Advertisements

ಚಿಕ್ಕಣ್ಣನನ್ನ ಮದುವೆಯಾಗೋ ಖ್ಯಾತ ನಟಿ ಯಾರು ಗೊತ್ತಾ? ಇವರೇ!

Cinema

ಚಿಕ್ಕಣ್ಣ ಅವರು ಎಲ್ಲೇ ಹೋದರು ಕೂಡ ಅವರಿಗೆ ಕೇಳೋದು ಪ್ರಶ್ನೆ ಒಂದೇ, ಅದು ನಿಮ್ಮ ಮದುವೆ ಯಾವಾಗ ಅಂತ? ಸದ್ಯ ಇದೀಗ ಈ ಪ್ರಶ್ನೆಗೆ ತೆರೆಬಿದ್ದಿದ್ದು ಚಿಕ್ಕಣ್ಣ ಅವರು ಮದುವೆಯಾಗುತ್ತಿರುವ ಹುಡುಗಿ ಯಾರು ಅಂತ ಗೊತ್ತಾಗಿದೆ. ಹೌದು ಅದರಲ್ಲೂ ಆಕೆ ಕೂಡ ಸಿನಿಮಾ ನಟಿಯಾಗಿದ್ದು ಸದ್ಯದಲ್ಲೇ ಇಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ನಟಿ ಕೂಡ ನಂಗೆ ಚಿಕ್ಕಣ್ಣನೇ ಮ್ಯಾಚ್ ಆಗೋದು ಎಂದು ಕೂಡ ಹೇಳಿದ್ದಾರೆ ಹಾಗಿದ್ದರೆ ಚಿಕ್ಕಣ್ಣನವರು ಮದುವೆಯಾಗುತ್ತಿರುವ ಹುಡುಗಿಯಾದರೂ ಯಾರು? ಹೌದು ಕಳೆದ ವರುಷ ಲಾಕ್ಡೌನ್ ವೇಳೆ ಸಿನಿಮಾ ಶೂಟಿಂಗ್ ಗಳು ಇಲ್ಲದೆ ಚಿಕ್ಕಣ್ಣ ತಮ್ಮ ತೋಟದ ಕೆಲಸ ಹಾಗೂ ಗಾರೆ ಕೆಲಸ ಮಾಡುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿತ್ತು. ಇನ್ನು ಈ ಹಿಂದೆ ಹಲವಾರು ಕಾರ್ಯಕ್ರಮಗಳಲ್ಲಿ ಕೂಡ ಚಿಕ್ಕಣ್ಣ ಅನುಶ್ರೀ ಅವರೊಟ್ಟಿಗೆ ಮದುವೆಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಇನ್ನು ಎಲ್ಲವನ್ನು ಬದಿಗಿಟ್ಟು ಚಿಕ್ಕಣ್ಣ ಅವರು ಇದೀಗ ಹಲವು ಚಿತ್ರಗಳಲ್ಲಿ ನಟಿಸಿರುವ ಅರೋಹಿತ ಅವರನ್ನು ಕೈ ಹಿಡಿಯುತ್ತಾರೆ ಎಂದು ಹೇಳಲಾಗುತ್ತಿದೆ.

