Advertisements

ಸರ್ಜಾ ಕುಟುಂಬಕ್ಕೆ ಜೂನಿಯರ್ ಚಿರು ಆಗಮನ..ಮಗು ಹೇಗಿದೆ ನೋಡಿ

Cinema

ನಮಸ್ತೇ ಸ್ನೇಹಿತರೇ, ತುಂಬು ಗರ್ಭಿಣಿಯಾಗಿದ್ದ ಚಿರು ಪತ್ನಿ ಮೇಘನಾ ರಾಜ್ ರವರ ಸೀಮಂತ ಕಾರ್ಯಕ್ರಮವನ್ನ ಇತ್ತೀಚೆಗಷ್ಟೇ ತುಂಬಾ ಸರಳವಾಗಿ ಆಚರಣೆ ಮಾಡಲಾಗಿತ್ತು. ಚಿರು ಸರ್ಜಾ ಅವರನ್ನ ಕಳೆದುಕೊಂಡ ಮೇಲೆ ಇದೆ ಮೊದಲ ಬಾರಿಗೆ ಸರ್ಜಾ ಕುಟುಂಬದಲ್ಲಿ ಉಲ್ಲಾಸದ ನಗೆ ಮೂಡಿತ್ತು ಎಂದರೆ ತಪ್ಪಾಗೋಲ್ಲ. ಇನ್ನು ಈ ಸೀಮಂತ ಕಾರ್ಯಕ್ರಮದ ವೇಳೆ ಚಿರಂಜೀವಿ ಸರ್ಜಾ ಫೋಟೋ ಕಟೌಟ್ ಕೂಡ ಹಾಕಲಾಗಿತ್ತು. ಮೇಘನಾರವರಿಗೆ ಚಿರು ಇಲ್ಲ ಎಂಬ ನೋವು ಕಾಡಬಾರದೆಂಬ ಆಶಯ ಇದರ ಹಿಂದೆ ಇತ್ತು.

Advertisements

ಇನ್ನು ಅಕ್ಟೊಬರ್ ಹದಿನಾರರಂದು ಅರ್ಜುನ್ ಸರ್ಜಾ ಅವರು ವೆಲ್ಕಮ್ ಜೂನಿಯರ್ ಚಿರು ಎಂದು ಹೇಳುವ ಮೂಲಕ ಮೇಘನಾ ರಾಜ್ ರವರ ಕೈನಿಂದ ಕೇಕ್ ಕಟ್ ಮಾಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ಭಾಗವಹಿಸಿದ್ದರು. ಇನ್ನುಈ ವಿಡಿಯೋವನ್ನ ನಟ ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಇನ್ನು ಚಿರು ಸರ್ಜಾ ಮತ್ತೆ ಮೇಘನಾರವರ ಹೊಟ್ಟೆಯಲ್ಲಿ ಜನಿಸಲಿದ್ದಾರೆ ಎಂಬ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ ಎಲ್ಲರ ನೀರಿಕ್ಷೆಯಂತೆ ಸರ್ಜಾ ಕುಟುಂಬದಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ಇಂದು ನಟ ಮೇಘನಾ ರಾಜ್ ರವರಿಗೆ ಹೆರಿಗೆಯಾಗಿದ್ದು ಕುಟುಂಬದವರು ನಿರೀಕ್ಷೆ ಮಾಡಿದಂತೆ ಜೂನಿಯರ್ ಚಿರು ಸರ್ಜಾ ಅವರ ಆಗಮನವಾಗಿದೆ. ಮೇಘನಾರವರಿಗೆ ಮುದ್ದಾದ ಗಂಡು ಮಗುವಾಗಿದೆ.

ಬೆಂಗಳೂರಿನ ಅಕ್ಷ ಆಸ್ಪತ್ರೆಯಲ್ಲಿ ಮೇಘನಾರವರಿಗೆ ಗಂಡು ಮಗು ಜನಿಸಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ. ವಿಶೇಷ ಏನೆಂದರೆ ಇಂದು ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ನಿಚ್ಚಿತಾರ್ಥ ಮಾಡಿಕೊಂಡ ದಿನವಾಗಿದೆ. ಇನ್ನು ಮೇಘನಾವರು ವಿಶ್ರಾಂತಿ ಪಡೆಯುತ್ತಿರುವ ಆಸ್ಪತ್ರೆಯ ವಾರ್ಡ್ ನಲ್ಲಿ ಚಿರಂಜೀವಿ ಸರ್ಜಾ ಅವರ ಫೋಟೋಗಳನ್ನ ಹಾಕಲಾಗಿದೆ.

ಅಭಿಮಾನಿಗಳು ಮಗುವಿಗೆ ಹಾಗೂ ಸರ್ಜಾ ಕುಟುಂಬದವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ. ಒಟ್ಟಿನಲ್ಲಿ ಚಿರು ಸರ್ಜಾ ಅವರನ್ನ ಕಳೆದುಕೊಂಡು ಒಂಟಿಯಾಗಿದ್ದ ಮೇಘನಾರವರ ಜೀವನದಲ್ಲಿ ಈಗ ಆಶಾಕಿರಣವೊಂದು ಮೂಡಿದ್ದು ಮಗು ತಾಯಿ ಆರೋಗ್ಯವಾಗಿರಲಿ ಎಂದು ನಾವು ಶುಭ ಆರೈಸೋಣ..