ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ನಲ್ಲಿ ಕಳೆದ ಸೀಸನ್ ಏಳರಲ್ಲಿ ಹೆಸರು ಮಾಡಿದ್ದ ನಟಿ, ನಿರ್ದೇಶಕಿ, ಬರಹಗಾರ್ತಿ ಚೈತ್ರ ಕೊಟ್ಟೂರು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಹೌದು. ಬಿಗ್ ಬಾಸ್ ಕನ್ನಡ ಸೀಸನ್ 7 ಒಂದು ರೀತಿ ವಿಶೇಷ ಅನಿಸಿತ್ತು. ರವಿ ಬೆಳೆಗೆರೆ ಅವರು ಶೈನ್ ಶೆಟ್ಟಿ, ಚೈತ್ರಾ ಕೊಟ್ಟೂರು, ದೀಪಿಕಾ ದಾಸ್, ಕುರಿ ಪ್ರತಾಪ್ ಈಗೆ ಸಾಕಷ್ಟು ಮಂದಿ ಇನ್ನೂ ಸಹ ಪ್ರೇಕ್ಷಕರ ನೆನಪಿನಲ್ಲಿ ಉಳಿದಿದ್ದಾರೆ.. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಒಂದು ಬಾರಿಯಲ್ಲಿ ಎರಡೆರಡು ಬಾರಿ ಮನೆಗೆ ಹೋಗಲು ಅವಕಾಶ ಪಡೆದಿದ್ದ ಚೈತ್ರಾ ಕೊಟ್ಟೂರು ಅವರು.. ತಮ್ಮ ವಿಶೇಷವಾದ ಮಾತಿನ ಶೈಲಿಯ ಮೂಲಕ ಎಲ್ಲರ ಗಮನ ಸೆಳೆದಿದ್ದು.. ಕೊಂಚ ಟ್ರೋಲ್ ಕೂಡ ಆಗಿದ್ದರು.

ಸಧ್ಯ ಇದೀಗ ತಾವು ಪ್ರೀತಿಸಿದ ಹುಡುಗನ ಜೊತೆ ಚೈತ್ರಾ ಕೊಟ್ಟೂರು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಇಂದು ಬೆಂಗಳೂರಿನ ದೇವಸ್ಥಾನ ಒಂದರಲ್ಲಿ ಅತ್ಯಂತ ಸರಳವಾಗಿ ನಾಗಾರ್ಜುನ್ ಎಂಬುವವರ ಜೊತೆ ನೂತನ ಜೀವನ ಆರಂಭಿಸಿದ್ದಾರೆ. ಕೆಲವೇ ಕೆಲ ಸ್ನೇಹಿತರ ಸಮ್ಮುಖದಲ್ಲಿ ಮದುವೆ ನಡೆದಿದ್ದು ಎಲ್ಲರೂ ಶುಭಾಶಯ ತಿಳಸಿದ್ದಾರೆ.. ಇನ್ನೂ ನಾಗಾರ್ಜುನ ಸಹ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನಾಗಾರ್ಜುನ್ ಹಾಗೂ ಚೈತ್ರಾ ಕೊಟ್ಟೂರು ಅವರು ಕಳೆದ ಕೆಲವು ವರ್ಷಗಳಿಂದ ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು ತಮ್ಮ ಪ್ರೀತಿಯ ವಿಚಾರವನ್ನು ರಿವೀಲ್ ಮಾಡಿದ್ದರು.. ಸದ್ಯ ಇಂದು ಯಾರಿಗೂ ತಿಳಿಸದಂತೆ, ಯಾವ ಆಡಂಬರವು ಇಲ್ಲದಂತೆ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ತಾನು ಪ್ರೀತಿಸಿದ ಹುಡುಗನ ಹುಟ್ಟುಹಬ್ಬ ಆಚರಿಸಿದ ಚೈತ್ರಾ ಕೊಟ್ಟೂರು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನ ಹಂಚಿಕೊಂಡಿದ್ದರು..