ಸ್ಯಾಂಡಲ್ವುಡ್ ನ ಯುವನಟ ಚಿರಂಜೀವಿ ಸರ್ಜಾ ಅವರಿಗೆ ಉಸಿರಾಟದ ತೊಂದರೆಯಿಂದ ಹೃದಯಾಘಾತವಾಗಿದ್ದು ಚಿರ ನಿದ್ರೆಗೆ ಜಾರಿದ್ದಾರೆ. ನಿಜಕ್ಕೂ ಇದು ಸ್ಯಾಂಡಲ್ವುಡ್ ಗೆ ಬಿಗ್ ಶಾಕ್ ..ಇದು ಸುಳ್ಳು ಸುದ್ದಿಯಾಗಿರಲಿ ಎಂದುಕೊಂಡವರೇ ಹೆಚ್ಚು. ಆದರೆ ವಿಧಿ ಕ್ರೂರ. ಇನ್ನು ಚಿರಂಜೀವಿ ಸರ್ಜಾರವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಆಸ್ಪತ್ರೆಗೆ ಹೋಗುವುದಕ್ಕೆ ಮುಂಚೆ ನಟ ಚಿರು ಮನೆಯಲ್ಲೇ ಬಿದ್ದು ಒದ್ದಾಡಿದ್ದರು ಎಂದು ಹೇಳಲಾಗಿದೆ.

ಮನೆಯಲ್ಲಿದ್ದಾಗ ಸುಮಾರು ಒಂದು ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪ್ರೇರಣಾರವರು ತಮ್ಮ ಪತಿ ಧ್ರುವ ಸರ್ಜಾರವರಿಗೆ ಈ ವಿಷಯ ತಿಳಿಸಿದ್ದು, ತಕ್ಷಣವೇ ಧ್ರುವ ಸರ್ಜಾ ತನ್ನ ಅಣ್ಣನನ್ನ ತಮ್ಮ ಕಾರಿನಲ್ಲೇ ಜಯನಗರದ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಆಸ್ಪತ್ರೆ ತಲುಪಿದಾಗ ಸಮಯ 2.30 ಆಗಿದ್ದು, ಆ ಸಮಯದಲ್ಲಿ ಚಿರಂಜೀವಿ ಸರ್ಜಾ ಅವರಿಗೆ ಪುಲ್ಸ್ ರೇಟ್ ತುಂಬಾ ಕಡಿಮೆ ಇತ್ತು ಎಂದು ಹೇಳಲಾಗಿದೆ.
ತಕ್ಷಣವೇ ಅವರನ್ನ ಎಮೆರ್ಜೆನ್ಸಿ ವಾರ್ಡ್ ಗೆ ಶಿಫ್ಟ್ ಮಾಡಲಾಗಿದ್ದು, ಅತ್ಯಾಧುನಿಕ ತಂತ್ರಜ್ನ್ಯಾನದ ಚಿಕಿತ್ಸೆಯನ್ನ ಡಾಕ್ಟರ್ ಗಳು ನೀಡಿದ್ದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ನಟ ಚಿರಂಜೀವಿ ಸರ್ಜಾ ಸ್ವರ್ಗಸ್ಥರಾಗಿದ್ದಾರೆ. ಇನ್ನು ಈ ವಿಷಯ ತಿಳಿದು ಆಸ್ಪತ್ರೆಗೆ ಓಡೋಡಿ ಬಂದ ಹಿರಿಯ ನಟಿ ತಾರಾ ಚಿರು ಆಸ್ಪತ್ರೆಗೆ ಬಾರೋ ಮುಂಚೆಯೇ ಪಲ್ಸ್ ರೇಟ್ ತುಂಬಾ ಕಡಿಮೆಯಾಗಿದ್ದು, ಆಸ್ಪತ್ರೆಗೆ ಬಂದ ಬಳಿಕವೂ ಕೂಡ ಎರಡು ಬರಿ ಪಲ್ಸ್ ತುಂಬಾ ಕಡಿಮೆಯಾಗಿತ್ತು. ಬಳಿಕ ಸತತವಾಗಿ ನಾಲ್ಕನೇ ಬಾರಿಗೆ ಚಿರುಗೆ ಪಲ್ಸ್ ರೇಟ್ ಕಡಿಮೆಯಾದಾಗ ಹಾರ್ಟ್ ಅಟ್ಯಾಕ್ ಆಗಿರುವುದಾಗಿ ಡಾಕ್ಟರ್ ಗಳು ಹೇಳಿದರು ಎಂದು ನಟಿ ತಾರಾ ಅವರು ಹೇಳಿದ್ದಾರೆ.