Advertisements

ಯಾರಿಗಾದರು ಪೋನ್ ಮಾಡಿದರೆ ಕೆಮ್ಮುವ ದ್ವನಿ ಕೇಳುಸ್ತಿದಿಯಾ.? ಬಂದಿದೆ ಹೊಸ ಕೊರೊನಾ ಕಾಲರ್ ಟ್ಯೂನ್. ಎಚ್ಚರಿಕೆ!

Health News

ಕಳೆದ ಒಂದು ವಾರದಿಂದ ನೀವು ಯಾರಿಗಾದ್ರೂ ಪೋನ್ ಮಾಡಿದರೆ ತಕ್ಷಣ ಆ ಕಡೆಯಿಂದ ಕೇಳಿಸುವುದು ಕೆಮ್ಮುವ ದ್ವನಿ. ಹೌದು ಇದನ್ನ ಕೇಳಿದ ಅನೇಕ ಜನರು ಎನಪ್ಪ ಇನ್ನೂ ರಿಂಗ್ ಆಗಿಲ್ಲ ಆಗ್ಲೆ ಯಾರೋ ಕೆಮ್ಮುತ್ತಿದ್ದಾರಲ್ಲ ಅಂತ ನೀವು ಅಂದುಕೊಂಡಿರಬಹುದು.? ಇದಕೆಲ್ಲ ಕಾರಣ ಕೊರೊನಾ ಎಪೆಕ್ಟ್. ಈಗ ಇಡೀ ವೀಶ್ವಕ್ಕೆ ತಲೆನೋವಾಗಿ ಅಬ್ಬಿರೋ ಕೊರೊನಾ ವೈರಸ್.

Advertisements

ಹೌದು ಕೆಂದ್ರ ದೂರ ಸಂಪರ್ಕ ಇಲಾಕೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿಯಾದ ವಿಭಿನ್ನ ಪ್ರಯತ್ನವನ್ನು ಮಾಡಿದೆ. ನಾವು ಬೇರೆಯವರಿಗೆ ಪೋನ್ ಕಾಲ್ ಮಾಡಿ ಕನೆಕ್ಟ್ ಆಗುವ ಮಂಚೆ ಕೊರೊನಾ ವೈರಸ್ ನ ಎಚ್ಚರಿಕೆಯ ಬಗ್ಗೆ ಕಾಲರ್ ಟ್ಯೂನ್ ಸೆಟ್ ಮಾಡಲಾಗಿದೆ. ಈ ಟೋನ್ 30 ಸೆಕೆಂಡ್ ಗಳ ಕಾಲರ್ ಟೋನ್ ಇದಾಗಿದೆ. ಇದರಲ್ಲಿ ಕೊರೊನಾ ವೈರಸ್ ನಿಂದ ನಮ್ಮ‌ನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ. ಈ ಕಾಲರ್ ಟ್ಯೂನ್ ಅನ್ನು ತಮ್ಮ ಗ್ರಾಹಕರಿಗೆ ತಪ್ಪದೇ ಎಲ್ಲಾ ಟೆಲಿಕಾಂ ಸಂಸ್ಥೆಗಳು ಸೆಟ್ ಮಾಡುವಂತೆ ಆದೇಶಿಸಲಾಗಿದೆ. ಕೇಂದ್ರ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಸಚಿವಾಲಯದ ಮನವಿಯ ಮೇರೆಗೆ ಈ ರೀತಿಯ ಕಾಲರ್ ಟ್ಯೂನ್ ಸಿದ್ಧಪಡಿಸಿದೆ.

ಆದರೆ ಈಗಾಗಲೇ ಗ್ರಾಹಕರಿಗೆ ಸಿನಿಮಾ ಹಾಡುಗಳು ಇನ್ನಿತರ ಬಗೆಯ ಕಾಲರ್ ಟ್ಯೂನ್ಸ್ ಹೊಂದಿರುವುದರಿಂದ ಕೊರೊನಾವೈರಸ್ ಆಡಿಯೋ ಮೆಸೇಜ್ ಅನ್ವಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಈ ಅದೇಶವನ್ನು ಹೊರಡಿಸಿದ್ದು. ಬಿಎಸ್ಎನ್ಎಲ್ ಮತ್ತು ಜಿಯೋ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಗೊಳಿಸಿದ್ದು ಇನ್ನಿತರ ಟೆಲಿಕಾಂ ಸಂಸ್ಥೆಗಳೂ ಇದನ್ನ ಪಾಲಿಸಲೇಬೇಕಿದೆ.