Advertisements

ಸುಮಲತಾ ಅವರಿಗೆ ಕೊರೊನಾ ಪಾಸಿಟಿವ್, ಸಿಎಂ ಜೊತೆ ಇದ್ದ ಇತರ ರಾಜಕಾರಣಗಳಿಗೂ ಶುರುವಾಯ್ತು ಆತಂಕ.

News

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜಕಾರಣಿಗಳಿಗೂ ಸಹ ಸೋಂಕು ಕಾಣಿಸಿಕೊಳ್ಳುತ್ತಿದೆ, ಸಿಎಂ ಯಡಿಯೂರಪ್ಪ ಹಾಗೂ ಆರ್ ಅಶೋಕ್ ಅವರಿಗೂ ಸಹ ಕರೋನ ಆತಂಕವನ್ನುಂಟು ಮಾಡಿದೆ.

Advertisements

ಕಳೆದ ಗುರುವಾರ ವಿಧಾನಸೌಧದಲ್ಲಿ ಅಂಬರೀಶ್ ಸ್ಮಾರಕದ ನಿರ್ಮಾಣದ ಕುರಿತಾಗಿ ಬಿಎಸ್. ಯಡಿಯೂರಪ್ಪ ಜೊತೆಗೆ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅವರು ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿ ಸುಮಲತಾ, ದೊಡ್ಡಣ್ಣ ರಾಕ್ ಲೈನ್ ವೆಂಕಟೇಶ್, ಸೇರಿದಂತೆ ಇನ್ನೂ ಹಲವರ ಜೊತೆಗೆ ಯಡಿಯೂರಪ್ಪ ಅವರು ಇದ್ದರು. ಇದೀಗ ಸುಮಲತಾ ಅಂಬರೀಷ್, ಜನಾರ್ದನ ಪೂಜಾರಿ, ಪ್ರಾಣೇಶ್, ಡಾ. ರಂಗನಾಥ್. ಡಾ. ಭರತ್ ಶೆಟ್ಟಿ ಸೇರಿದಂತೆ ಹಲವರಿಗೆ ಕೊರೊನ ಸೋಂಕು ಕಾಣಿಸಿಕೊಂಡಿದೆ.

ಈ ಸಭೆಯಲ್ಲಿ ಇನ್ನೊಂದು ಎಡವಟ್ಟಾಗಿತ್ತು, ಯಡಿಯೂರಪ್ಪ ಅವರು ಅಂಬರೀಷ್ ಸ್ಮಾರಕಕ್ಕೆ ಅನುಮತಿಯನ್ನು ನೀಡಿ 5 ಕೋಟಿ ರೂಪಾಯಿಯನ್ನು ಬಿಡುಗಡೆ ಮಡಿದ ಆದೇಶ ಪ್ರತಿಗೆ ಸುಮಲತಾ ಅವರು ಸಹಿಯನ್ನು ಹಾಕಿದ್ದರು. ಸುಮಲತಾ ಅವರು ಹಾಕಿದ ಪೆನ್ನಿನಲ್ಲೇ ಸಿಎಂ ಅವರು ಸಹ ಆದೇಶದ ಪ್ರತಿಗೆ ಸಹಿಯನ್ನು ಹಾಕಿದ್ದರು. ಹೀಗಾಗಿ ಸಿಎಂ ಯಡಿಯೂರಪ್ಪ ಅವರಿಗೂ ಕೊರೊನ ಭೀತಿ ಶುರುವಾಗಿದ್ದು, ಕ್ವಾರಂಟೀನ್ ಆತಂಕ ಎದುರಾಗಿದೆ ಎನ್ನಲಾಗಿದೆ.

ಆರ್.ಅಶೋಕ್ ಅವರಿಗೂ ಶುರುವಾಗಿದೆ ಕರೋನ ಆತಂಕ. ಹೌದು ಕಳೆದ ವಾರ ಆರ್ ಅಶೋಕ್ ಅವರು ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು ಹಲವು ನಾಯಕರನ್ನು ಭೇಟಿ ಮಾಡಿದ್ದರು. ನೆನ್ನೆಯ ದಿನ ಪ್ರಾಣೇಶ್ ಹಾಗೂ ಅವರ ಪತ್ನಿಗೆ ಸೋಂಕು ಹರಡಿದೆ ಎಂದು ಸಾಬೀತಾಗಿದೆ. ಆರ್ ಅಶೋಕ್ ಅವರು ಪ್ರವಾಸಕ್ಕೆ ಹೋದಾಗ ಪ್ರಾಣೇಶ್ ಅವರನ್ನು ಭೇಟಿಯಾಗಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಅವರಿಗೂ ಸಹ ಕ್ವಾರಂಟೀನ್ ಭೀತಿ ಶುರುವಾಗಿದೆ.