Advertisements

ತಂದೆಯಾದ ಖುಷಿಯಲ್ಲಿ ಪತ್ನಿಗೆ ಬೊಂಬೆ ಗಿಫ್ಟ್ ಕೊಟ್ಟಿದ್ದ ಚಿರು – ವಿಧಿ ಹೀಗೆ ಮಾಡಬಾರದಿತ್ತು

Cinema

ವಿಧಿ ವಿಪರೀತ ಅಂದರೆ ಇದೆ ಇರಬೇಕು. ತಂದೆಯಾಗುತ್ತಿರುವ ಸಂತಸದ ಸುದ್ದಿಯನ್ನ ತನ್ನ ಕುಟುಂಬದವರು, ಸ್ನೇಹಿತರೊಂದಿಗೆ ಹಂಚಿಕೊಂಡು ಖುಷಿಯಾಗಿರಬೇಕಿದ್ದ ಸಮಯದಲ್ಲಿ ತನ್ನ ಕಂದ ಭೂಮಿಗೆ ಬರುವ ಮೊದಲೇ ಇಹಲೋಕ ತ್ಯಜಿಸಿದ್ದಾರೆ ನಟ ಚಿರಂಜೀವಿ ಸರ್ಜಾ.

Advertisements

ಹೌದು ಮೇಘನಾ ರಾಜ್ ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ ಎಂದು ಹೇಳಲಾಗಿದೆ. ತನ್ನ ಮುದ್ದು ಕಂದನ ಬರುವಿಕೆಗಾಗಿ ಕಾಯುತ್ತಿದ್ದ ನಟ ಚಿರಂಜೀವಿ ಸರ್ಜಾ ಪತ್ನಿಗೆ ಮೇಘನಾ ರಾಜ್ ರವರಿಗೆ ಗೊಂಬೆಯೊಂದನ್ನ ಉಡುಗೊರೆಯಾಗಿ ಕೊಟ್ಟಿದ್ದರು. ಆದರೆ ಆ ವಿಧಿಯಾಟವೇ ಬೇರೆ ಇತ್ತೇನೋ..ಹೊಟ್ಟೆಯಲ್ಲಿ ಮಗು ಒಂದು ಕಡೆ..ಅಗಲಿದ ಪ್ರೀತಿಯ ಪತಿಯ ನೋವು ಒಂದು ಕಡೆ..ಇಂತಹ ಸಮಯದಲ್ಲಿ ತನ್ನ ಪತಿ ಕೊಟ್ಟ ಮುದ್ದಾದ ಗೊಂಬೆಯನ್ನ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದರೆ ಮೇಘನಾ..

ಪ್ರತಿಯೊಬ್ಬ ತಂದೆ ತಾಯಿಗಳು ತಮಗೆ ಹುಟ್ಟುವ ಮಕ್ಕಳ ಬಗ್ಗೆ ಮೊದಲೇ ಹಲವಾರು ಕನಸುಗಳನ್ನ ಕಂಡಿರುತ್ತಾರೆ. ಇನ್ನು ಚಿರು ತನ್ನ ಕಂದನ ಮೇಲೆ ಎಷ್ಟು ಕನಸುಗಳನ್ನ ಕಂಡಿದ್ದರೋ ಏನೋ ಆ ದೇವರಿಗೆ ಗೊತ್ತು ಎಂಬುದಕ್ಕೆ ಜೋಕಾಲಿ ಕಟ್ಟಿ ಗೊಂಬೆಯನ್ನ ಆಡಿಸುತ್ತಿರುವ ಈ ಫೋಟೋನೇ ಸಾಕ್ಷಿ..