ಸದಾ ಹಸನ್ಮುಖಿ, ಯುವನಟ ಚಿರಂಜೀವಿ ಸರ್ಜಾ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಕೇವಲ 39 ವರ್ಷದ ಸ್ಪುರಧ್ರೂಪಿ ಚಿರು ಇನ್ನಮುಂದೆ ಇರೋದಿಲ್ಲ ಎಂಬ ಸತ್ಯವನ್ನ ಅರಗಿಸಿಕೊಳ್ಳೋಕು ಕೂಡ ಸಾಧ್ಯವಿಲ್ಲದಂತಾಗಿದೆ.ತನ್ನ ಕಂದನನ್ನ ನೋಡುವ ಮುನ್ನವೇ ಇನ್ನೆಂದು ಬಾರದಂತ ಲೋಕಕ್ಕೆ ಹೋಗಿಬಿಟ್ಟಿದ್ದಾರೆ. ಇನ್ನು ಹೊಟ್ಟೆಯಲ್ಲಿ ಪತ್ನಿ, ಮತ್ತೊಂದುಕಡೆ ಪ್ರೀತಿಯ ಪತಿಯನ್ನ ಕಳೆದುಕೊಂಡ ನೋವಿನಲ್ಲಿದ್ದಾರೆ ಪತ್ನಿ ಮೇಘನಾ ರಾಜ್.

ಸದಾ ಲವಲವಿಕೆಯಿಂದ ಇದ್ದ ಚಿರಂಜೀವಿ ಸರ್ಜಾಗೆ ಇದ್ದಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೆ ಸತತವಾಗಿ ಮೂರ್ನಾಲ್ಕು ಬರಿ ಪಾಲ್ಸ್ ರೇಟ್ ಕಡಿಮೆಯಾಗಿದ್ದು,ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಕೊನೆಯುಸಿರಳೆದ್ರು.ಚಂದನ್ ಶೆಟ್ಟಿ ಸೇರಿದಂತೆ ಎಷ್ಟೋ ಕಲಾವಿದರಿಗೆ ಸಿನಿಮಾ ರಂಗದಲ್ಲಿ ಅವಕಾಶ ಕಲ್ಪಿಸಿಕೊಟ್ಟವರು ಚಿರು.ತಾನು ಸ್ಟಾರ್ ಕುಟುಂಬದಿಂದ ಬಂದವನು, ಸ್ಟಾರ್ ಎಂಬ ಯಾವುದೇ ಧಿಮಾಕು ಲೇಶ ಮಾತ್ರವೂ ಅವರಲ್ಲಿ ಇರಲಿಲ್ಲ.ಇನ್ನು ಭೋಜನಪ್ರಿಯರಾಗಿದ್ದ ಚಿರು ಮಟನ್ ಬಿರಿಯಾನಿಯನ್ನ ತುಂಬಾ ಇಷ್ಟಪಡುತ್ತಿದ್ದರಂತೆ.ಈಗ ತಮ್ಮ ಧ್ರುವ ಸರ್ಜಾ ಅವರ ಆಸೆಯಂತೆ ಚಿರು ಅವರನ್ನ ಧ್ರುವ ಅವರ ಫಾರ್ಮ್ ಹೌಸ್ ನಲ್ಲಿ ಮಣ್ಣು ಮಾಡಲಾಗಿದೆ.

ಇನ್ನು ಸರ್ಜಾ ಕುಟುಂಬಕ್ಕೆ ಇದೇನು ಮೊದಲನೆ ಆಘಾತವೇನೂ ಅಲ್ಲ. ಹೌದು, ಕನ್ನಡ ಚಿತ್ರರಂಗದ ಹಿರಿಯ ನಟ ಶಕ್ತಿ ಪ್ರಸಾದ್ ಅವರಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ ಅರ್ಜುನ್ ಸರ್ಜಾ ಮತ್ತು ಎರಡನೆಯ ಮಗ ಕಿಶೋರ್ ಸರ್ಜಾ. ಅರ್ಜುನ್ ಸರ್ಜಾ ಅವರು ಬಹುಭಾಷಾ ಚಿತ್ರಗಳಲ್ಲಿ ನಟಿಸಿ ಸ್ಟಾರ್ ನಟರಾಗಿ ಹೊರಹೊಮ್ಮಿದ್ರು. ಇನ್ನು ಕಿಶೋರ್ ಸರ್ಜಾ ಅವರು ನಿರ್ದೇಶನದತ್ತ ಮುಖಮಾಡಿದ್ದು, ಕನ್ನಡದ ಹಲವು ನಿರ್ದೇಶಕರುಗಳ ಜೊತೆಯಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ರು.

ಇನ್ನು ಅರ್ಜುನ್ ಸರ್ಜಾ ನಟನೆಯ ಅಳಿಮಯ್ಯ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾಗಿ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಕಿಶೋರ್ ಸರ್ಜಾ, ತುತ್ತಾಮುತ್ತಾ, ಜೋಡಿ, ಬಾವ ಬಾಮೈದಾ ಸೇರಿದಂತೆ ಚಿರಂಜೀವಿ ಸರ್ಜಾ ನಟಿಸಿದ್ದ ಮೊದಲ ಚಿತ್ರ ವಾಯುಪುತ್ರಕ್ಕೂ ಕೂಡ ಕಿಶೋರ್ ಸರ್ಜಾ ಅವರು ನಿರ್ದೇಶನ ಮಾಡಿದ್ದರು.ಆದರೆ ವಾಯುಪುತ್ರ ತೆರೆಗೆ ಬರುವ ಮೊದಲೇ ತಮ್ಮ 50 ನೇ ವಯಸ್ಸಿನಲ್ಲಿ ಜೂನ್ 2009ರಂದು ಕಿಶೋರ್ ಸರ್ಜಾ ಅವರಿಗೆ ಹೃದಯಾಘತವಾಗಿದ್ದು ಇಹಲೋಕ ತ್ಯಜಿಸಿದ್ರು.