Advertisements

ಮೇಘನಾ ರಾಜ್ ರವರನ್ನ ಭೇಟಿ ಮಾಡಿ ಸಿದ್ದರಾಮಯ್ಯನವರ ಸೊಸೆ ಮತ್ತು ಪ್ರಥಮ್ ಹೇಳಿದ್ದೇನು ?

Cinema Uncategorized

ನಟ ಚಿರಂಜೀವಿ ಸರ್ಜಾ ಅವರ ಅಗಳಿಕೆಯನ್ನ ಅಭಿಮಾನಿಗಳೇ ಮರೆಯಲು ಆಗುತ್ತಿಲ್ಲ..ಇನ್ನು ಪತ್ನಿ ಮೇಘನಾರಾಜ್ ಹಾಗೂ ಅವರ ಕುಟುಂಬದವರ ಹೇಳಲೇಬೇಕಾಗಿಲ್ಲ..ಇಷ್ಟು ಬೇಗೆ ಮರೆಯುವ ನೋವಂತೂ ಅಲ್ಲ..ಆದರೆ ಇದು ಜೀವನ. ಬಿಟ್ಟು ಹೋದವರನ್ನ ಮರೆತು ಅವರ ನೆನಪಿನಲ್ಲಿ ಜೀವನ ಕಳೆಯುವ ಅಭ್ಯಾಸ ಮಾಡಿಕೊಳ್ಳಲೇಬೇಕಾಗಿದೆ. ಇನ್ನು ಇದೆ ಸಮಯದಲ್ಲಿ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಸೊಸೆ ಸ್ಮಿತಾ ಅವರು ಮೇಘನಾ ಅವರನ್ನ ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ.

Advertisements

ಇದುವರೆಗೂ ಯಾವುದೇ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದ್ದ ಸಿದ್ದರಾಮಯ್ಯನವರ ಸೊಸೆ ಸ್ಮಿತಾ ಹಾಗೂ ಪ್ರಥಮ್ ಜಯನಗರದಲ್ಲಿರುವ ಮೇಘನಾ ರಾಜ್ ಅವರ ತವರು ಮನೆಗೆ ಭೇಟಿ ಕೊಟ್ಟಿದ್ದು ಸಾಂತ್ವನದ ಮಾತುಗಳನ್ನ ಹೇಳಿದ್ದಾರೆ. ರಾಕೇಶ್ ಸಿದ್ದರಾಮಯ್ಯನವರ ಪತ್ನಿಯಾಗಿರುವ ಸ್ಮಿತಾ ಅವರು ಮೇಘನಾ ಅವರಿಗೆ ಪರಿಚಯವೇ ಇಲ್ಲ. ಆದರೂ ಮಾನವೀಯತೆಯ ದೃಷ್ಟಿಯಿಂದ ಮೇಘನಾರವರನ್ನ ಭೇಟಿ ಮಾಡಿದ್ದಾರೆ. ಇನ್ನು ಸ್ಮಿತಾ ಅವರು ಮೇಘನಾ ತಂದೆ ನಟ ಸುಂದರ್ ರಾಜ್ ಜೊತೆ ಸ್ವಲ್ಪ ಸಮಯ ಮಾತನಾಡಿ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.

ಇನ್ನು ಪ್ರಥಮ್ ಕೂಡ ಸುಂದರ್ ರಾಜ್ ಫ್ಯಾಮಿಲಿ ಸೇರಿದಂತೆ ಸರ್ಜಾ ಹಾಗೂ ಸಿದ್ದರಾಮಯ್ಯನವರ ಜೊತೆ ಪರಿಚಿತರೇ ಆಗಿದ್ದಾರೆ. ಹಾಗಾಗಿ ಮೇಘನಾ ಅವರನ್ನ ಭೇಟಿ ಮಾಡಿ ಧೈರ್ಯ ತುಂಬುವ ಮಾತುಗಳನ್ನ ಹೇಳಿದ್ದಾರೆ. ಇನ್ನುಮೇಘನಾ ರಾಜ್ ಗರ್ಭಿಣಿಯಾಗಿರುವ ಈ ಸಂಧರ್ಭದಲ್ಲಿ ಧೈರ್ಯ ತುಂಬಿ ಸಾಂತ್ವನದ ಮಾತುಗಳನ್ನ ಹೇಳುವ ಅವಶ್ಯಕತೆ ಇದೆ. ಇನ್ನು ಕೆಲವು ದಿನಗಳಲ್ಲಿ ಪುಟ್ಟ ಚಿರಂಜೀವಿ ಸರ್ಜಾ ಜನಿಸಿ, ಮೇಘನಾವರ ನೋವು ಕಡಿಮೆ ಆಗಿ ಒಂದಿಷ್ಟು ಸಂತೋಷವಾದರೂ ಸಿಗಲಿ.