Advertisements

ಪ್ರೀತಿಸಿ ಮದುವೆ ಆಗುತ್ತಿರುವ ಕಾಮಿಡಿ ಕಿಲಾಡಿಗಳ ಜೋಡಿ.. ಶುಭ ಅರೈಸಿ!

Cinema

ಪ್ರಿಯ ಓದುಗರೇ ಕನ್ನಡಿಗರನ್ನು ರಂಜಿಸಲೆಂದು ಅದೆಷ್ಟೋ ಶೋಗಳು ಬಂದವು. ಅದರಲ್ಲಿ ಎಲ್ಲರನ್ನೂ ಅತಿ ಹೆಚ್ಚು ರಂಜಿಸಿದ ಶೋ ಎಂದರೆ “ಕಾಮಿಡಿ ಕಿಲಾಡಿಗಳು” ಶನಿವಾರ ಮತ್ತು ಭಾನುವಾರ ಬಂತೆಂದರೆ ಸಾಕು ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲರೂ ಮನೆಯ ಮುಂದೆ ಹಾಜರಾಗುತ್ತಿದ್ದರು. ಅಷ್ಟರಮಟ್ಟಿಗೆ ಕಾಮಿಡಿ ಕಿಲಾಡಿ ಹೆಸರಾಗಿತ್ತು. ಅಷ್ಟೇ ಯಾಕೆ ಕೆಲವರನ್ನು ಸಿನಿಮಾರಂಗದಲ್ಲಿ ಕಾಣುವಂತೆ ಮಾಡಿದ್ದು ಇದೆ ಕಾಮಿಡಿ ಕಿಲಾಡಿಗಳು ಶೋ. ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದ ಜೋಡಿಗಳು, ನಿಜಜೀವನದಲ್ಲಿಯೂ ಒಂದಾಗಿದ್ದಾರೆ. ಅದು ಯಾರು ಅಂತ ಹೇಳ್ತೀವಿ ಈ ಸ್ಟೋರಿ ಓದಿ. ಕಾಮಿಡಿ ಕಿಲಾಡಿ ಎಂದಾಗ ಮೊದಲು ನೆನಪಾಗುವುದು ಶಿವರಾಜ್ ಕೆ ಆರ್ ಪೇಟೆ, ನಯನ, ಗೋವಿಂದೇಗೌಡ,ಇನ್ನು ಹಲವರು.

[widget id=”custom_html-3″]

Advertisements

ಇವರಲ್ಲಿ ಮೂರು ಸೋಗಳಲ್ಲಿ ಭಾಗವಹಿಸಿ ಗೆದ್ದು, ತದನಂತರ ತಮ್ಮ ಜೀವನ ಸಂಗಾತಿಯನ್ನು ಸಹ ಈ ವೇದಿಕೆಯಿಂದ ಆರಿಸಿಕೊಂಡಿದ್ದು ಸಂತಸದ ಸಂಗತಿ. ಹೌದು ಶೋನಲ್ಲಿ ಹೆಸರುಮಾಡಿದ್ದ ಗೋವಿಂದೇಗೌಡ ಹಾಗೂ ದಿವ್ಯ ಎರಡು ವರ್ಷದ ಹಿಂದೆ ವಿವಾಹವಾಗಿದ್ದಾರೆ. ಅದರಂತೆ ನೈನಾ ಕೂಡ ಅದ್ದೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. ಇದೀಗ ಅದೇ ಸೋನಾ ಮತ್ತಿಬ್ಬರು ಸಹ ವಿವಾಹ ಬಂಧನಕ್ಕೆ ರೆಡಿಯಾಗಿದ್ದಾರೆ. ಹೌದು. ಕುಳ್ಳಗಿದ್ದರೂ ತಮ್ಮ ಆತ್ಮಬಲ, ಪ್ರತಿಭೆಯಿಂದ ಜನರ ಮನಗೆದ್ದವರು ಸಂಜು ಬಸಯ್ಯ ಅವರು. ಇವರು ತಮ್ಮ 8 ವರ್ಷದ ಪ್ರೇಯಸಿ ಬಳ್ಳಾರಿಯ ಪಲ್ಲವಿ ಎಂಬುವರೊಂದಿಗೆ ವಿವಾಹವಾಗುತ್ತಿದ್ದಾರೆ. ಹಾಗೆ ಹಿತೇಶ್ ಕೂಡ ತಾವು ಪ್ರೀತಿಸಿದ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

[widget id=”custom_html-3″]

ಹೌದು.. ಹತ್ತು ವರ್ಷದ ಹಿಂದೆ ಊರಿನ ದೇವಸ್ಥಾನದಲ್ಲಿ ನೋಡಿದ ಸ್ವಾತಿಯನ್ನು ಪ್ರೀತಿಸಿ ವಿವಾಹವಾಗುತ್ತಿದ್ದು, ಇದೀಗ ಅದ್ದೂರಿಯ ನಿಶ್ಚಿತಾರ್ಥ ನೆರವೇರಿಸಿ ಕೊಂಡಿದ್ದಾರೆ. ಹಾಗೆ ನಮ್ಮನ್ನು ಎಲ್ಲರೂ ಆಶೀರ್ವಾದ ಮಾಡಿ ಹರಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಈ ಡಿಸೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ, ಮುಂದಿನ ವರ್ಷದ ಡಿಸೆಂಬರ್ ನಲ್ಲಿ ವಿವಾಹವಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ಎಲ್ಲ ಜೋಡಿಗಳಿಗೂ ಶುಭವಾಗಲಿ. ಇವರ ದಾಂಪತ್ಯ ಜೀವನ ಸುಖವಾಗಿರಲೆಂದು ಹಾರೈಸೋಣ.