Advertisements

ಅಣ್ಣ ರಾಜ್ಯಕ್ಕೆ ಸಿಎಂ ಆಗಿದ್ರೂ ತಂಗಿ ಮಾತ್ರ ಇನ್ನೂ ಟೀ ಅಂಗಡಿ ಇಟ್ಕೊಂಡು ಜೀವನ ಮಾಡ್ತಿದ್ದಾರೆ !

Kannada Mahiti

ಸ್ನೇಹಿತರೇ, ಈಗಿನ ರಾಜಕಾರಣಿಗಳಿಗೆ ಒಂದು ಬಾರಿ ಅಧಿಕಾರ ಸಿಕ್ಕರೆ ಸಾಕು ತನ್ನ ಮಕ್ಕಳು, ಮೊಮ್ಮಕ್ಕಳು, ಮುಮ್ಮೊಕ್ಕಳು ಕೂತು ತಿನ್ನುವಷ್ಟು ಹಣ, ಆಸ್ತಿಯನ್ನ ಮಾಡಿಡುತ್ತಾರೆ. ಆದರೆ ತಮಗೆ ಸಿಕ್ಕ ಅಧಿಕಾರವನ್ನ ಉಪಯೋಗಿಸಿಕೊಂಡು ಜನರ ಸೇವೆ ಮಾಡುವುದು ಕೇವಲ ಬೆರಳಿಕೆಯಷ್ಟು ರಾಜಕಾರಣಿಗಳು ಮಾತ್ರ. ಇಂತಹ ಬೆರಳಿಕೆಯಷ್ಟು ರಾಜಕಾರಣಿಗಳಲ್ಲಿ ಉತ್ತರಪ್ರದೇಶದ ಮುಖಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಕೂಡ ಒಬ್ಬರು. ಇನ್ನು ಇವರ ಪೂರ್ವಾಶ್ರಮದ ಹೆಸರು ಅಜಯ್ ಮೋಹನ್ ಎಂದು. ತಮ್ಮ ಚಿಕ್ಕವಯಸ್ಸಿನಲ್ಲೇ ಸಂಬಂಧಗಳನ್ನ ತ್ಯಜಿಸಿ ಸನ್ಯಾಸಿಯಾದವರು. ಇನ್ನು ಆದಿತ್ಯನಾಥ್ ರವರ ಪೂರ್ವಾಶ್ರಮದ ಸಂಬಂಧಿಕರ ಬಗ್ಗೆ ಹೇಳಬೇಕಾದರೆ..

Advertisements

ಯೋಗಿ ಆದಿತ್ಯನಾಥ್ ರವರಿಗೆ ಮೂರು ಜನ ಸೋದರಿಯರು ಹಾಗೂ ಸಹೋದರರು ಇದ್ದಾರೆ. ಸಹೋದರರಲ್ಲಿ ಭಾರತೀಯ ಸೇನೆಯಲ್ಲಿ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದು ಚೀನಾದ ಗಡಿಯಲ್ಲಿ ಕರ್ತವ್ಯದಲ್ಲಿದ್ದಾರೆ. ಇನ್ನುಳಿದ ಸಹೋದರ ಸಹೋದರಿಯರು ತಮ್ಮ ಜೀವನಕ್ಕಾಗಿ ಚಿಕ್ಕ ಪುಟ್ಟ ಕೆಲಸಗಳನ್ನ ಮಾಡುತ್ತಿದ್ದು ಸಾಮಾನ್ಯರಂತಯೇ ಜೀವನ ಸಾಗಿಸುತ್ತಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ರ ಸಹೋದರಿಯರಲ್ಲಿ ಒಬ್ಬರಾದ ಶಶಿ ದೇವಿ ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ಟೀ ಅಂಗಡಿ ನಡೆಸುತ್ತಿದ್ದು ಅದರಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಬರೋಬ್ಬರಿ ೨೫ ವರ್ಷದಿಂದ ತನ್ನ ಅಣ್ಣನಾದ ಯೋಗಿ ಆದಿತ್ಯನಾಥ್ ರಿಗೆ ರಾಕಿ ಕಟ್ಟಲು ಕಾಯುತ್ತಿದ್ದಾರೆ ಈ ತಂಗಿ.

