Advertisements

ಬಡ ಮಹಿಳೆಯ ಗುಡಿಸಲಿಗೆ ಊಟಕ್ಕೆ ಹೋದ ಕಲೆಕ್ಟರ್.. ನಂತರ ಮಾಡಿದ್ದೇನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಒಂದು ಜಿಲ್ಲೆಯ ಕಲೆಕ್ಟರ್ ಅಥವಾ ಐ.ಎ.ಎಸ್ ಅಧಿಕಾರಿಯೆಂದರೆ ಅವರಿಗೆ ನೂರಾರು ಕೆಲಸಗಳಿರುತ್ತವೆ.. ಆದರೆ ಇಲ್ಲೊಬ್ಬ ಕಲೆಕ್ಟರ್ 80 ವರ್ಷದ ಅಜ್ಜಿಯ ಗುಡಿಸಲಿನ ಮನೆಯ ಮುಂದೆ ನಿಂತುಕೊಂಡು ಕಾಯುತ್ತಿದ್ದರು.. ಅದಕ್ಕೆ ಕಾರಣ ತಿಳಿದರೆ ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡುತ್ತೀರಾ. ಈಗಿನ ಕಾಲದಲ್ಲೂ ಕೂಡ ಇಂತಹ ಅಧಿಕಾರಿಗಳು ಇದ್ದಾರಾ ಎಂದು ಅನಿಸುತ್ತದೆ.. ಅಸಲಿಗೆ ಈ ವ್ಯಕ್ತಿ ಯಾರು? ಈ ಘಟನೆ ನಡೆದಿರುವುದು ಎಲ್ಲಿ ಎಂಬುದನ್ನ ತಿಳಿಯೋಣ.. ಈ ಘಟನೆ ಕೇಳಿ ಬರುತ್ತಿರುವುದು ತಮಿಳುನಾಡಿನ ಕರೂರು ಜಿಲ್ಲೆಯಿಂದ.

Advertisements

ಅಲ್ಲಿನ ಐ.ಎ.ಎಸ್ ಅಧಿಕಾರಿ ನಗನ್ ಮಾಡಿರುವ ಈ ಕೆಲಸ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲಿನ 80 ವರ್ಷದ ವಯಸ್ಸಾದ ಮಹಿಳೆ ಒಂದು ಹೊತ್ತಿನ ಊಟಕ್ಕೆ ತುಂಬಾ ಕಷ್ಟಪಡುತ್ತಿದ್ದರು.. ಅವರಿಗೆ ಎದ್ದು ಕೂರಲು ಸಹ ಕಷ್ಟವಾಗುತ್ತಿತ್ತು.. ಈ ಎಲ್ಲಾ ವಿಚಾರಗಳನ್ನು ಮನೆಯ ಹತ್ತಿರದಲ್ಲಿದ್ದ ಒಬ್ಬ ಹುಡುಗ ಇದನ್ನು ಪತ್ರದಲ್ಲಿ ಬರೆದು ಅಲ್ಲಿನ ಕಲೆಕ್ಟರ್ ಗೆ ಪೋಸ್ಟ್ ಮಾಡಿದ್ದಾರೆ.. ಈ ವಿಷಯ ತಿಳಿಯುತ್ತಿದ್ದಂತೆಯೇ ನಗನ್ ಅವರು ಮರುದಿನವೇ ತನ್ನ ಹೆಂಡತಿಯ ಕೈಯಲ್ಲಿ ಅಡುಗೆ ಮಾಡಿಸಿಕೊಂಡು ಆ ಅಜ್ಜಿಯ ಮನೆಗೆ ಹೋಗುತ್ತಾರೆ.. ಮತ್ತು ಅವರ ಜೊತೆ ಕೂತು ದಯವಿಟ್ಟು ಊಟವನ್ನ ಮಾಡಿ ಎಂದು ಒಟ್ಟಿಗೆ ಊಟ ಮಾಡುತ್ತಾರೆ‌‌..

ಊಟ ಮುಗಿಸದ ಮೇಲೆ ಅಜ್ಜಿಗೆ ಪ್ರತೀ ತಿಂಗಳು ಪಿಂಚಣಿ ಬರುವಂತೆ ಮಾಡಿಕೊಟ್ಟಿದ್ದಾರೆ..  ಮತ್ತು ಅವರಿಗೆ ಪತ್ರವನ್ನು ನೀಡಿ ಧೈರ್ಯದಿಂದ ಇರು, ನಿನಗೆ ಪ್ರತಿ ತಿಂಗಳು ಸರ್ಕಾರದಿಂದ ಹಣ ಬರುತ್ತದೆ.. ಮತ್ತು ರೇಷನ್ ಕೂಡ ಬರುತ್ತದೆ. ನಿನಗೆ ಏನೇ ತೊಂದರೆಯಾದರೂ ಕೂಡ ನನಗೆ ಕರೆ ಮಾಡು, ನಾನು ನೋಡಿಕೊಳ್ಳುತ್ತೇನೆ ಎಂದು ಧೈರ್ಯವನ್ನು ತುಂಬಿದ್ದಾರೆ‌‌. ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಸಹ ತಮ್ಮ ಕೆಲಸಗಳನ್ನು ಬಿಟ್ಟು ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ.. ಇದೇ ಅಲ್ಲವೇ ನಿಜವಾದ ಸಮಾಜ ಸೇವೆ ಅಂದರೆ. ಇನ್ನೂ ಇವರ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಶ್ಲಾಘಿಸಿದ್ದಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಸಿಕೆ ತಿಳಿಸಿ..