ನಂಬೋದಿಕ್ಕೇ ಆಗೋದಿಲ್ಲ..ಆದರೆ ನಂಬಲೇಬೇಕು. ಇದು ವಿಧಿಯಾಟ. ವಿಧಿಗೆ ಕರುಣೆಯೇ ಇಲ್ಲ ಅನ್ನಿಸುತ್ತೆ. ಇಡೀ ಸ್ಯಾಂಡಲ್ ವುಡ್ ಗೆ ಇದು ನಂಬಲಾರದ ಶಾಕಿಂಗ್ ಸುದ್ದಿ. ಹೌದು, ಸ್ಯಾಂಡಲ್ವುಡ್ ನ ಖ್ಯಾತ ನಟ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದಾರೆ. ಅಭಿಮಾನಿಗಳು ಅರಗಿಸಿಕೊಳ್ಳಲೇಬೇಕಾದ ನೋವಿನ ಸುದ್ದಿಯಿದು.

ನಟ ಚಿರಂಜೀವಿ ಸರ್ಜಾ ಅವರಿಗೆ ಶನಿವಾರ ರಾತ್ರಿ ತಲೆ ಸುತ್ತ ಬಂದ ಕಾರಣ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಇಂದು ಮಧ್ಯಾನ್ಹ ಮೂರೂ ಗಂಟೆಗೆ ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಕೇವಲ 39 ವರ್ಷದ ಚಿಕ್ಕ ವಯಸ್ಸಿನ ಚಿರಂಜೀವಿ ಸರ್ಜಾ ಅವರು ನಿಧನರಾಗಿದ್ದಾರೆ. ಇನ್ನು ಚಿರಂಜೀವಿ ಸರ್ಜಾರವರು ಹೃದಯಾಘತದಿಂದ ಇಹಲೋಕತ್ಯಜಿಸಿದ್ದಾರೆ ಎಂದೂ ಹೇಳಲಾಗಿದೆ.
ಕೇವಲ ಎರಡು ವರ್ಷಗಳ ಹಿಂದಷ್ಟೇ ನಟಿ ಮೇಘನಾ ರಾಜ್ ರವರನ್ನ ಮದುವೆಯಾಗಿದ್ದರು. ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಚಿರಂಜೀವಿ ಸರ್ಜಾರವರು ಸಿಂಗ, ವರದನಾಯಕ, ದಂಡಂ ದಶಗುಣಂ ಸೇರಿದಂತೆ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಸಹೋದರ ಧ್ರುವ ಸರ್ಜಾ, ಪತ್ನಿ ಮೇಘನಾ ರಾಜ್ ಸೇರಿದಂತೆ ಪ್ರಮೀಳಾ ಜೋಷಾಯ್ ಹಾಗೂ ನಟ ಸುಂದರ್ ರಾಜ್ ಇದ್ದಾರೆ ಎಂದು ಹೇಳಲಾಗಿದೆ. ಆ ದೇವರು ಅವರ ಕುಟುಂಬಕ್ಕೆ ದುಃಖವನ್ನ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ನಾವು ಪಪ್ರಾರ್ಥನೆ ಮಾಡೋಣ..