Advertisements

ಚಿರು ಪುಣ್ಯತಿಥಿ ದಿನವೇ ಭಾವನಾತ್ಮಕ ಪತ್ರ ಬರೆದ ಅರ್ಜುನ್ ಸರ್ಜಾ..ಆ ಪತ್ರದಲ್ಲಿ ಸರ್ಜಾ ಕುಟುಂಬ ಚಿರುಗೆ ಮನವಿ ಮಾಡಿಕೊಂಡಿದ್ದೇನು ಗೊತ್ತಾ ?

Cinema

ಕನ್ನಡ ಚಿತ್ರರಂಗದ ಸ್ಪುರ ದ್ರೂಪಿ ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲಾ ಆಗಲಿ ಇಂದಿಗೆ 11 ದಿವಸ ಆಗಿದೆ. ಇನ್ನು ೧೧ನೇ ದಿನದ ಪುಣ್ಯ ತಿಥಿಯ ಕಾರ್ಯ ನೆರವೇರಿಸುವ ಸಲುವಾಗಿ ಸರ್ಜಾ ಕುಟುಂಬವರು ಇಂದು ಕನಕಪುರ ರಸ್ತೆಯಲ್ಲಿರುವ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಪುಣ್ಯ ತಿಥಿಯ ವಿಧಿ ವಿಧಾನಗಳನ್ನ ನೆರವೇರಿಸಿದ್ದಾರೆ. ಆದರೆ ಏನೇ ಹೇಳಿದರೂ ಕುಟುಂಬದವರ ದುಃಖವನ್ನ ಕಡಿಮೆಮಾಡಲು ಯಾರಿಂದಲೂ ಸಾಧ್ಯವಿಲ್ಲ.

Advertisements

ಇನ್ನು ಇದೆ ಸಮಯದಲ್ಲಿ ಚಿರು ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಅವರು ತಮ್ಮ ಪ್ರೀತಿಯ ಅಳಿಯನನ್ನ ಮರೆಯಲು ಆಗದೆ ಮನದಾಳದಲ್ಲಿರುವ ನೋವನ್ನ ಓಲೆಯೊಂದರ ಮೂಲಕ ಅರ್ಜುನ್ ಸರ್ಜಾ ಅವರು ಇಂದು ಬಿಚ್ಚಿಟ್ಟಿದ್ದಾರೆ. ಮೇಘನಾ ರಾಜ್ ಹೊಟ್ಟೆಯಲ್ಲಿ ಚಿರು ಸರ್ಜಾ ಮತ್ತೆ ಹುಟ್ಟಿ ಬರಲಿ ಎಂದು ಭಾವನಾತ್ಮಕವಾಗಿ ಕುಟುಂಬದವರು ಮಾತನಾಡಿದ್ದಾರೆ. ಇನ್ನು ಅರ್ಜುನ್ ಸರ್ಜಾ ಅವರು ತಮ್ಮ ಓಲೆಯ ಮೂಲಕ..ನಿನ್ನ ಮನಸ್ಸಿಗೆ ಯಾರಾದ್ರೂ ಬೇಜಾರು ಮಾಡಿದ್ದರೆ, ನಮ್ಮಣ್ಣ ನೀನು ಬೈದುಕೊಂಡಿದ್ರು, ಕೋಪದಿಂದ ನೀನು ಮಾತನಾಡಿದ್ರೂ, ಯಾರಿಗೆ ಹೇಳದೆ ಯಾವುದೊ ಊರಿಗೆ ಹೋಗಿದ್ರು ಪರವಾಗಿರಲಿಲ್ಲ..ಆದರೆ ಎಂದು ಮತ್ತೆ ಬಾರದಂತ ಲೋಕಕ್ಕೆ ಹೋಗಿ ನಮಗೆ ಶಿಕ್ಷೆ ಕೊಟ್ಟಿದ್ದೀಯಲ್ಲಪ್ಪ..

ಏನೋ ಸ್ವಲ್ಪ ದಿವಸ ಆದಮೇಲೆ ಎಲ್ಲರು ಮರೆತುಬಿಡುತ್ತಾರೆ ಅಂತ ನೀನು ತಿಳಿದುಕೊಂಡಿದ್ದರೆ ಅದು ಸುಳ್ಳು..ಕಣ್ಣು ಮುಚ್ಚಿದ್ರೂ, ತೆರೆದ್ರೂ ಆ ನಿನ್ನ ನಗುಮುಖವೇ ನಮ್ಮ ಮುಂದೆ ಬರುತ್ತದೆ. ಜೀವನಪರ್ಯಂತ ಇದು ನಮಗೆಲ್ಲರಿಗೂ ಎರಡೇ ಇರುವ ದೊಡ್ಡ ಗಾಯ.ನೀನು ಯಾವಾಗಲು ನಮ್ಮ ಹೃದಯದಲ್ಲಿ, ಮನಸ್ಸಿನಲ್ಲಿ ಇರುತ್ತೀಯ ಕಂದ. ನಿನ್ನ ತಾತ ನಿನಗೆ ಚಿರಂಜೀವಿ ಅಂತ ಹೆಸರಿಟ್ಟಿದ್ದಾರೆ ಆದರೆ ಅದು ಯಾವತ್ತೂ ಸುಳ್ಳಾಗಲ್ಲ.. ನಿನ್ನ ನೆನಪು, ಆ ನಿನ್ನ ನಗು, ಈ ಸಂಬಂಧ ಯಾವಾಗಲೂ ಚಿರಂಜೀವಿಯಾಗಿಯೇ ಇರುತ್ತದೆ ಬಂಗಾರ ಎಂದು ಅರ್ಜುನ್ ಸರ್ಜಾ ಅವರು ತಮ್ಮ ಬರೆದುಕೊಂಡಿದ್ದಾರೆ. ಚಿರು ಸರ್ಜಾ ಬಗ್ಗೆ ಇನ್ನು ಏನೆಲ್ಲಾ ಹೇಳಿದ್ದಾರೆ ಅರ್ಜುನ್ ಸರ್ಜಾ ಎಂಬುದನ್ನ ತಿಳಿಯಲು ಈ ವಿಡಿಯೋ ನೋಡಿ..