Advertisements

ಸಿಎಂ ಯಡಿಯೂರಪ್ಪ ಮತ್ತು ಕೆಂದ್ರ ಗೃಹಮಂತ್ರಿಗೂ ಕರೋನ ಪಾಸಿಟಿವ್, ರಾಹುಲ್ ಗಾಂಧಿ ಟ್ವೀಟ್ ಮಾಡಿ ಏನು ಏಳಿದ್ದಾರೆ ಗೊತ್ತಾ?

News

ಸಿಎಂ ಯಡಿಯೂರಪ್ಪನವರಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಕುದ್ದಾಗಿ ಸಿಎಂ ಯಡಿಯೂರಪ್ಪನವರು ಕೊವಿಡ್ ಪಾಸಿಟಿವ್ ಬಂದಿರುವ ವಿಚಾರವನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ.

Advertisements

ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ ಎಂದು ಸಿಎಂ ಯಡಿಯೂರಪ್ಪ ಅವರು ಟ್ವೀಟ್ ಮಾಡಿ ಸ್ವಷ್ಟನೆ ನಿಡಿದ್ದಾರೆ. ಅಲ್ಲದೇ ಈಗ ಚಿಕಿತ್ಸೆ ಪಡೆಯಲು ಎಚ್ ಎ ಎಲ್ ಮಣಿಪಾಲ್ ಆಸ್ವತ್ರೆಗೆ ದಾಖಲಾಗಿದ್ದಾರೆ‌.

ಇನ್ನೂ ಕೆಂದ್ರ ಗೃಹಮಂತ್ರಿ ಅಮಿತ್ ಷಾ ಅವರಿಗೂ ಸಹ ಕೋವಿಡ್ ಬಂದಿರುವ ವಿಚಾರವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಕೋವಿಡ್ ಆರಂಬಿಕ ರೋಗಲಕ್ಷಣಗಳು ಕಾಣಿಸಿಕೊಂಡ ನಂತರ, ನಾನು ಕೊವಿಡ್ ಟೆಸ್ಟ್ ಮಾಡಿಸಿದ್ದೇನೆ ನಂತರ ನನಗೆ ಪಾಸಿಟಿವ್ ಕಂಡು ಬಂದಿದೆ. ನನ್ನ ಆರೋಗ್ಯ ಚೆನ್ನಾಗಿದೆ, ಆದರೆ ನಾನು ವೈದ್ಯರ ಸಲಹೆ ಮೇರೆಗೆ ಆಸ್ವತ್ರೆಗೆ ದಾಖಲಾಗುತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ಐಸೋಲೇಶನ್ ಆಗುವಂತೆ ಟ್ಟಿಟ್ ನಲ್ಲಿ ತಿಳಿಸಿದ್ದಾರೆ. ಹಾಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೇಗ ಗುಣಮುಖರಾಗಲಿ ಎಂದು ಆರಿಸುತ್ತೇನೆ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.

‌ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶೀಘ್ರವೇ ಸಂಪೂರ್ಣ ಗುಣಮುಖರಾಗಿ ಬನ್ನಿ ದೇವರ ಆಶೀರ್ವಾದ ನಿಮ್ಮ ಮೇಲೆ ಇದೆ ಅನೇಕ ಬಡವರ ಸೇವೆಯನ್ನು ಮಾಡಿದ್ದೀರಿ ಈ ನಾಡಿನ ಚುಕ್ಕಾಣಿಯನ್ನು ಹಿಡಿದು ಸರ್ವ ಜನರ ಸೇವೆಯನ್ನು ಮಾಡಿದ್ದೀರಿ ಇವುಗಳೆಲ್ಲ ಹಿನ್ನೆಲೆಯಲ್ಲಿ ದೇವರು ನಿಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬ ವಿಶ್ವಾಸದೊಂದಿಗೆ ಪರಮಾತ್ಮನಲ್ಲಿ ಬೇಡಿಕೊಳ್ಳುತ್ತೇವೆ ಎಂದು ಜನರು ಆಶಿಸುತ್ತಿದ್ದಾರೆ.