ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಬಸಪ್ಪನ ಪವಾಡಗಳ ಬಗ್ಗೆ ನೀವೆಲ್ಲಾ ಕೇಳಿರುತ್ತೀರಿ..ಈಗ ಕಾಲಭೈರವೇಶ್ವರಸ್ವಾಮಿಯ ಬಸಪ್ಪ ಮತ್ತೊಂದು ಪವಾಡ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಹೌದು, ಐದು ವರ್ಷಗಳಿಂದ ಇದ್ದ ಸಮಸ್ಯೆಗೆ ಪರಿಹಾರ ನೀಡಿದೆ ಚಿಕ್ಕರಸಿನಕೆರೆಯ ಬಸಪ್ಪ. ಮಂಡ್ಯದ ಚೀರನಹಳ್ಳಿ ಎಂಬ ಹಳ್ಳಿಯಲ್ಲಿ ದೇವಸ್ಥಾನಕ್ಕೆ ಪೂಜಾರಿಯನ್ನ ನೇಮಿಸುವಲ್ಲಿ ಆ ಊರಿನ ಗ್ರಾಮಸ್ಥರಲ್ಲಿ ಗೊಂದಲ ಉಂಟಾಗಿದ್ದು ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದರು. ಈಗ ಕಾಲಭೈರವೇಶ್ವರಸ್ವಾಮಿಯ ಬಸಪ್ಪ ೫ ವರ್ಷಗಳಿಂದ ಇದ್ದ ಸಮಸ್ಯೆಗೆ ಕೇವಲ ಒಂದು ಗಂಟೆಯಲ್ಲಿ ಪರಿಹಾರ ನೀಡಿ ಪವಾಡ ಮೆರೆದಿದ್ದಾನೆ.

ಇಲ್ಲಿನ ಚೀರನಹಳ್ಳಿ ಎಂಬ ಗ್ರಾಮದಲ್ಲಿ ಉರುಗಮ್ಮದೇವಿ ದೇವಾಲಯವಿದ್ದು, ಇದಕ್ಕೆ ಮೊದಲು ಪೂಜಾರಿಯಾಗಿದ್ದವರು ೫ ವರ್ಷಗಳ ಹಿಂದೆಯೇ ತೀ’ರಿಕೊಂಡಿದ್ದರು. ಆದರೆ, ಬಳಿಕ ದೇವಸ್ಥಾನಕ್ಕೆ ಯಾರನ್ನ ಪೂಜಾರಿಯನ್ನಾಗಿ ನೇಮಿಸುವುದು ಎನ್ನುವ ಗೊಂದಲ ಗ್ರಾಮಸ್ಥರಲ್ಲಿ ಉಂಟಾಗಿದ್ದು ಪರಿಹಾರ ಸಿಗದೇ ೫ ವರ್ಷಗಳೇ ಆಗಿ ಹೋದವು. ಇದಕ್ಕೆ ಪರಿಹಾರ ಹುಡುಕಲೇಬೇಕು ಎಂದು ನಿರ್ಧಾರ ಮಾಡಿದ ಚೀರನಹಳ್ಳಿ ಗ್ರಾಮದ ಜನರು ಚಿಕ್ಕರಸಿನಕೆರೆಯ ಕಾಲಭೈರವೇಶ್ವರಸ್ವಾಮಿಯ ಬಸಪ್ಪನನ್ನ ಊರಿಗೆ ಕರೆಸಿದ್ರು. ಇನ್ನು ಬಸಪ್ಪನಿಗೆ ಭಕ್ತಿಯಿಂದ ಪೂಜೆ ಮಾಡಿ ಊರಿಗೆ ಬರಮಾಡಿಕೊಂಡ ಗ್ರಾಮಸ್ಥರು ಊರಿನಲ್ಲಿರುವ ಕಲ್ಯಾಣಿಯ ಬಳಿ ಪೂಜಾರಿಯ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡಿದ್ರು.

ಇನ್ನು ಈ ಪವಾಡವನ್ನ ನೋಡುವ ಸಲುವಾಗಿ ಆ ಊರಿನ ಗ್ರಾಮಸ್ಥರು ಸೇರಿದಂತೆ ಅಕ್ಕ ಪಕ್ಕದ ಊರಿನ ಗ್ರಾಮಸ್ಥರು ಅಲ್ಲಿ ನೆರೆದಿದ್ದರು. ಸಾವಿರಾರು ಮಂದಿ ಇದ್ದ ಆ ಜನಜಂಗುಳಿಯಲ್ಲಿ ಅದೇ ಊರಿನವರಾದ ಶಿವಣ್ಣ ಅವರನ್ನ ಕಾಲಭೈರವೇಶ್ವರಸ್ವಾಮಿಯ ಬಸಪ್ಪ ತನ್ನ ಕೊಂಬಿನಿಂದ ತಿ’ವಿದು, ಇವರೇ ದೇವಸ್ಥಾನದ ಅರ್ಚಕರಾಗಲಿದ್ದಾರೆ ಎಂಬ ಸೂಚನೆ ನೀಡಿತು. ಅಷ್ಟೇ ಅಲ್ಲದೆ ಆತನನ್ನ ನೂಕಿಕೊಂಡು ಹೋಗಿ ಕಲ್ಯಾಣಿಯ ನೀರಿನ ಒಳಗಡೆ ತಳ್ಳಿತು. ಇನ್ನು ಈ ಪವಾಡವನ್ನ ಕಣ್ಣಾರೆ ಕಂಡ ಅಲ್ಲಿ ನೆರೆದಿದ್ದ ಜನ ಬಸಪ್ಪನಿಗೆ ಪೂಜೆ ಮಾಡಿ ಆಶೀರ್ವಾದ ಪಡೆದರು.