Advertisements

ಹೌದು ಅಧ್ಯಕ್ಷ ಸಿನಿಮಾದಲ್ಲಿ ಹೀರೋಯಿನ್ ಸ್ನೇಹಿತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆರೋಹಿತ ಬಹಳ ಖ್ಯಾತಿಯನ್ನು ಗಳಿಸಿದ್ದರು. ಅದಾದ ಬಳಿಕ ಇಬ್ಬರು ಆತ್ಮೀಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಸ್ವತಹ ಆರೋಹಿತ ಅವರೇ ಚಿಕ್ಕಣ್ಣ ಅವರೇ ನನಗೆ ಸೂಟ್ ಆಗೋದು ಅಂತ ಹೇಳಿಕೊಂಡಿದ್ದಾರೆ. ಈ ಸಂಗತಿಗಳು ಈಗಾಗಲೇ ಸದ್ದು ಮಾಡುತ್ತಿದ್ದು ಚಿಕ್ಕಣ್ಣ ಏನು ಹೇಳ್ತಾರೆ ಅನ್ನೋದನ್ನು ಕಾದುನೋಡಬೇಕಿದೆ. ಹೌದು ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಆರೋಹಿತಾ ಚಿಕ್ಕಣ್ಣ ಅವರ ಜೊತೆ ಯಾರೇ ಪೇರ್ ಆಗಿ ನಟನೆ ಮಾಡಿದರು ಕೂಡ ನನ್ನ ಅವರ ಪೇರ್ ಅಷ್ಟು ಯಾರಿಗೂ ಇಷ್ಟವಾಗುವುದಿಲ್ಲ. ಕೆಲವೊಮ್ಮೆ ನನಗೆ ಅನಿಸುತ್ತದೆ ನಂದು ಹಾಗು ಚಿಕ್ಕಣ್ಣನವರ ಜೋಡಿ ಎನ್ ಎಸ್ ರಾವ್ ಹಾಗೂ ಉಮಾಶ್ರೀ ಅವರ ಜೋಡಿಯ ರೀತಿ ಇರುತ್ತದೆ ಎಂದು.

ಇನ್ನೂ ಹತ್ತು ಸಿನಿಮಾಗಳು ಮಾಡಿದರೆ ನಾವೂ ಅದೇ ರೀತಿ ಖ್ಯಾತಿ ಗಳಿಸುತ್ರೇವೆ. ಆದರೆ ಕೆಲವೊಮ್ಮೆ ಅನಿಸುತ್ತದೆ ನಾನು ಎತ್ತರಕ್ಕೆ ಬೆಳೆಯುತ್ತೇನೆ ಎಂದೇ ನನಗೆ ಅವಕಾಶ ಕೊಡುತ್ತಿಲ್ಲ ಎಂದು ನಟಿ ಆರೋಹಿತ ಹೇಳಿಕೊಂಡಿದ್ದಾರೆ. ನಾನು ಮೊದಲ ಸಿನಿಮಾ ಚಿಕ್ಕಣ್ಣ ಅವರ ಜೊತೆ ಮಾಡಿರುವ ಕಾರಣ ನಮ್ಮಿಬ್ಬರ ನಡುವೆ ಒಳ್ಳೆ ಅಂಡರ್ ಸ್ಟ್ಯಾಂಡಿಂಗ್ ಇದೆ ಹಾಗೂ ನಮ್ಮಿಬ್ಬರ ಕೆಮಿಸ್ಟ್ರಿ ವರ್ಕ್ ಆಗಿದೆ. ಆದ ಕಾರಣ ನನಗೆ ಚಿಕ್ಕಣ್ಣನೇ ಮ್ಯಾಚ್ ಆಗೋದು ಎಂದು ಆರೋಹಿತಾ ಹೇಳಿದ್ದು ಸಾಕಷ್ಟು ಮಂದಿ ಇವರಿಬ್ಬರೂ ನಿಜ ಜೀವನದಲ್ಲೂ ಕೂಡ ಮದುವೆಯಾಗುತ್ತಾರೆ ಎಂದೇ ಹೇಳಲಾಗುತ್ತಿದೆ. ಸದ್ಯ ಈ ಎಲ್ಲ ಊಹಾಪೋಹಗಳಿಗೂ ಚಿಕ್ಕಣ್ಣ ಅವರೇ ಸ್ಪಷ್ಟನೆ ನೀಡಬೇಕಾಗಿದ್ದು ಮುಂದಿನ ದಿನಗಳಲ್ಲಿ ಚಿಕ್ಕಣ್ಣ ಹಾಗೂ ನಟಿ ಆರೋಹಿತಾ ಮದುವೆಯಾಗುತ್ತಾರೆ ಕಾದು ನೋಡಬೇಕಿದೆ.