Advertisements

ಚಿಕ್ಕಣ್ಣ ಕಾನ್‌ಸ್ಟೆಬಲ್‌ ಸರೋಜಾ ಅವರ ಜೊತೆ ಮದ್ವೆಯಾದ್ರಾ ! ಆದ್ರೆ ಆ ನಟಿ ಹೇಳಿದ್ದೇ ಬೇರೆ ?

Cinema

ಸ್ಯಾಂಡಲ್ವುಡ್ ನಲ್ಲಿ ಹಾಸ್ಯ ನಟ ಸಾಧುಕೋಕಿಲ ಅವರ ಬಳಿಕ ಅತ್ಯಂತ ಬೇಡಿಕೆಯಲ್ಲಿರುವ ಹಾಸ್ಯ ನಟ ಎಂದರೆ ಅದು ಚಿಕ್ಕಣ್ಣ. ಇನ್ನು ಒಂದು ವಾರದ ಹಿಂದಷ್ಟೇ (ಜೂನ್ 22)ರಂದು ಚಿಕ್ಕಣ್ಣ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದರು. ಇನ್ನು ಇದೆ ದಿನವೇ ಚಿಕ್ಕಣ್ಣ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸುಂಟರಗಾಳಿಯಂತೆ ಹರಿದಾಡಿದೆ. ಅದೇನೇದರೆ ಚಿಕ್ಕಣ್ಣ ಲಾಕ್ ಡೌನ್ ಸಮಯದಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬುದರ ಬಗ್ಗೆ.

Advertisements

ಹೌದು, ಟಗರು ಚಿತ್ರದಲ್ಲಿ ಕಾನ್‌ಸ್ಟೆಬಲ್‌ ಸರೋಜಾ ಪಾತ್ರದಲ್ಲಿ ನಟಿಸಿದ್ದ ನಟಿ ತ್ರಿವೇಣಿ ರಾವ್ ಅವರ ಜೊತೆ ಚಿಕ್ಕಣ್ಣ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಬಿರುಗಾಳಿಯಂತೆ ಹರಡಿದೆ. ಇನ್ನು ಇದಕ್ಕೆಲ್ಲಾ ಕಾರಣವಾಗಿದ್ದು ನಟಿ ತ್ರಿವೇಣಿ ರಾವ್ ಪೋಸ್ಟ್ ಮಾಡಿದ್ದ ಅದೊಂದು ಫೋಟೋ. ಜೂನ್ ೨೨ ರಂದು ಚಿಕ್ಕಣ್ಣನವರ ಹುಟ್ಟಿದ ಹಬ್ಬ ಇದ್ದ ಕಾರಣ ಚಿಕ್ಕಣ್ಣನಿಗೆ ಶುಭಾಶಯಗಳನ್ನ ತಿಳಿಸಿದ್ದ ನಟಿ ತ್ರಿವೇಣಿ ರಾವ್ ಫೋಟೋ ಹಂಚಿಕೊಂಡಿದ್ದು, ಆ ಫೋಟೋದಲ್ಲಿ ಚಿಕ್ಕಣ್ಣ ಮತ್ತು ತ್ರಿವೇಣಿ ಮದುವೆಯ ಡ್ರೆಸ್ ನಲ್ಲಿದ್ದರು. ಇನ್ನು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇಬ್ಬರು ಮದುವೆಯಾಗಿದ್ದಾರೆ ಎಂಬ ಸುದ್ದಿ ಜೋರಾಗಿ ಹರಡಿದೆ.

ಇನ್ನು ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನಟಿ ತ್ರಿವೇಣಿ ರಾವ್ ವಿಡಿಯೋವೊಂದರ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಚಿಕ್ಕಣ್ಣನಿಗೆ ಹುಟ್ಟಿದ ಹಬ್ಬ ಇದ್ದ ಕಾರಣ ನಾನು ಸಿನಿಮಾವೊಂದರಲ್ಲಿ ಬರುವ ಸನ್ನಿವೇಶವೊಂದರ ಫೋಟೋವನ್ನ ಪೋಸ್ಟ್ ಮಾಡಿದ್ದೆ. ಆದರೆ ಈ ಫೋಟೋವನ್ನ ನೋಡಿದವರು ನಮ್ಮಿಬ್ಬರಿಗೂ ಮದುವೆಯಾಗಿದೆ ಎಂಬ ಸುಳ್ಳು ಸುದ್ದಿಯನ್ನ ಹಬ್ಬಿಸಿದ್ದಾರೆ. ಇದನ್ನ ಯಾರೂ ನಂಬಬೇಡಿ. ನಾನು ಮದುವೆಯಾಗುವ ಸಂಧರ್ಭದಲ್ಲಿ ನಿಮ್ಮೆಲ್ಲರಿಗೂ ಮಾಹಿತಿಯನ್ನೇ ಕೊಟ್ಟೆ ಮದುವೆಯಾಗುತ್ತೇನೆ ಎಂದು ತ್ರಿವೇಣಿ ರಾವ್ ಸ್ಪಷ್ಟನೆ ಕೊಟ್ಟಿದ್ದಾರೆ.