Advertisements

ರೈತ ಮಹಿಳೆಗೆ ರಾಸ್ಕಲ್ ಎಂದ ಸಚಿವ ಮಾಧುಸ್ವಾಮಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಹೇಳಿದ್ದೇನು ಗೊತ್ತಾ?

News

ಮೊನ್ನೆ ತಾನೇ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವರೂ ಆಗಿರುವ ಮಾಧುಸ್ವಾಮಿರವರು ಕೋಲಾರದ ರೈತ ಮಹಿಳೆಯೊಬ್ಬರಿಗೆ ರಾಸ್ಕಲ್ ಎಂದು ಬೈದು ವಿವಾದ ಮಾಡಿಕೊಂಡಿದ್ದು, ವಿರೋಧ ಪಕ್ಷಗಳು ಸೇರಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಸಚಿವರ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಈಗ ಇದಕ್ಕೆ ಸಂಬಂಧಪಟ್ಟಂತೆ ಸಿಎಂ ಯಡಿಯೂರಪ್ಪನವರು ಪ್ರತಿಕ್ರಿಯೆ ನೀಡಿದ್ದಾರೆ.

Advertisements

ಹೌದು, ಸಚಿವ ಮಾಧುಸ್ವಾಮಿರವರು ಬುಧವಾರದಂದು ಕೋಲಾರದ ತಾಲೂಕಿಗೆ ಸೇರಿದ ಎಸ್ ಅಗ್ರಹಾರದಲ್ಲಿ ಕೆರೆ ವೀಕ್ಷಣೆ ಮಾಡಲೆಂದು ಹೋಗಿದ್ದರು. ಇದೇ ವೇಳೆ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿರುವ ನಳಿನಿ ಕೆರೆ ಒತ್ತುವರಿ ಮಾಡಿಕೊಂಡವರಿಗೆ ಪಹಣಿ ನೀಡಲಾಗಿದ್ದು, ಇದರ ಬಗ್ಗೆ ಸರ್ಕಾರ ಸರಿಯಾದ ಗಮನ ಹರಿಸುತ್ತಿಲ್ಲ. ಇದಕ್ಕೆ ಯಾರು ಹೊಣೆ. ಹೀಗಾಗಿ ಕೆರೆ ಒತ್ತುವರಿಗೆ ಸಂಬಂಧಪಟ್ಟಂತೆ ಸರ್ಕಾರ ಮುಂದೆ ಬರಬೇಕು. ಸಮಸ್ಯೆ ಬಗೆಹರಿಸಿಕೊಡಿ ಎಂದು ಸಚಿವರಲ್ಲಿ ಮನವಿ ಮಾಡಿದ್ದಾರೆ. ಆದರೆ ರೈತ ಮಹಿಳೆಯ ಮನವಿಗೆ ಕೋಪಗೊಂಡ ಸಚಿವ ಮಾಧುಸ್ವಾಮಿರವರು ನಾನು ತುಂಬಾ ಕೆಟ್ಟ ಮನುಷ್ಯ ಇದ್ದೀನಿ, ಬಾಯಿ ಮುಚ್ಚು ರಾಸ್ಕಲ್ ಎಂದು ರೈತ ಮಹಿಳೆಗೆ ಬೈದಿದ್ದಾರೆ. ಆಗ ಆ ರೈತ ಮಹಿಳೆ ನೀವೇಕೆ ಈ ರೀತಿ ಮಾತನಾಡುತ್ತಿದ್ದಿರಿ ಎಂದು ಕೇಳಿದ್ದಾರೆ. ಆಗ ಅಲ್ಲೇ ಇದ್ದ ಆರಕ್ಷಕರು ಅವರನ್ನ ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ.

ಈಗ ಸಚಿವರ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪನವರು ಸಚಿರಾಗಿರುವವರು ಮಹಿಳೆಯರ ಜೊತೆ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಸಚಿವರು ರೈತ ಮಹಿಳೆ ಜೊತೆ ನಡೆದುಕಿಒಂದ ರೀತಿಯನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನು ಮುಂದೆ ಈ ರೀತಿ ಆಗದಂತೆ ನಾನು ಅಗತ್ಯವಾದ ಕ್ರಮ ಕೈಗೊಳ್ಳುವೆ ಎಂದು ಸಿಎಂ ಹೇಳಿದ್ದಾರೆ. ಇನ್ನು ಈ ವಿವಾದಕ್ಕೆ ಸಂಬಂಧಪಟ್ಟಂತೆ ಮಾಧುಸ್ವಾಮಿರಾವರಿಗೆ ವಾರ್ನ್ ಮಾಡಿದ್ದೇನೆ ಎಂದು ಯಡಿಯೂರಪ್ಪನವರು ಹೇಳಿದ್ದಾರೆ.