Advertisements

ಕಾಮಿಡಿ ಕಿಂಗ್ ಚಿಕ್ಕಣ್ಣ ಅವರ ಮನೆ ಹೇಗಿದೆ? ಮೊದಲ ಬಾರಿ ನೋಡಿ.. ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ತಮ್ಮ ವಿಭಿನ್ನವಾದ ಹಾಸ್ಯದ ಶೈಲಿಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದಿರುವ ಕಾಮಿಡಿ ಕಿಂಗ್ ಚಿಕ್ಕಣ್ಣ ಅವರ ಮನೆ ಹೇಗಿದೆ ಮತ್ತು ಚಿಕ್ಕಣ್ಣ ಅವರ ಒಂದು ದಿನದ ಸಂಭಾವನೆ ಎಷ್ಟು ಎಂದು ನೋಡೊಣ.. ಚಿಕ್ಕಣ್ಣ ಅವರು 1986 ರಲ್ಲಿ ಮೈಸೂರಿನ ಬಲ್ಲಹಳ್ಳಿ ಎಂಬುವ ಚಿಕ್ಕ ಹಳ್ಳಿಯಲ್ಲಿ ಜನಿಸಿದವರು. ಚಿಕ್ಕಣ್ಣ ಅವರು ಶಾಲಾ ದಿನಗಳಿಂದ ಇಡಿದು ನಾಟಕಗಳಲ್ಲಿ ನಟಿಸುತ್ತಾ ಬಂದಿದ್ದಾರೆ.. ಇದಾದ ನಂತರ ಉದಯ ಟಿವಿಯಲ್ಲಿ ನಿರೂಪಣೆ, ಕುರಿಬಾಂಡ್, ಕಾಮಿಡಿ ಕಿಲಾಡಿಗಳು ಸೇರಿಂದತೆ ಸಾಕಷ್ಟು ಧಾರವಾಹಿಗಳಲ್ಲಿ ಕೂಡ ನಟಿಸಿದ್ದಾರೆ.

Advertisements

ಇವರು ತಮ್ಮ ಆರಂಭದ ದಿನಗಳಲ್ಲಿ ದಿನಕ್ಕೆ 200 ರೂಪಾಯಿ ಸಂಬಳ ಪಡೆಯುತ್ತಿದ್ದರಂತೆ.. ಚಿಕ್ಕಣ್ಣ ಅವರಿಗೆ ಅತೀ ದೊಡ್ಡ ಬ್ರೇಕ್ ಸಿಕ್ಕಿದ್ದು ಯಶ್ ನಟನೆಯ ಕಿರಾತಕ ಸಿನಿಮಾ ಮೂಲಕ. ಈ ಚಿತ್ರದ ಯಶಸ್ಸಿನ ನಂತರ ಕೆಲವೇ ವರ್ಷಗಳಲ್ಲಿ ಚಿಕ್ಕಣ್ಣ ಅವರು ಕನ್ನಡ ಚಿತ್ರದ ನಂಬರ್ ಒನ್ ನಟನಾಗಿ ಖ್ಯಾತಿ ಪಡೆದರು.. ಈಗಾಗಲೇ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಚಿಕ್ಕಣ್ಣ ಅವರು ಮೈಸೂರಿನ ಬಳಿ ಫಾರ್ಮ್ ಹೌಸ್ ಖರೀದಿಸಿದ್ದು ಕುರಿ ಮತ್ತು ಹಸುಗಳ ಸಾಕಾಣಿಕೆ ಮಾಡುತ್ತಿದ್ದಾರೆ.

ಇದೀಗ ಚಿಕ್ಕಣ್ಣ ಅವರು ನಾಯಕ ನಟರಾಗಿ ಉಪಾಧ್ಯಕ್ಷ ಚಿತ್ರದ ಮೂಲಕ ಜನರನ್ನು ರಂಜಿಸಲು ಬರುತ್ತಿದ್ದಾರೆ.. ಈ ಚಿತ್ರಕ್ಕೆ ದುಬಾರಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಚಿಕ್ಕಣ್ಣ ಅವರು ಕಾಮಿಡಿ ಪಾತ್ರದಲ್ಲಿ ನಟಿಸಲು ಒಂದು ದಿನಕ್ಕೆ ಬರೋಬ್ಬರಿ ಮೂರರಿಂದ ನಾಲ್ಕು ಲಕ್ಷ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.. ಚಿಕ್ಕಣ್ಣ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.