Advertisements

ಸುದ್ದಿ ಕೇಳಿ ಆಸ್ಪತ್ರೆಗೆ ಓಡೋಡಿ ಬಂದ ಹಿರಿಯ ನಟಿ..ಪುಟ್ಟ ಚಿರಂಜೀವಿ ಬರುತ್ತಿದ್ದಾನೆ ಎಂದ ನಟಿ ತಾರಾ..

Cinema

ವಿಧಿ ತುಂಬಾ ಕ್ರೂರ ಎಂಬುದಕ್ಕೆ ನಟ ಚಿರಂಜೀವಿ ಸರ್ಜಾ ಅವರ ಸಾವೇ ಸಾಕ್ಷಿ. ಹೌದು, ಉಸಿರಾಟದ ಸಮಸ್ಯೆಯಿಂದಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ನಟ ಚಿರಂಜೀವಿ ಸರ್ಜಾ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತವಾಗಿದ್ದು ತಮ್ಮ ಕುಟುಂಬ ವರ್ಗ ಹಾಗೂ ಲಕ್ಷಾಂತರ ಅಭಿಮಾನಿಗಳನ್ನ ಬಿಟ್ಟು ಅಗಲಿದ್ದಾರೆ.

Advertisements

ಇನ್ನು ಸ್ಯಾಂಡಲ್ವುಡ್ ನ ಖ್ಯಾತ ನಟ ನಟಿಯರು ಸೇರಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು, ಮಾಜಿ ಸಿಎಂ ಕುಮಾರಸ್ವಾಮಿಯವರು ಚಿರಂಜೀವಿ ಸರ್ಜಾರವರ ನಿಧಾನಕ್ಕೆ ಕಂಬನಿ ಮಿಡಿದ್ದಾರೆ. ಇನ್ನು ಮಾವ ಅರ್ಜುನ್ ಸರ್ಜಾರವರು ಫೇಸ್ಬುಕ್ ನಲ್ಲಿ ಕಪ್ಪು ಬಣ್ಣ ಹಾಕಿ ಅಳಿಯನ ಅಕಾಲಿಕ ಮೃತ್ಯವಿಗೆ ಕಂಬನಿ ಮಿಡಿದಿದ್ದಾರೆ.

ಇನ್ನು ಚಿರಂಜೀವಿ ಸರ್ಜಾರವರ ನಿಧನದ ಸುದ್ದಿ ಕೇಳಿ ಆಸ್ಪತ್ರೆಗೆ ಓಡೋಡಿ ಬಂದ ಹಿರಿಯ ನಟಿ ತಾರಾ ಅವರು ಕಣ್ಣೀರು ಹಾಕುತ್ತಲೇ ಚಿರು ಬಗ್ಗೆ ಮಾತನಾಡಿದ್ದಾರೆ. ಇದು ಫೇಕ್ ನ್ಯೂಸ್ ಆಗಿರಲಿ ಎಂದು ಆಸ್ಪತ್ರೆಗೆ ಬಂದೆ ಎಂದು ತಾರಾ ಅವರು ಹೇಳಿದ್ದಾರೆ.ಆದ್ರೆ ಆಸ್ಪತ್ರೆಗೆ ಬಂದು ನೋಡಿದ ಮೇಲೆಹಾರ್ಟ್ ಅಟ್ಯಾಕ್ ಆಗಿ ಸಾವನಪ್ಪಿರೋದು ಖಚಿತವಾಗಿದೆ. ಇನ್ನು ಇದೆ ವೇಳೆ ಚಿರಂಜೀವಿ ಸರ್ಜಾ ಅವರ ಪತ್ನಿ ನಟಿ ಮೇಘನಾ ರಾಜ್ ರವರು ತಾಯಿಯಾಗಿರುವ ವಿಚಾರ ತಿಳಿಸಿರುವ ಹಿರಿಯ ನಟಿ ತಾರಾ ಅವರು ಪುಟ್ಟ ಚಿರಂಜೀವಿ ಬರ್ತಿದ್ದಾನೆ ಎಂದು ಹೇಳಿದ್ದಾರೆ. ಎಂತಹ ವಿಪರ್ಯಾಸ ನೋಡಿ..ತನ್ನ ಕಂದನನ್ನ ನೋಡಲು ತಂದೆಯೇ ಇಲ್ಲವಾದಂತಾಗಿದೆ. ದೇವರು ಮೇಘನಾ ರಾಜ್ ಹಾಗೂ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ..