Advertisements

ಪಾರ್ಲೆ ಎಂಬ ಸ್ವದೇಶಿ ಬ್ರ್ಯಾಂಡ್ ನ್ನು ನುಂಗಿದ ಕೋಕಾ ಕೋಲಾ ! ಒಂದು ಕಾಲದಲ್ಲಿ ಭಾರತವನ್ನು ಹಂಗಿಸಿದ್ದ ಕೋಕಾ ಕೋಲಾ ಇಂದು ನಮ್ಮ ದೇಶದ ನೆಚ್ಚಿನ ಬ್ರ್ಯಾಂಡ್ !

Kannada Mahiti

ಕೋಕಾ ಕೋಲಾ ಭಾರತಕ್ಕೆ ಮೊದಲು ಕಾಲಿಟ್ಟಿದ್ದು 1956ರಲ್ಲಿ. 6 ಲಕ್ಷ ರೂಪಾಯಿ ಬಂಡವಾಳ ಹೂಡಿ ಕೊನೆಗೆ ಇಪ್ಪತ್ತು ವರ್ಷಗಳ ನಂತರ ವಾಪಸ್ಸು ಹೋಗುವಾಗ 2.5 ಕೋಟಿ ಲಾಭ ಗಳಿಸಿದ್ದರು. ವಾಪಸ್ಸು ಹೋಗಿದ್ದು ಯಾಕೆ? 1973 ರಲ್ಲಿ ಇಂದಿರಾ ಗಾಂಧಿಯವರು ಹೊಸ ವಿದೇಶಿ ವಿನಿಮಯ ಕಾಯ್ದೆಯನ್ನು ತರುತ್ತಾರೆ. ಅದೇ FERA ( Foreign Exchange and Reserve Act). ಅದರ ಪ್ರಕಾರ ಯಾವುದೇ ವಿದೇಶಿ ಕಂಪನಿಯಿರಲಿ ಭಾರತದಲ್ಲಿ ಅದರದ್ದು ಕೇವಲ 40% ಮಾತ್ರ ಫಾರಿನ್ ಹೋಲ್ಡಿಂಗ್ ಇರಬಹುದಿತ್ತು. ಇನ್ನುಳಿದದ್ದು ನಮ್ಮ ಭಾರತದ್ದೇ ಆಗಿರಬೇಕಿತ್ತು.

Advertisements

ಅಷ್ಟೇ ಅಲ್ಲ, ರಾಸಾಯನಿಕ ಉತ್ಪನ್ನಗಳಿದ್ದರೆ ಅದರಲ್ಲಿರುವ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ಕೊಡಬೇಕಿತ್ತು. ಕೋಕಾ ಕೋಲಾ ಇದಕ್ಕೆ ಒಪ್ಪುವುದಿಲ್ಲ. ಭಾರತದಿಂದ ಹೋಗುತ್ತಾರೆ. ಭಾರತದಲ್ಲಿ ತಮ್ಮ ವಹಿವಾಟನ್ನು ಮುಚ್ಚಿ ಇವರು ಅಮೇರಿಕಾದಲ್ಲಿ ಮಾಡಿದ್ದೇನು ಗೊತ್ತಾ ‘Fuck India’ Campaign. ಕೋಕಾ ಕೋಲಾ ಹೀಗೆ ಮಾಡಿತ್ತು ಎನ್ನುವುದನ್ನು ನಾವು ಇಂದು ಮರೆತಿದ್ದೇವೆ! ನಮ್ಮ ಕಾಯ್ದೆಗೆ ಒಪ್ಪಿಕೊಳ್ಳದೆ ಹೋದವರಲ್ಲಿ IBM ಕೂಡ ಇನ್ನೊಂದು ಕಂಪನಿ. ಆದರೆ ಕೋಕಾ ಕೋಲಾ ತರಹ ಯಾರೂ ಮಾಡಿರಲಿಲ್ಲ. ಅಷ್ಟೇ ಯಾಕೆ ಬಹಳಷ್ಟು ಕಂಪನಿಗಳು ಭಾರತದ ಕಾಯ್ದೆಯನ್ನು ಒಪ್ಪಿಕೊಂಡು ಇಲ್ಲೆ ವ್ಯಾಪಾರ ಮುಂದುವರಿಸಿದರು.

