Advertisements

ಸಿನಿಮಾದಲ್ಲಿ ನಟ ನಟಿಯರು ಹಾಕಿಕೊಳ್ಳುವ ಬಟ್ಟೆಗಳನ್ನು ಸಿನಿಮಾ ಶೂಟಿಂಗ್ ಮುಗಿದ ಮೇಲೆ ಏನು ಮಾಡ್ತಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಚಿತ್ರರಂಗ ಈಗ ಉದ್ಯಮವಾಗಿ ಮಾರ್ಪಟ್ಟಿದೆ.. ಆದರೆ ಅದರಲ್ಲಿ ಮುಖ್ಯವಾಗಿ ಸಾಮಾನ್ಯ ಜನರಿಗೆ ಕಾಡುವ ಪ್ರಶ್ನೆ ಅಂದರೆ.. ಸಿನಿಮಾದಲ್ಲಿ ಹೀರೋ ಮತ್ತು ಹೀರೋಯಿನ್ ಹಾಕಿಕೊಳ್ಳುವ ಬಟ್ಟೆಗಳನ್ನು ಸಿನಿಮಾ ಶೂಟಿಂಗ್ ಮುಗಿದ ತಕ್ಷಣ ಏನ್ ಮಾಡ್ತಾರೆ ಅನ್ನೋದು.. ಒಂದು ಸಿನಿಮಾದಲ್ಲಿ ನಟ ನಟಿಯರ ಬಟ್ಟೆಗಳಿಗೆ ಸುಮಾರು 15 ರಿಂದ 35 ಲಕ್ಷದವರೆಗೂ ಖರ್ಚಾಗುತ್ತದೆ. ಅವರು ಧರಿಸುವ ಬಟ್ಟೆ ಎಲ್ಲಾ ಬ್ರಾಂಡೆಡ್ ಆಗಿರುತ್ತದೆ.. ಸ್ಟಾರ್ ಹೀರೋ ಒಬ್ಬ ಹೀರೋಯಿನ್ ಆದ್ರೆ ಒಬ್ಬರ ಬಟ್ಟೆಗೆ ಏನಿಲ್ಲಾ ಅಂದರು 20 ಲಕ್ಷದವರೆಗೂ ಖರ್ಚಾಗುತ್ತದೆ. ಆದರೆ ಸಿನಿಮಾ ಶೂಟಿಂಗ್ ಮುಗಿದ ಮೇಲೆ ಇಷ್ಟು ದುಭಾರಿ ಬಟ್ಟೆಗಳನ್ನು ಏನ್ ಮಾಡ್ತಾರೆ ನಿರ್ಮಾಪಕರು ಅನ್ನೋದು ಎಲ್ಲರಿಗೂ ಕಾಡುವ ಪ್ರಶ್ನೆ..

[widget id=”custom_html-3″]

Advertisements

ಕೆಲವು ನಿರ್ಮಾಪಕರು ಈ ಬಟ್ಟೆಗಳನ್ನು ಗೋಡನ್ ನಲ್ಲಿ ಇಡುತ್ತಾರೆ. ಇನ್ನೂ ಕೆಲವರಂತೂ ಸೆಕೆಂಡ್ಸ್ ನಲ್ಲಿ ಮಾರಾಟ ಮಾಡುತ್ತಾರೆ.. ಕೆಲವೊಮ್ಮೆ 10 ಲಕ್ಷದ ಬಟ್ಟೆ ಕೇವಲ 1 ಲಕ್ಷಕ್ಕೆ ಮಾರಾಟವಾಗುತ್ತದೆ. ಕೆಲವರು ಈ ಬಟ್ಟೆಗಳನ್ನು ನಿರ್ಮಾಪಕರಿಂದ ಖರೀದಿ ಮಾಡಿ ಸಹ ನಟ ನಟಿಯರಿಗೆ ಹಾಗು ಕಾರ್ಯಕ್ರಮಗಳಿಗೆ ಬಾಡಿಗೆಗೆ ಕೊಡುತ್ತಾರೆ .. ಸಿನಿಮಾದಲ್ಲಿ ಬಳಸಿರುವ ಬಟ್ಟೆಗಳನ್ನ ಮಾರಾಟ ಮಾಡುವುದಕ್ಕಾಗಿಯೇ ಮುಂಬೈನಲ್ಲಿ ಒಂದು ಮಾರ್ಕೇಟ್ ಇದೆ.. ನಿರ್ಮಾಪಕರು ಅಲ್ಲಿಗೆ ಹೋಗಿ ಸಿನಿಮಾದಲ್ಲಿ ಬಳಸಿದ ಬಟ್ಟೆ ಮಾರಾಟ ಮಾಡುತ್ತಾರೆ.. ಮತ್ತೆ ಮತ್ತೆ ಸಿನಿಮಾ ತೆಗೆಯುವ ನಿರ್ಮಾಪಕರು ಮಾತ್ರ ಬಟ್ಟೆಗಳನ್ನು ಗೋಡನ್ ಇಟ್ಟು ಕ್ಯಾರೆಕ್ಟರ್ ಆರ್ಟಿಸ್ಟ್ ಗೆ ಈ ಬಟ್ಟೆಗಳನ್ನು ಬಳಸುತ್ತಾರೆ..

[widget id=”custom_html-3″]

ಕೆಲವೊಮ್ಮೆ ಸಿನಿಮಾ ಶೂಟಿಂಗ್ ವೇಳೆ ನಟ ನಟಿಯರಿಗೆ ಇಷ್ಟವಾದ ಬಟ್ಟೆ ಮತ್ತು ಶೂಗಳನ್ನು ಅವರೇ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇದು ಎಲ್ಲಾ ಸ್ಟಾರ್ಸ್ ಮಾಡೋದಿಲ್ಲಾ.. ಇದು ಸಿನಿಮಾ ಬಟ್ಟೆಗಳ ವಿಚಾರ. ಇನ್ನೂ ಸೀರಯಲ್ ಬಟ್ಟೆಗಳ ಬಗ್ಗೆ ನೋಡೊಣ.. ಸೀರಿಯಲ್ ಗಳಲ್ಲಿ ಅವರಿಗೆ ಅವರೇ ಬಟ್ಟೆಗಳನ್ನು ತರಬೇಕಾಗುತ್ತದೆ.. ನಿರ್ಮಾಪಕರು ಬಟ್ಟೆ ಖರೀದಿ ಮಾಡೋದಿಲ್ಲಾ. ನಾಳೆ ಯಾವ ರೀತಿ ಬಟ್ಟೆ ಹಾಕಿಕೊಂಡು ಬರಬೇಕು ಎಂದು ನಿರ್ದೇಶಕರು ಹೇಳುತ್ತಾರೆ.. ಅದರ ಪ್ರಕಾರ ನಟ ನಟಿಯರು ಬಟ್ಟೆ ಧರಿಸಿ ಬರುತ್ತಾರೆ. ಹಾಗಾಗಿ ಸೀರಿಯಲ್ ಗಳಲ್ಲಿ ಬಟ್ಟೆ ವ್ಯವಹಾರ ಅಷ್ಟಾಗಿ ಇರುವುದಿಲ್ಲ..