ಇನ್ನು ಯೋಗಿ ಆದಿತ್ಯ ನಾಥ್ ಮುಖ್ಯಮಂತ್ರಿಯಾಗಿದ್ದರೂ ಸಹ ಅವರ ಕುಟುಂಬದವರು ಮೊದಲಿನಂತಯೇ ಜೀವನ ಮಾಡುತ್ತಿದ್ದಾರೆ. ಅವರಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ನಿಮ್ಮ ಅಣ್ಣ ಒಂದು ರಾಜ್ಯಕ್ಕೆ ಸಿಎಂ ಆಗಿದ್ದಾರೆ. ಆದರೆ ಅವರು ನಿಮ್ಮ ಕುಟುಂಬಕ್ಕೆ ಯಾವುದೇ ಸಹಾಯ ಮಾಡುತ್ತಿಲ್ಲವಾ ಎಂದು ಸಹೋದರಿ ಶಶಿ ದೇವಿಯರನ್ನ ಕೇಳಿದ್ರೆ ಅವರು ಹೇಳಿದ್ದೇನು ಗೊತ್ತಾ ? ನನ್ನ ಅಣ್ಣ ಜನರ ಸೇವೆಗೋಸ್ಕರ ಮನೆ ಬಿಟ್ಟು ಹೋದವರು. ಅವರಿಂದ ನಾನಾಗಲಿ ನಮ್ಮ ಕುಟುಂಬವಾಗಲಿ ಏನನ್ನು ಆಶಿಸುತ್ತಿಲ್ಲ. ಸಿಎಂ ಆಗಿ ನಮ್ಮ ಸಹೋದರ ಮಾಡುವ ಜನಪರ ಕೆಲಸಗಳನ್ನ ನೋಡಿ ನಮ್ಮ ಕುಟುಂಬಕ್ಕೆ ತುಂಬಾ ಸಂತೋಷ ಆಗುತ್ತದೆ. ನಮಗೆ ಅಷ್ಟೇ ಸಾಕು. ನಮ್ಮಿಂದ ಅವರಿಗೆ ಯಾವುದೇ ಕೆಟ್ಟ ಹೆಸರು ಬರಬಾರದು ಎಂಬುದೇ ನಮ್ಮ ಆಶಯ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಸಿಎಂ ಯೋಗಿ ಆದಿತ್ಯನಾಥ್ ರ ಬಳಿ ನಾಲ್ಕೈದು ಜೊತೆ ಬಟ್ಟೆ ಬಿಟ್ಟರೆ ಏನೂ ಇಲ್ಲವೆಂದು ಹೇಳಲಾಗಿದೆ. ಹಣ, ಆಸ್ತಿಯ ಮೇಲೆ ಯಾವುದೇ ಲೋಭ ಇಲ್ಲದೆ ಜನರ ಸೇವೆಗಾಗಿಯೇ ಬದುಕುತ್ತಿರುವ ವ್ಯಕ್ತಿ ಯೋಗಿ ಆದಿತ್ಯನಾಥ್. ಸ್ನೇಹಿತರೇ, ಅಧಿಕಾರ ಸಿಕ್ಕರೆ ಸಾಕು ಕೋಟ್ಯಂತರ ಹಣವನ್ನ ಗುಳುಂ ಮಾಡುವವರ ನಡುವೆ ಇಂತಹ ನಾಯಕರು ಇರುವುದು ಅಪರೂಪವೇ ಸರಿ. ಅವರು ಯಾವುದೇ ಪಕ್ಷವಾಗಿರಲಿ ನಿಷ್ಠಾವಂತರಾಗಿದ್ದು ಜನಪರ ಇದ್ದರೆ ಅವರನ್ನ ಹೊಗಳುವುದರಲ್ಲಿ ತಪ್ಪೇನಿಲ್ಲ. ಒಟ್ಟಿನಲ್ಲಿ ನಮ್ಮಿಂದ ನಮ್ಮಣ್ಣನಿಗೆ ಕೆಟ್ಟ ಹೆಸರು ಬರಬಾರದು ಎಂದು ಯೋಚಿಸುವ ತಂಗಿ, ಜನಪರ ಕೆಲಸಗಳಲ್ಲಿ ತೊಡಗಿರುವ ಅಣ್ಣ, ಎಂತಹ ಆದರ್ಶ ಕುಟುಂಬ ಅಲ್ಲವೇ..ಸ್ನೇಹಿತರೇ, ಜನಪರ ಇರುವ ನಿಮ್ಮ ನೆಚ್ಚಿನ ರಾಜಕಾರಣಿ ಯಾರೆಂದು ಅನಿಸಿಕೆ ತಿಳಿಸಿ..