Advertisements

ಚಿರು ಜೊತೆಗಿನ ಫೋಟೋಗಳನ್ನ ಹಾಕಿ ಬಾಲ್ಯದ ನೆನಪುಗಳನ್ನ ಹಂಚಿಕೊಂಡ ಐಶ್ವರ್ಯಾ ಅರ್ಜುನ್

Cinema

ವಯಸ್ಸಲ್ಲದ ವಯಸ್ಸಿನಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ನಟ ಚಿರಂಜೀವಿ ಸರ್ಜಾ ಅವರ ಸಾವು ಸ್ಯಾಂಡಲ್ವುಡ್ ಗೆ ತುಂಬಲಾರದ ನಷ್ಟವೇ ಸರಿ. ತಮ್ಮ ವಿಭಿನ್ನ ಚಿತ್ರಗಳಿಂದ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಯುವ ನಟ ಚಿರು ಸರ್ಜಾ ಈಗ ಕೇವಲ ನೆನಪು ಮಾತ್ರ.ಇಡೀ ಕರ್ನಾಟಕವೇ ಚಿರು ಸರ್ಜಾ ಅವರ ನಿಧಾನಕ್ಕೆ ಕಂಬನಿ ಮಿಡಿದಿದೆ. ಇನ್ನು ಅಳಿಯನ ಅಕಾಲಿಕ ಮರಣದ ಸುದ್ದಿ ಕೇಳಿ ಚೆನ್ನೈನಿಂದ ಓಡೋಡಿ ಬಂದರು ಅರ್ಜುನ್ ಸರ್ಜಾ.

Advertisements

ಮೊನ್ನೆ ತಾನೇ ಚಿರು ಜೊತೆಗಿನ ಫೋಟೋವೊಂದನ್ನ ಪೋಸ್ಟ್ ಮಾಡುವುದರ ಮೂಲಕ ಐ ಮಿಸ್ ಯು ಬಾಯ್..ವಿಧಿ ತುಂಬಾ ಕ್ರೂರಿಯಾಗಿಬಿಟ್ಟ ಎಂದು ಬರೆದುಕೊಂಡಿದ್ದರು.ಇನ್ನು ಅರ್ಜುನ್ ಸರ್ಜಾ ಅವರ ಸಹೋದರಿ ಅಮ್ಮಾಜಿ ಅವರ ಮಕ್ಕಳೇ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ. ಹಾಗೂ ಅರ್ಜುನ್ ಸರ್ಜಾ ಅವರ ಸಹೋದರ ಕಿಶೋರ್ ಸರ್ಜಾ ಅವರ ಮಗ ಸೂರಜ್ ಸರ್ಜಾ. ಮತ್ತು ಅರ್ಜುನ್ ಸರ್ಜಾ ಅವರ ಇಬ್ಬರು ಪುತ್ರಿಯರಾದ ಮಕ್ಕಳಾದ ಐಶ್ವರ್ಯಾ ಹಾಗೂ ಅಂಜಾನಾ.ಇವರೆಲ್ಲರೂ ಒಟ್ಟೊಟ್ಟಿಗೆ ಆಡಿಕೊಂಡು ಬೆಳೆದವರೇ.

ಇನ್ನು ಎಲ್ಲರಿಗೂ ಚಿರು ಸರ್ಜಾ ಅವರನ್ನ ಕಳೆದುಕೊಂಡ ನೋವು ಕಾಡುವುದು ಸಹಜ.ಹಾಗಾಗಿಯೇ ಐಶ್ವರ್ಯಾ ತಮ್ಮ ಬಾಲ್ಯದ ಫೋಟೋಗಳನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇನ್ನು ಫೋಟೋಗಳಲ್ಲಿ ಐಶ್ವರ್ಯ ಜೊತೆಗೆ ಸಹೋದರಿ ಅಂಜನಾ, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಹಾಗೂ ಸೂರಜ್ ಸರ್ಜಾ ಇದ್ದಾರೆ. ಇನ್ನು ಐಶ್ವರ್ಯ ಹಂಚಿಕೊಡಿರುವ ಈ ಫೋಟೋಗಳಿಗೆ ಅಭಿಮಾನಿಗಳಿಂದ 45 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.

ಇನ್ನು ಐಶ್ವರ್ಯ ಅವರು ಪ್ರೇಮ ಬರಹ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಇನ್ನು ಈ ಚಿತ್ರದಲ್ಲ್ ಚಿರಂಜೀವಿ ಸರ್ಜಾ ಕೂಡ ಒಂದು ಹಾಡಿನಲ್ಲಿ ಅಭಿನಯಿಸಿದ್ದರು.ಇನ್ನು ನೆನ್ನೆಯಷ್ಟೇ ತಮ್ಮ ಧ್ರುವ ಸರ್ಜಾ ಕೂಡ ಚಿರು ಜೊತೆಗಿನ ಫೋಟೋವೊಂದನ್ನ ಹಾಕಿ, ನೀನಿಲ್ಲದೆ ನನಗೆ ಇರಲು ಸಾಧ್ಯವಾಗುತ್ತಿಲ್ಲ..ನೀನು ವಾಪಾಸ್ ಬೇಕು ಎಂದು ಭಾವುಕರಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದರು.