Advertisements

ಕಾಮಿಡಿ ಕಿಲಾಡಿ ಖ್ಯಾತ ನಟ ಸಂತು ಮದುವೆ ಹೇಗಿತ್ತು! ಹುಡುಗಿ ಯಾರು ಗೊತ್ತಾ? ನೋಡಿ..

Entertainment

ನಮಸ್ತೆ ಸ್ನೇಹಿತರೆ, ಕಾಮಿಡಿ ಕಿಲಾಡಿ ರಿಯಾಲಿಟಿ ಶೋ‌ ಸೀಸನ್ ಮೂರರ ರನ್ನರ್ ಆಫ್ ಆಗಿದ್ದ ಹಾಸನದ ಸಂತೋಷ ಲಾಕ್ ಡೌನ್ ಇದ್ದ ಸಮಯದಲ್ಲಿ ಸರಳವಾಗಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ನಿಗದಿಯಾಗಿದ್ದ ಅನೇಕ ಮದುವೆಗಳು ಲಾಕ್ ಡೌನ್ ಕಾರಣದಿಂದ ಮುಂದಕ್ಕೆ ಹೋಗಿದ್ದವು.. ಇನ್ನೂ ಕೆಲವು ಮದುವೆಗಳು ಮುಹೂರ್ತ ಮತ್ತೆ ಸಿಗದ ಕಾರಣ ಜಿಲ್ಲಾಡಳಿತದ ಅನುಮತಿಯಿಂದ ಲಾಕ್ ಡೌನ್ ವೇಳೆ ಮದುವೆಗಳು ನಡೆದಿವೆ. ಇದರ ಸಾಲಿಗೆ ಸಂತೋಷ್ ಸೇರಿದ್ದಾರೆ. ಕಾಮಿಡಿ ಕಿಲಾಡಿಗಳು ಸೀಸನ್ ಮೂರರಲ್ಲಿ ಖ್ಯಾತಿಯನ್ನು ಹೊಂದಿದ್ದ ಸಂತೋಷ್ ಅವರ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..

Advertisements

ಇನ್ನೂ ಈ ಮದುವೆಯಲಲ್ಲಿ ಕೇವಲ 20 ಮಂದಿ ಮಾತ್ರ ಇದ್ದರು. ಕುಟುಂಬದವರು, ಬಂದು ಬಳಗದವರು ಮತ್ತು ಗೆಳೆಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಗೆ ತಿರ್ಮಾನಿಸಲಾಗಿತ್ತು. ಆದರೆ ಲಾಕ್ ಡೌನ್ ಇದ್ದ ಕಾರಣ ಪೋಲಿಸರು ಅನುಮತಿಯನ್ನು ಪಡೆದು ಸರಳವಾಗಿ ಮದುವೆಯಾಗಿದ್ದಾರೆ.. ಸಂತೋಷ್ ಅವರ ಸಹ ನಟ ಮಡೈನೂರು ಮನು ಕೂಡ ಮದುವೆಯಲ್ಲಿ ಭಾಗಿಯಾಗಿದ್ದರು. ಇನ್ನೂ ಹಾಸನ ಜಿಲ್ಲೆ ನರಸಿಪುರ ತಾಲ್ಲೂಕಿನ ಉದ್ದೂರು, ಹೊಸಹಳ್ಳಿಯವರಾದ ಸಂತೋಷ್ ಈಗಾಗಲೇ ಹನ್ನೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಮೂಲಕ ಜನಪ್ರಿಯರಾದ ಸಂತೋಷ್ ಅವರಿಗೆ ಮತ್ತಷ್ಟು ಅವಕಾಶಗಳು ಸಿಗುತ್ತಿವೆ..

ಲಾಕ್ ಡೌನ್ ಇದ್ದ ವೇಳೆ ಹೆಚ್ಚು ಜನರನ್ನ ಮದುವೆಗೆ ಆಹ್ವಾನಿಸಲು ಅವಕಾಶವಿರಲಿಲ್ಲ. ಸಂತೋಷ್ ಅವರ ಅದ್ದೂರಿ ಮದುವೆಗೆ ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದ್ದರು.. ಆದರೆ ಆ ಸಂಭ್ರಮಕ್ಕೆ ಲಾಕ್ ಡೌನ್ ಅಡ್ಡಿಯಾಗಿತ್ತು. ಈ ಕಾರಣದಿಂದ ನೂರಾರು ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಇದ್ದರು ಅವರನ್ನ ಆಹ್ವಾನಿಸಲಾಗದೆ ಸಂತೋಷ್ ಅವರು ಸರಳವಾಗಿ ವಿವಾಹವಾಗಿದ್ದಾರೆ. ಸಂತೋಷ್ ಮದುವೆಯ ಕ್ಷಣಗಳನ್ನು ಮಡೈನೂರ್ ಮನು ಅವರು ಹಂಚಿಕೊಂಡಿದ್ದಾರೆ.. ಇನ್ನೂ ಕಾಮಿಡಿ ಕಿಲಾಡಿಗಳು ಸೀಸನ್ ಮೂರರಲ್ಲಿ ರಾಕೇಶ್ ಪೂಜಾರಿ ವಿಜೇತರಾಗಿದ್ದರು. ಅವರಿಗೆ ನಿಕಟ ಪೈಪೋಟಿ ನೀಡಿದ್ದ ಸಂತೋಷ್ ರನ್ನರ್ ಆಫ್ ಆಗಿದ್ದರು..