Advertisements

ಭಾರತದ ಮತ್ತೊಂದು ಹೊಡೆತಕ್ಕೆ ಚೀನಾ ವಿಲ ವಿಲ.

News

ಈ ಹಿಂದೆ ಚೈನಿಸ್ ಅಪ್ಲಿಕೇಶನ್ ಗಳು ಬ್ಯಾನ್ ಮಾಡಿದಂತೆ ಈಗ ಚೀ‌ನಾಗೆ ಮತ್ತೊಂದು ಹೊಡೆತವನ್ನು ಕೊಟ್ಟಿದೆ. ಹೌದು ಭಾರತ ಈಗ ಚೀನಾದಿಂದ ಟೀವಿ ಆಮದು ಮಾಡುವುದಕ್ಕೆ ನಿರ್ಬಂಧ ವನ್ನು ಹೇರಿದೆ‌. ಗುರುವಾರದಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ ಈ ಆದೇಶವನ್ನು ಹೊರಡಿಸಿದೆ. ಟಿವಿ ಸೆಟ್ ಗಳ ವಸ್ತುಗಳನ್ನು ಮುಕ್ತ ವಿಭಾಗದಿಂದ ನಿರ್ಬಂಧಿತ ವೀಭಾಗಕ್ಕೆ ಸೇರಿಸಲಾಗಿದೆ.

Advertisements

ಈ ಅದೇಶ ಹೊರಡಿಸಿರುವ ಪ್ರಕಾರ ಇನ್ನ ಮುಂದೆ 36 ಸೆಂಟಿಮೀಟರ್ ಸ್ಕ್ರೀನ್ ನಿಂದ 105 ಸೆಂಟಿಮೀಟರ್ ನ ದೊಡ್ಡ ಅಳತೆಯ ಟೀವಿ ಸೆಟ್ ಗಳ ಆಮದಿಗೆ ನಿರ್ಬಂಧ ಮಾಡಲಾಗಿದೆ. ಹಾಗೆ ಇದರ ಜೊತೆ 63 ಸೆಂಟಿಮೀಟರ್ ವರೆಗಿನ ಎಲ್ ಸಿಡಿ ಟೀವಿ ಸೆಟ್ ಗಳನ್ನು ಸಹ ಆಮದು ಮಾಡುವಂತಿಲ್ಲ ಎಂದಿದ್ದಾರೆ.

ಭಾರತದಲ್ಲಿ ಅತಿದೊಡ್ದ ಟೆಲಿವಿಷನ್ ಮಾರುಕಟ್ಟೆಯಿದ್ದು ಈ ಪೈಕಿ ಶೇಕಡಾ 36 ರಷ್ಟು ಚೀನಾದಿಂದ ಆಮದು ಆಗುತ್ತಿದೆ ಚೀನಾ ಅಲ್ಲದೆ ಇತರೆ ದೇಶಗಳಿಂದ ಮಲೇಷ್ಯಾ, ಹಾಂಕಾಂಗ್, ಕೊರಿಯಾ, ವಿಯೆಟ್ನಾಂ, ಮಲೇಷ್ಯಾ, ಥಾಯ್ಲೆಂಡಾ ಮತ್ತು ಇಂಡೋನೇಷ್ಯಾ ಜರ್ಮನಿಯಿಂದ ಕಲರ್ ಟೀವಿಗಳನ್ನು ಅಮದು ಮಾಡಿಕೊಳ್ಳುತ್ತಿದೆ.

ಸರ್ಕಾರದ ಈ ನಡೆತೆಯನ್ನು ನೋಡಿ ಗೋಡ್ರೇಜ್ ಕಂಪನಿ ಬಿಸಿನೆಸ್ ಹೆಡ್, ಉಪಾದ್ಯಕ್ಷ ಕಮಲ್ ನಂದಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಕೈಗೊಂಡಿರುವ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಈ ನಿರ್ಬಂಧವನ್ನು ಮಾಡಿರುವುದರಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಸೃಷ್ಠಿಯಾಗುವುದಿಲ್ಲ, ಬಹುತೇಕ ದೊಡ್ಡ ದೊಡ್ಡ ಬ್ರಾಂಡ್ ಗಳ ಉತ್ಪಾದನ ಘಟಕಗಳು ಭಾರತದಲ್ಲೇ ಹೊಂದಿದೆ. ಈ ನಿರ್ಧಾರದಿಂದ ಸ್ಳಳೀಯ ಉದ್ಯೋಗವಕಾಶಗಳು ದೊರೆಯಲಿವೆ ಎಂದು ಹೇಳಿದ್ದಾರೆ.