ಮತ್ತೆ ಕೋಕಾ ಕೋಲಾ ಭಾರತಕ್ಕೆ ಎಂಟ್ರಿ ಕೊಟ್ಟಿದ್ದು ಯಾವಾಗ? 1992ರಲ್ಲಿ ಭಾರತವು ಆರ್ಥಿಕ ಬೆಳೆವಣಿಗೆಗೆ ತೆರೆದ ಮಾರುಕಟ್ಟೆ ಆದಾಗ ಇವರು ಪುನಃ ಪ್ರವೇಶಿಸುತ್ತಾರೆ. ಇಂದು ಭಾರತದಲ್ಲಿ ಅವರ ವಹಿವಾಟು ಪ್ರತಿವರ್ಷ ಸರಿಸುಮಾರು 2500 ಕೋಟಿ. ನಿಮಗೆ ಲಿಮ್ಕಾ, ಮಾಜಾ, ಗೋಲ್ಡ್ ಸ್ಪಾಟ್ ಇವೆಲ್ಲ ಗೊತ್ತಿರಬಹುದು. ಥಂಪ್ಸ್ ಅಪ್ ಕೇಳಿರದವರು ಬಹಳ ಕಡಿಮೆ. ಅವೆಲ್ಲ ನಮ್ಮದೇ ಲೋಕಲ್ ಬ್ಯಾಂಡ್ ಗೊತ್ತೇ? ಪಾರ್ಲೇ ಅವುಗಳನ್ನು ತಯಾರಿಸುತ್ತಿತ್ತು. ಪಾರ್ಲೆಯಲ್ಲಿ ಮೂರು ಬಗೆಯ ಉತ್ಪನ್ನಗಳಿವೆ. ಪಾರ್ಲೆ ಬಿಸ್ಕತ್ತು ಮಾಡುವ ಕಂಪನಿ, ಪಾರ್ಲೆ ಸಾಫ್ಟ್ ಡ್ರಿಂಕ್ಸ್, ಹಾಗೂ ಬಿಸ್ಲರಿ ಬ್ರ್ಯಾಂಡ್. ಸಾಫ್ಟ್ ಡ್ರಿಂಕ್ ವಿಭಾಗವನ್ನು ಪಾರ್ಲೆ ಅಗ್ರೋ ಎನ್ನುತ್ತಾರೆ. ಫ್ರೋಟಿ ಇದೆಯಲ್ಲ ಅದು ಇವರದ್ದೇ. 1993 ರಲ್ಲಿ ಕೋಕಾ ಕೋಲಾ ಮತ್ತೆ ಭಾರತಕ್ಕೆ ಬರುತ್ತದೆ. ಅವರ ಹತ್ತಿರ ಇಲ್ಲಿಯ ಸ್ಪರ್ಧೆ ಎದುರಿಸಲು ಆಗುವುದಿಲ್ಲ. ಆಗ ಪಾರ್ಲೆಯ ಥಮ್ಸ್ ಅಪ್, ಸಿಟ್ರಾ, ಫಾಂಟಾ, ಮಾಜಾ, ಲಿಮ್ಕಾ ಇವೆಲ್ಲ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದವು.

ಒಟ್ಟೂ ಸಾಫ್ಟ್ ಡ್ರಿಂಕ್ಸ್ ಮಾರುಕಟ್ಟೆಯ 60% ಪಾರ್ಲೆಯದ್ದಾಗಿತ್ತು. ಏನು ಮಾಡುವುದು? 1999ರಲ್ಲಿ ನಮ್ಮ ಸ್ವದೇಶಿ ಕಂಪನಿಯಾದ ಪಾರ್ಲೆಯ ಸಾಫ್ಟ್ ಡ್ರಿಂಕ್ ವಿಭಾಗವನ್ನು ಅಮೇರಿಕನ್ ಕಂಪನಿ ಕೋಕಾ ಕೋಲಾ ಖರೀದಿಸುತ್ತದೆ. 40 ಮಿಲಿಯನ್ ಡಾಲರ್ ಗೆ ಅವರು ತಮ್ಮ ಒಡೆತನದ ಹಕ್ಕನ್ನು ಪಡೆಯುತ್ತಾರೆ. ಹೀಗೆ ಒಂದು ಸ್ವದೇಶಿ ಬ್ರ್ಯಾಂಡ್ ನ ಕಥೆ ವಿದೇಶಿಯರ ಕೈಗೆ ಸಿಗುತ್ತದೆ. ಕೋಕಾ ಕೋಲಾ ಆ ಕಂಪನಿಯನ್ನು ಖರೀದಿ ಮಾಡಿದ ನಂತರ, ಪೆಪ್ಸಿಯೂ ಮಾರುಕಟ್ಟೆಗೆ ಲಗ್ಗೆ ಇಟ್ಟ ನಂತರದಲ್ಲಿ ನಮ್ಮ ಅದೆಷ್ಟೋ ಸ್ವದೇಶಿ ಕಂಪನಿಗಳು ಮುಚ್ಚಿದವು. ಪಾರ್ಲೆ ಒಂದು ಉದಾಹರಣೆ ಅಷ್ಟೇ. ತಮಿಳುನಾಡಿನಲ್ಲಿ ಇವತ್ತಿಗೂ ನೂರ ವರ್ಷಗಳ ಹಿಂದಿನ ಸಾಫ್ಟ್ ಡ್ರಿಂಕ್ಸ್ ಬ್ರಾಂಡ್ ನೋಡಬಹುದು. ಹೇಗೋ ಉಳಿದುಕೊಂಡಿವೆ. ಒಟ್ಟಿನಲ್ಲಿ,
ಒಂದು ಕಾಲದಲ್ಲಿ ‘Fuck India’ Campaign ಮಾಡಿ ಭಾರತವನ್ನು ಹಂಗಿಸಿದ್ದ ಕೋಕಾ ಕೋಲಾ ಕಂಪನಿ ಇಂದು ನಮ್ಮ ದೇಶದ ನೆಚ್ಚಿನ ಬ್ರ್ಯಾಂಡ್ !