Advertisements

ಚಿರು ಸರ್ಜಾ 11ನೇ ಪುಣ್ಯ ತಿಥಿಯ ಕಾರ್ಯದ ಬಗ್ಗೆ ನಿರ್ಧಾರ ತೆಗೆದುಕೊಂಡ ಸರ್ಜಾ ಕುಟುಂಬ

Cinema

ಸಮಯದ ಮುಂದೆ ಎಲ್ಲವೂ ಶೂನ್ಯ. ಚಿರು ಸರ್ಜಾ ಎಲ್ಲೋ ಇದ್ದಾರೆ ಅನ್ನಿಸುತ್ತಿದೆ ಮನಸ್ಸಿಗೆ. ಆದರೆ ಅವರು ಸ್ವರ್ಗಸ್ತರಾಗಿ ಇವತ್ತಿಗೆ ಹತ್ತು ದಿನಗಳು ಆಗಿಯೇ ಹೋಗಿವೆ. ವಿಧಿಯಾಟದ ಮುಂದೆ ಎಲ್ಲವೂ ತೃಣ ಸಮಾನ. ಚಿರು ಸರ್ಜಾ ಅವರ ಅಕಾಲಿಕ ಮರಣ ಕೇವಲ ಅವರ ಕುಟುಂಬಕ್ಕಷ್ಟೇ ಅಲ್ಲ, ಇಡೀ ಸ್ಯಾಂಡಲ್ವುಡ್ ಗೆ ಒಂದು ದೊಡ್ಡ ಶಾಕ್. ಇಷ್ಟು ಬೇಗ ಬಿಟ್ಟು ಹೋಗುವಂತದ್ದಲ್ಲ ಚಿರು ಸರ್ಜಾ ಅವರನ್ನ ಕಳೆದುಕೊಂಡ ಅವರ ಕುಟುಂಬದವರ ನೋವು.

Advertisements

ಇನ್ನು ಧ್ರುವ ಸರ್ಜಾ ಪ್ರೀತಿಯ ಅಣ್ಣನ ಜೊತೆಗಿನ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಣ್ಣನ ನೆನಪಿನಲ್ಲೇ ದಿನಗಳನ್ನ ಕಳೆಯುತ್ತಿದ್ದಾರೆ. ಇನ್ನು ನಾಳೆ ಹನ್ನೊಂದನೆಯ ದಿನ. ಏನೇ ನೋವಿದ್ದರೂ ಮಾಡಬೇಕಾದ ಸಂಸ್ಕಾರಗಳನ್ನ ಮಾಡಲೇಬೇಕು. ಹಾಗಾಗಿ ನಾಳೆ ಜೂನ್ 17 ಬುಧವಾರದಂದು, ಚಿರು ಸರ್ಜಾ ಅವರ ೧೧ ದಿನದ ತಿಥಿ ಕಾರ್ಯ, ನೆಲಗೋಳಿ ಬಳಿಯಿರುವ ಧ್ರುವ ಅವರ ಫಾರ್ಮ್ ಹೌಸ್ ನಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಹೇಳಲಾಗಿದೆ.

ಇನ್ನು ಚಿರು ಸರ್ಜಾ ಅವರ ಹನ್ನೊಂದನೆಯ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮಾತ್ರ ಪಾಲ್ಗೊಳ್ಳಲಿದ್ದರೆ. ಇನ್ನು ಕೊರೋನಾ ಇರುವ ಕಾರಣ ಸರ್ಕಾರದ ನಿಯಮಗಳನ್ನ ಪಾಲಿಸಿಯೇ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಲಾಗಿದೆ. ಇನ್ನು ಚಿರು ಪತ್ನಿ ಮೇಘನಾ ಗರ್ಭಿಣಿಯಾಗಿದ್ದು ಕೆಲವೇ ತಿಂಗಳಿನಲ್ಲಿ ಮಗು ಜನಿಸಲಿದೆ. ಚಿರಂಜೀವಿ ಸರ್ಜಾ ಅವರೇ ಮತ್ತೆ ಮೇಘನಾ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಎಂದು ನಾವು ಆಶಿಸೋಣ..