾಗಿ ಸೆರೆಯಾಗುವುದಂತೂ ನಿಜ.. ಇಂತಹ ಅದ್ಬುತವಾದ ನೋಟ ಸೃಷ್ಟಿಸಿರುವ ನಮ್ಮ ರೈತರನ್ನು ಮೆಚ್ಚಲೇಬೇಕು.