ಸ್ಯಾಂಡಲ್ವುಡ್ ಯುಂಗ್ ಎನರ್ಜಿಟಿಕ್ ಸ್ಮಾರ್ಟ್ ಹೀರೋ ಆಗಿದ್ದ ಚಿರಂಜೀವಿ ಸರ್ಜಾ ಇನ್ನು ನೆನಪು ಮಾತ್ರ. ಮಣ್ಣಲ್ಲಿ ಮಣ್ಣಾಗಿ ಮರೆಯಾಗಿ ಹೋಗಿದ್ದಾರೆ. ತನ್ನ ಪ್ರೀತಿಯ ಪತ್ನಿ, ಸಹೋದರ ಸೇರಿದಂತೆ ಸ್ನೇಹಿತರನ್ನ ಬಿಟ್ಟು ಮರೆಯಾಗಿ ಹೋಗಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿದ್ದ ಚಿರು ಸರ್ಜಾ ಅವರು, ಮಾಡಿದ್ದ ಪೋಸ್ಟ್ ಒಂದು ಈಗ ತುಂಬಾ ವೈರಲ್ ಆಗಿದೆ.

ಹೌದು, ಚಿರು ಸರ್ಜಾ ಅವರು ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾನೇ ಆಕ್ಟಿವ್ ಆಗಿದ್ದರು. ಇನ್ನು ವರ್ಷದ ಹಿಂದಷ್ಟೇ ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ಪೋಸ್ಟ್ ಒಂದನ್ನ ಮಾಡಿದ್ದು, ಅದಕ್ಕೆ ಚಿರು ಪ್ರತಿಕ್ರಿಯೆ ನೀಡಿದ್ದರು. ಈಗ ಅದು ವೈರಲ್ ಆಗಿದೆ. ಸ್ನೇಹಿತರೆ ಒಂದು ವರ್ಷದ ಹಿಂದಷ್ಟೇ ನಟಿ ರಾಧಿಕಾ ಪಂಡಿತ್ ಅವರು ತನ್ನ ಮಗಳು ಐರಾಳ ಫೋಟೋವೊಂದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇನ್ನು ಐರಾ ಹುಟ್ಟಿದ ದಿನ ಅಮ್ಮನಾಗಿ ನಾನು ಹುಟ್ಟಿದೆ ಎಂದು ಆ ಪೋಸ್ಟ್ ಗೆ ಟ್ಯಾಗ್ ಲೈನ್ ನ್ನ ಬರೆದಿದ್ದರು.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿ ಕಾಮೆಂಟ್ ಮಾಡಿದ್ದ ಚಿರು ಸರ್ಜಾ, ಸತ್ಯ ಇದನ್ನ ಹೇಗೆ ವಿವರಿಸಬೇಕು ಎಂದು ಗೊತ್ತಾಗುತ್ತಿಲ್ಲ..ಆದರೆ ನಿಮ್ಮ ಹಾಗೂ ಯಶ್ ಬಗ್ಗೆ ನನಗೆ ತುಂಬಾ ಖುಷಿಯಾಗುತ್ತದೆ ಎಂದು ಚಿರು ತಮ್ಮ ಸಂತಸವನ್ನ ವ್ಯಕ್ತಪಡಿಸಿದ್ದರು. ಮತ್ತೆ ಚಿರು ಅವರ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿದ ರಾಧಿಕಾ ಪಂಡಿತ್, ಥ್ಯಾಂಕ್ ಯೂ ಚಿರು..ಮುಂದೆ ನಿಮ್ಮಿಬ್ಬಳ ಸರದಿ ಇದೆ ಎಂದು ಕಾಮೆಂಟ್ ಮಾಡಿದ್ದರು. ಇನ್ನು ಅಂದು ಮಾಡಿದ್ದ ಕಾಮೆಂಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ವಿಧಿ ತುಂಬಾ ಕ್ರೂರ..ತನ್ನ ಮಗು ಭೂಮಿಗೆ ಬರುವ ಮೊದಲೇ, ತಾನೇ ಭೂಮಿಯಿಂದ ಮರೆಯಾಗಿದ್ದಾರೆ ಚಿರಂಜೀವಿ ಸರ್ಜಾ..