Advertisements

ನನಗೇನೂ ಆಗಿಲ್ಲ..ಹುಷಾರು ಕಣ್ರೋ ಎಂದು ತನ್ನವರ ಬಗ್ಗೆ ಕಾಳಜಿವಹಿಸಿದ್ದ ಚಿರು ಕೊನೆ ಕ್ಷಣದಲ್ಲಿ ಹೇಳಿದ್ದನು ಗೊತ್ತಾ ?

Cinema

ಸ್ಯಾಂಡಲ್ವುಡ್ ಕಂಡ ಅತ್ಯಂತ ಸ್ಪುರಧ್ರೂಪಿ ನಟ ಚಿರಂಜೀವಿ ಸರ್ಜಾ. ಕೇವಲ ೩೯ನೇ ವರ್ಷಕ್ಕೆ ಅಕಾಲಿಕ ಮೃತ್ಯುವಿಗೆ ಒಳಗಾದ ಚಿರು. ಕನ್ನಡ ಚಿತ್ರ ರಂಗಕ್ಕೂ ಕೂಡ ಇದು ತುಂಬಲಾರದ ನಷ್ಟ. ಸ್ಟಾರ್ ಕುಟುಂಬದಿಂದ ಬಂದವನು,ನಾನೊಬ್ಬ ಹೀರೊ, ಸ್ಟಾರ್ ಎಂಬ ಅಹಂ ಎಲ್ಲಡೆ ಸದಾ ನಗುಮೊಗದೊಂದಿಗೆ ಎಲ್ಲರೊಂದಿಗೂ ಬೆರೆಯುತ್ತಿದ್ದ ಚಿರು. ಬೇರೆಯವರನ್ನ ನಗಿಸಿ ತಾನು ಸದಾ ಖುಷಿಯಾಗಿರುತ್ತಿದ್ದವರು. ಸ್ನೇಹಿತರು ಹಾಗೂ ತನ್ನವರ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿವಹಿಸಿದ್ದರು ಎಂಬುದರ ಬಗ್ಗೆ ಕೊನೆ ಕ್ಷಣದಲ್ಲಿ ಅವರಾಡಿದ್ದ ಈ ಮಾತುಗಳೇ ಸಾಕ್ಷಿ..

Advertisements

ಹೌದು, ತನ್ನ ಕುಟುಂಬ, ಸ್ನೇಹಿತರನ್ನ ಬಿಟ್ಟು ಚಿರ ನಿದ್ರೆಗೆ ಜಾರಿರುವ ಚಿರಂಜೀವಿ ಸರ್ಜಾ ಅವರನ್ನ ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ವಿಧಿ ವಿಧಾನಗಳಂತೆ ಮಣ್ಣು ಮಾಡಲಾಗಿದೆ. ತನ್ನ ಕಾರಿನ ಚಾಲಕ ಸೇರಿದಂತೆ ಎಲ್ಲರಿಗೂ ಅತಿ ಹೆಚ್ಚು ಪ್ರಿಯರಾಗಿದ್ದ ಚಿರು ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆದ ವೇಳೆ 2500 ಕ್ಕೂ ಹೆಚ್ಚು ದುಬಾರಿ ಫೇಸ್ ಮಾಸ್ಕ್ ಗಳು, ೨೦೦ಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಾಟಲ್ ಗಳನ್ನ ತಂದಿಟ್ಟಿದ್ದು, ತನ್ನ ಕುಟುಂಬದವರಿಗೆ ಮಾತ್ರವಲ್ಲದೆ ಗೆಳೆಯರಿಗೂ ಹಾಗೂ ಕೆಲಸ ಮಾಡುತ್ತಿದ್ದ ಹುಡುಗರಿಗೂ ಕೂಡ ಧರಿಸುವಂತೆ ಹೇಳಿದ್ದರು, ಅಷ್ಟರ ಮಟ್ಟಿಗೆ ಎಲ್ಲರ ಬಗ್ಗೆ ಕಾಳಜಿವಹಿಸುತ್ತಿದ್ದರು ಚಿರು.

ಇನ್ನು ಭಾನುವಾರವಷ್ಟೇ ಚಿರಂಜೀವಿ ಸರ್ಜಾ ಮನೆಯಲಿ ಇದ್ದ ವೇಳೆ ಇದ್ದಕಿದ್ದಂತೆ ಉಸಿರಾಟದ ತೊಂದರೆಗೆ ಒಳಗಾಗಿದ್ದು, ಕುಸಿದುಬಿದ್ದಿದ್ದರು. ಇದನ್ನ ಕಂಡು ಗಾಬರಿಯಾದ ಮನೆಯಲ್ಲಿದ್ದ ಹುಡುಗರು ಅವರನ್ನ ಕೂಡಲೇ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಇದೆ ವೇಳೆ ಹುಷಾರು ಕಣ್ರೋ..ನನಗೇನೂ ಆಗಿಲ್ಲ..ಮೆಲ್ಲಗೆ ಕಾರು ಓಡಿಸ್ರೋ..ಎಂದು ತನ್ನವರ ಬಗ್ಗೆ ಕಾಳಜಿ ವಹಿಸಿದ್ದ ಚಿರಂಜೀವಿ ಸರ್ಜಾ ಹೇಳಿದ್ದರಂತೆ..