Advertisements

ಪ್ರೀತಿಯ ಯಜಮಾನ ಚಿರುವನ್ನ ನೋಡಲು ಹಠ ಮಾಡುತ್ತಿರೋ ಶ್ವಾನ ದ್ರೋಣ

Cinema

ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧಾನಕ್ಕೆ ಇಡೀ ಸ್ಯಾಂಡಲ್ವುಡ್ ಶಾಕ್ ನಲ್ಲಿದೆ. ಸೆಲೆಬ್ರೆಟಿಗಳು ಸೇರಿದಂತೆ ರಾಜಕಾರಣಿಗಳು ಸಹ ಬಂದು ಚಿರು ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ದುರಂತ ಅಂತ್ಯಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ತನ್ನ ಮಗುವನ್ನ ನೋಡುವ ಮೊದಲೇ ಕಣ್ಮರೆಯಾಗಿದ್ದಾರೆ ಚಿರಂಜೀವಿ ಸರ್ಜಾ. ಇನ್ನು ಪತ್ನಿ ಮೇಘನಾ ಶೆಟ್ಟಿ ಅವರ ಬಗ್ಗೆ ಹೇಳಲು ಮಾತುಗಳೇ ಇಲ್ಲ.

Advertisements

ಒಂದು ಕಡೆ ಹೊಟ್ಟೆಯಲ್ಲಿ ಮಗು, ಮತ್ತೊಂದು ಕಡೆ ಚಿರ ನಿದ್ರೆಗೆ ಜಾರಿರುವ ಪತಿ. ಇಂತಹ ಪರಿಸ್ಥಿತಿ ಯಾವ ಹೆಣ್ಣುಮಕ್ಕಳಿಗೆ ಬರಲೇಬಾರದು. ಇದೆಲ್ಲದರ ನಡುವೆ ಚಿರಂಜೀವಿ ಸರ್ಜಾ ಅವರ ಮುದ್ದಿನ ಶ್ವಾನ ದ್ರೋಣ ಕೂಡ ತನ್ನ ಪ್ರೀತಿಯ ಯಜಮಾನನ್ನು ಕಳೆದುಕೊಂಡು ದುಃಖದಲ್ಲಿದೆ. ಹೌದು,, ಹೃದಯಾಘಾತದಿಂದ ಬಾರದ ಲೋಕಕ್ಕೆ ಹೋಗಿರುವ ಪ್ರೀತಿಯ ಯಜಮಾನನ್ನ ನೋಡಲು ಶ್ವಾನ ದ್ರೋಣ ಹಠ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ.

ಪ್ರಾಣಿಪ್ರಿಯರಾಗಿದ್ದ ಚಿರಂಜೀವಿ ಸರ್ಜಾ ರವರಿಗೆ ಶ್ವಾನ ದ್ರೋಣ ಎಂದರೆ ತುಂಬಾ ಪ್ರೀತಿ. ಇನ್ನು ಈ ಶ್ವಾನವನ್ನ ರೆಬೆಲ್ ಸ್ಟಾರ್ ಅಂಬರೀಷ್ ರವರು ಕೊಟ್ಟಿದ್ದರು ಎನ್ನಲಾಗಿದೆ. ಇನ್ನು ಕೆಲವು ದಿನಗಳ ಹಿಂದಷ್ಟೇ ಚಿರಂಜೀವಿ ಸರ್ಜಾ ಅವರು ಚಾಲೆಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮುದ್ದಾದ ನಾಯಿಮರಿಯೊಂದನ್ನ ಗಿಫ್ಟ್ ಆಗಿ ಕೊಟ್ಟಿದ್ದರು. ಏನೇ ಬಂದರೂ ಸದಾ ಹಸನ್ಮುಖಿಯಾಗಿದ್ದ ಎಲ್ಲರೊಂದಿಗೂ ಬಹು ಬೇಗ ಬೆರೆಯುತ್ತಿದ್ದ, ೩೯ ವರ್ಷದ ಚಿರು ಅವರಿಗೆ ಈ ಸಾವು ನ್ಯಾಯವಲ್ಲ..