Advertisements

ಚಿರು ಸರ್ಜಾ ಅವರ ಕಟೌಟ್ ಫೋಟೋ ಇಟ್ಟು ತುಂಬು ಗರ್ಭಿಣಿ ಮೇಘನಾರವರಿಗೆ ಸೀಮಂತ..ಈ ಫೋಟೋಸ್ ನೋಡಿ

Cinema

ಸ್ಯಾಂಡಲ್ವುಡ್ ಯುವನಟ ಚಿರು ಸರ್ಜಾ ಅವರ ಅಕಾಲಿಕ ನಿಧನದ ಬಳಿಕ ಸರ್ಜಾ ಹಾಗೂ ಸುಂದರ್ ರಾಜ್ ಅವರ ಕುಟುಂಬದಲ್ಲಿ ಕೇವಲ ನೋವು ಮಾತ್ರ ತುಂಬಿತ್ತು. ಆದರೆ ಈಗ ಸರ್ಜಾ ಕುಟುಂಬದಿಂದ ಖುಷಿ ಸುದ್ದಿಯೊಂದು ಬಂದಿದೆ. ಹೌದು, ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಸಮಯದಲ್ಲೆ ಗರ್ಭಿಣಿಯಾಗಿದ್ದ ಚಿರು ಪತ್ನಿ ನಟಿ ಮೇಘನಾ ರಾಜ್ ಅವರಿಗೆ ಸರಳವಾಗಿ ಸೀಮಂತ ಕಾರ್ಯಕ್ರಮವನ್ನ ನೆರವೇರಿಸಲಾಗಿದೆ. ಒಂದು ವೇಳೆ ಚಿರು ಈ ಸಮಯದಲ್ಲಿ ಇದ್ದಿದ್ದರೆ ಎಷ್ಟು ಅದ್ದೂರಿಯಾಗಿ ಮೇಘನಾರವರ ಸೀಮಂತ ಕಾರ್ಯಕ್ರಮ ನಡೆಯುತಿತ್ತೊ ಗೊತ್ತಿಲ್ಲ..ಆದರೆ ವಿಧಿಯಾಟ ಬೇರೆಯೇ ಇತ್ತು ಅನ್ನಿಸುತ್ತೆ. ಅದಾಗಲಿಲ್ಲ..

Advertisements

ಹೌದು, ಈಗ ಮೇಘನಾರಾಜ್ ಅವರು ತುಂಬು ಗರ್ಭಿಣಿಯಾಗಿದ್ದು ಅವರ ತಂದೆ ಸುಂದರ್ ರಾಜ್ ಅವರ ಮನೆಯಲ್ಲಿ ಸೀಮಂತ ಕಾರ್ಯಕ್ರಮವನ್ನ ನೆರವೇರಿಸಲಾಗಿದೆ. ಇನ್ನು ಚಿರು ಅಗಲಿಕೆಯ ನೋವು ಹಾಗೆಯೆ ಇರುವ ಕಾರಣ ಬಹಳ ಸರಳವಾಗಿ ಈ ಶುಭ ಕಾರ್ಯಕ್ರಮವನ್ನ ನೆರವೇರಿಸಿದ್ದಾರೆ. ಇನ್ನು ಇದೆ ವೇಳೆ ಚಿರಂಜೀವಿ ಸರ್ಜಾ ಅವರ ಕಟೌಟ್ ನ್ನ ಇತ್ತು ಸೀಮಂತ ಕಾರ್ಯಕ್ರಮವನ್ನ ಮಾಡಲಾಗಿದೆ.

ಇನ್ನು ಫೋಟೋದಲ್ಲಿರುವ ಹಾಗೆ ಮೇಘನಾ ರಾಜ್ ರವರು ಕುಳಿತಿದ್ದರೆ ಅವರ ಹಿಂದೆ ಚಿರು ಅವರ ಕಟೌಟ್ ಫೋಟೋವನ್ನ ಇಟ್ಟು ಸೀಮಂತ ಮಾಡಿಸಿ ಕೊಳ್ಳುವುದರ ಮೂಲಕ ಚಿರು ನನ್ನ ಜೊತೆಯೇ ಇದ್ದಾರೆ, ಅವರು ಎಲ್ಲೂ ಹೋಗಿಲ್ಲ ಎಂಬಷ್ಟರ ಮಟ್ಟಿಗೆ ಮೇಘನಾರವರು ಸಂತಸ ಪಟ್ಟಿದ್ದಾರೆ ಎಂದು ಹೇಳಬಹುದು.

ಇನ್ನು ತುಂಬಾ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕೆಲ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗಿಯಾಗಿದ್ದು ತುಂಬು ಗರ್ಭಿಣಿ ಮೇಘನಾರವರಿಗೆ ಆಶೀರ್ವಾದ ಮಾಡಿ ಶುಭ ಹಾರೈಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸರ್ಜಾ ಕುಟುಂಬಕ್ಕೆ ಪುಟ್ಟ ಕಂದಮ್ಮನ ಆಗಮನವಾಗಲಿದ್ದು ಇನ್ನಾದರೂ ಮೇಘನಾರಾಜ್ ರವರ ಜೀವನದಲ್ಲಿ ಹೊಸ ಬೆಳೆಕು ಮೂಡಲಿ ಎಂಬುದು ಎಲ್ಲರ ಆಶಯವಾಗಿದೆ.